Site icon Vistara News

Shah Rukh Khan: ಸೆಲ್ಫಿ ಕ್ಲಿಕ್ಕಿಸಲು ಬಂದ ಅಭಿಮಾನಿಯನ್ನು ತಳ್ಳಿ, ಪೋಸ್ ನೀಡಲು ನಿರಾಕರಿಸಿದ ಶಾರುಖ್‌ ಖಾನ್

Shah Rukh Khan refuses to click selfie

ಬೆಂಗಳೂರು: ನಟ ಶಾರುಖ್ ಖಾನ್ (Shah Rukh Khan) ಅವರು ಮುಂಬೈ ವಿಮಾನ ನಿಲ್ದಾಣದಲ್ಲಿ ವ್ಯಕ್ತಿಯೊಬ್ಬರು ಸೆಲ್ಫಿ ಕ್ಲಿಕ್ಕಿಸಲು ಮುಂದೆ ಬಂದಾಗ ಶಾರುಖ್‌ ಅವರನ್ನು ತಳ್ಳಿ ಪೋಸ್ ನೀಡಲು ನಿರಾಕರಿಸಿದ್ದಾರೆ. ಮೇ 3ರಂದು ಪಾಪರಾಜಿಗಳು (ಫೋಟೊಗ್ರಾಫ್‌ರಗಳು) ತಮ್ಮ ಖಾತೆಯಲ್ಲಿ ಈ ವಿಡಿಯೊವನ್ನು ಹಂಚಿಕೊಂಡಿದ್ದಾರೆ. ವಿಡಿಯೊದಲ್ಲಿ, ಶಾರುಖ್ ತನ್ನ ಮ್ಯಾನೇಜರ್‌ ಪೂಜಾ ದದ್ಲಾನಿ ಅವರೊಂದಿಗೆ ವಿಮಾನ ನಿಲ್ದಾಣದಿಂದ ನಿರ್ಗಮಿಸುತ್ತಿರುವುದು ಕಾಣಬಹುದು. ವಿಡಿಯೊ ವೈರಲ್‌ ಆಗುತ್ತಿದ್ದಂತೆ ನೆಟ್ಟಿಗರು ನಟನ ನಡೆಗೆ ಅಸಮಾಧಾನ ಹೊರಹಾಕಿದ್ದಾರೆ. ಇನ್ನೂ ಕೆಲವರು, ಸೆಲೆಬ್ರಿಟಿಗಳು ಮನುಷ್ಯರೇ ಎಂದು ಕಾಮೆಂಟ್‌ ಮಾಡಿದ್ದಾರೆ.

ವಿಮಾನ ನಿಲ್ದಾಣದಲ್ಲಿ ಪಾಪರಾಜಿಗಳು (ಫೋಟೊಗ್ರಾಫ್‌ರಗಳು) ಮತ್ತು ಅಭಿಮಾನಿಗಳು ಶಾರುಖ್ ಖಾನ್‌ ಅವರನ್ನು ಸ್ವಾಗತಿಸಿದರು. ಸ್ವಲ್ಪ ಸಮಯದ ನಂತರ, ಅಭಿಮಾನಿಯೊಬ್ಬರು ನಟನೊಂದಿಗೆ ಸೆಲ್ಫಿ ಕ್ಲಿಕ್ಕಿಸಲು ಮುಂದಾಗಿದ್ದಾರೆ. ಶಾರುಖ್‌ ಅವರನ್ನು ತಳ್ಳಿ ಪೋಸ್ ನೀಡಲು ನಿರಾಕರಿಸಿದ್ದಾರೆ. ಈ ವಿಡಿಯೊ ವೈರಲ್‌ ಆಗುತ್ತಿದ್ದಂತೆ ನೆಟ್ಟಿಗರು ನಟನನ್ನು ಕ್ಲಾಸ್‌ ತೆಗೆದುಕೊಂಡಿದ್ದಾರೆ. ʻʻಆ ಅಭಿಮಾನಿ ವಿಮಾನ ನಿಲ್ದಾಣದ ಸಿಬ್ಬಂದಿಯಾಗಿದ್ದು, ಶಾರುಖ್‌ ಅವರನ್ನು ಮುಟ್ಟಲಿಲ್ಲ. ಆದರೆ ಅಭಿಮಾನಿಯನ್ನು ಶಾರುಖ್‌ ತುಂಬಾ ಕೆಟ್ಟದಾಗಿ ಅವಮಾನಿಸಿದ್ದಾರೆ . ಇದು ಸೆಲೆಬ್ರಿಟಿಗಳ ನಿಜವಾದ ಮುಖʼʼಎಂದು ಕಾಮೆಂಟ್‌ ಮಾಡಿದರೆ, ಇನ್ನೊಬ್ಬರು ʻʻನಟನಿಗೆ ದುರಹಂಕಾರʼʼಎಂದು ಕಾಮೆಂಟ್‌ ಮಾಡಿದ್ದಾರೆ, ಮತ್ತೊಬ್ಬರು ʻʻಸೆಲೆಬ್ರಟಿಗಳು ಕೂಡ ಮನುಷ್ಯರು. ಎಲ್ಲಾ ಜನರಂತೆ ಅವರು ಕೂಡ. ಪಾಪರಾಜಿಗಳಿಂದ, ಇವೆಲ್ಲದರಿಂದ ಬೇಸತ್ತಿದ್ದಾರೆʼ ʼಎಂದು ನಟನನ್ನು ಸಮರ್ಥಸಿಕೊಂಡಿದ್ದಾರೆ. ಶಾರುಖ್ ಕಪ್ಪು ಟಿ-ಶರ್ಟ್, ಮ್ಯಾಚಿಂಗ್ ಲೆದರ್ ಜಾಕೆಟ್ ಧರಿಸಿದ್ದರು.

ಕಳೆದ ವಾರ, ರಾಜ್‌ಕುಮಾರ್ ಹಿರಾನಿ ಅವರ ಮುಂಬರುವ ಚಿತ್ರ ʻಡಂಕಿʼ ಚಿತ್ರೀಕರಣಕ್ಕಾಗಿ ಶಾರುಖ್ ಖಾನ್ ಕಾಶ್ಮೀರಕ್ಕೆ ಪ್ರಯಾಣ ಬೆಳೆಸಿದ್ದರು. ಫ್ಯಾನ್‌ ಪೇಜ್‌ಗಳಲ್ಲಿ ನಟ ತನ್ನ ಅಭಿಮಾನಿಗಳೊಂದಿಗೆ ಪೋಸ್ ನೀಡಿದ್ದಾರೆ. ವೈರಲ್‌ ಆಗಿರುವ ವಿಡಿಯೊದಲ್ಲಿ ಶ್ರೀನಗರ ವಿಮಾನ ನಿಲ್ದಾಣದಲ್ಲಿ ಅಭಿಮಾನಿಗಳು ಶಾರುಖ್‌ ಅವರ ಸೆಲ್ಫಿಗಾಗಿ ಮುಗಿಬಿದ್ದಿದ್ದರು.

ಇದನ್ನೂ ಓದಿ: Shah Rukh Khan: ಆರ್ಯನ್ ಖಾನ್ ಉಡುಪಿನ ಬ್ರ್ಯಾಂಡ್‌ ದುಬಾರಿ: ಒಂದು ಕಿಡ್ನಿ ಮಾರಿದರೂ ಬಟ್ಟೆ ಖರೀದಿಸಲು ಕಷ್ಟ ಅಂದ್ರು ನೆಟ್ಟಿಗರು!

ವಿಡಿಯೊ ವೈರಲ್‌ʼ

‘ಡಂಕಿ’ ಮಾತ್ರವಲ್ಲದೇ ‘ಜವಾನ್​’ ಸಿನಿಮಾದಲ್ಲೂ ಶಾರುಖ್​ ಖಾನ್​ ನಟಿಸುತ್ತಿದ್ದಾರೆ. ಈ ಚಿತ್ರಕ್ಕೆ ಅಟ್ಲಿ ಕುಮಾರ್​ ನಿರ್ದೇಶನ ಮಾಡುತ್ತಿದ್ದಾರೆ. ಶಾರುಖ್​ ಖಾನ್​ಗೆ ಜೋಡಿಯಾಗಿ ನಯನತಾರಾ ಅಭಿನಯಿಸಿದ್ದಾರೆ. ಜೂನ್​ 2ರಂದು ಬಿಡುಗಡೆ ಆಗಲಿರುವ ಈ ಸಿನಿಮಾದಲ್ಲಿ ವಿಜಯ್​ ಸೇತುಪತಿ ಕೂಡ ಪ್ರಮುಖ ಪಾತ್ರ ಮಾಡುತ್ತಿದ್ದಾರೆ. ಸಲ್ಮಾನ್ ಖಾನ್ ಅವರ ಟೈಗರ್ 3ಯಲ್ಲಿಯೂ ಶಾರುಖ್ ನಟಿಸುತ್ತಿದ್ದಾರೆ.

Exit mobile version