Site icon Vistara News

Shah Rukh Khan: ತಲೆ ಬೋಳಿಸಿದ ಹುಡುಗಿಯರೆಂದರೆ ಇಷ್ಟ ಎಂದ ಶಾರುಖ್‌ ಖಾನ್‌!

Shah Rukh Khan

ಬೆಂಗಳೂರು: ಶಾರುಖ್‌ ಖಾನ್‌ (Shah Rukh Khan) ಅಭಿನಯದ ʻಜವಾನ್‌ʼ (Jawan Movie) ಸಿನಿಮಾ ಹಿಟ್‌ ಆಗಿದೆ. ಜವಾನ್‌ ಬಿಡುಗಡೆಗೂ ಮುಂಚೆ ಪ್ರೇಕ್ಷಕರು ಇಷ್ಟ ಪಟ್ಟಿದ್ದು ಶಾರುಖ್‌ ಅವರ ಬೋಳು ತಲೆ ಲುಕ್‌. ಟ್ರೈಲರ್‌ ಬಿಡುಗಡೆಯಾದ ಕೂಡಲೇ ಶಾರುಖ್‌ ಲುಕ್‌ ಬಗ್ಗೆ ಸಾಕಷ್ಟು ಚರ್ಚೆಗಳು ಆದವು. ಈ ಬಗ್ಗೆ ಶಾರುಖ್‌ (bald look in Jawan ) ಪ್ರಸ್ತಾಪಿಸಿದ್ದಾರೆ. ಬೋಳು ತಲೆಯ ಲುಕ್‌ ಸ್ಕ್ರಿಪ್ಟ್‌ನ ಭಾಗವಾಗಿರಲಿಲ್ಲ. ಇದು ಸ್ಕ್ರಿಪ್ಟ್‌ನ ಭಾಗವಾಗಿದ್ದ ಗೆಟ್‌ ಅಪ್‌ನ ಒಂದು ಭಾಗವಾಗಿತ್ತು. ನನಗೆ ತಲೆ ಬೋಳಿಸಿದ ಹುಡುಗಿಯರೆಂದರೆ ಇಷ್ಟʼʼಎಂದು ಹೇಳಿದ್ದಾರೆ.

ಬೋಳು ತಲೆಯ ಲುಕ್‌ ಬಗ್ಗೆ ಶಾರುಖ್‌ ಮಾತನಾಡಿ ʻʻಈ ಲುಕ್‌ ಸ್ಕ್ರಿಪ್ಟ್‌ ಭಾಗವಾಗಿರಲಿಲ್ಲ. ಇದು ಸ್ಕ್ರಿಪ್ಟ್‌ನ ಭಾಗವಾಗಿದ್ದ ಗೆಟ್‌ಅಪ್‌ನ ಒಂದು ಭಾಗವಾಗಿತ್ತು.  ನಾನು ಸೋಮಾರಿತನದಿಂದ ಈ ಲುಕ್ ಆಯ್ಕೆ ಮಾಡಿಕೊಂಡೆ. ಏಕೆಂದರೆ ನಾನು ಈ ಲುಕ್ ಅನ್ನು ಆರಿಸಿದರೆ ಎರಡು ಗಂಟೆಗಳ ಕಾಲ ಮೇಕಪ್ ಮಾಡುವ ಅಗತ್ಯವಿರಲಿಲ್ಲ. ಅದಕ್ಕಾಗಿಯೇ ನಾನು ಆ ಲುಕ್‌ನಲ್ಲಿ ಕೆಲವು ದೃಶ್ಯಗಳನ್ನು ಮಾಡಿದ್ದೇನೆ” ಎಂದಿದ್ದಾರೆ. ʻʻನಾನು ಕೆಲವು ಸ್ನೇಹಿತರಿಗೆ ಪ್ರೋಮೊವನ್ನು ತೋರಿಸಿದ್ದರಿಂದ ತುಂಬಾ ಭಯಾನಕವಾಗಿದೆ. ಹುಡುಗಿಯರು ನಿಮ್ಮನ್ನು ಇಷ್ಟಪಡುವುದಿಲ್ಲ ಎಂದವರೂ ಇದೆ. ಹುಡುಗಿಯರು ಬೋಳು ಪುರುಷರನ್ನು ಇಷ್ಟಪಡುತ್ತಾರೆ ಎಂದು ನಾನು ಭಾವಿಸುತ್ತೇನೆ. ನನಗೆ ತಲೆ ಬೋಳಿಸಿದ ಹುಡುಗಿಯರೆಂದರೆ ಇಷ್ಟʼʼಎಂದು ತಮಾಷೆಯಾಗಿ ಹೇಳಿಕೊಂಡಿದ್ದಾರೆ.

ಚಿತ್ರದಲ್ಲಿ ಶಾರುಖ್, ಮೆಟ್ರೋ ರೈಲು ಹೈಜಾಕ್ ಸನ್ನಿವೇಶದಲ್ಲಿ ಬೋಳು ತಲೆಯ ಲುಕ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಆ್ಯಂಟಿ ಹೀರೊ ಪಾತ್ರದ ಬಗ್ಗೆ ಮಾತನಾಡಿರುವ ಶಾರುಖ್, “ವಾಸ್ತವವಾಗಿ, ನಾನು ಹೀರೊ ಆಗಿ ನಟಿಸುವ ಬಗ್ಗೆ ಯೋಚಿಸಿರಲಿಲ್ಲ. ಹೀರೊಗಳು ಬರೀ ಒಳ್ಳೆಯ ಕೆಲಸಗಳನ್ನು ಮಾಡುವುದರಿಂದ ನನಗೆ ತುಂಬಾ ಬೋರಿಂಗ್ ಎನಿಸುತ್ತದೆ. ಒಳ್ಳೆಯದನ್ನು ಮಾಡಲು, ಅದನ್ನು ಅರ್ಥಮಾಡಿಕೊಳ್ಳಲು ನಾನು ತಕ್ಷಣ ಕೆಟ್ಟವನಾಗಬೇಕು. ಕೆಲವೊಮ್ಮೆ ಒಳ್ಳೆಯವನಾಗಿರುವುದು ಬೋರ್ ಎನಿಸುತ್ತದೆ. ವೈಯಕ್ತಿಕವಾಗಿ, ನಾನು ಆ್ಯಂಟಿ ಹೀರೊ ಪಾತ್ರಗಳನ್ನು ಮಾಡಲು ಇಷ್ಟಪಡುತ್ತೇನೆ. ಏಕೆಂದರೆ ‘ಐ ಲವ್ ಬ್ಯಾಡ್ ಗಾಯ್ಸ್’ ಎಂದಿದ್ದಾರೆ.

ಅಟ್ಲೀ ಬರೆದು ನಿರ್ದೇಶಿಸಿರುವ ʼಜವಾನ್ʼ ಚಿತ್ರದಲ್ಲಿ ಶಾರುಖ್ ಖಾನ್, ನಯನತಾರಾ, ರಿಧಿ ಡೋಗ್ರಾ ಮತ್ತು ವಿಜಯ್ ಸೇತುಪತಿ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಚಿತ್ರದಲ್ಲಿ ದೀಪಿಕಾ ಪಡುಕೋಣೆ ಕೂಡ ಅತಿಥಿ ಪಾತ್ರದಲ್ಲಿ ನಟಿಸಿದ್ದಾರೆ.

ಇದನ್ನೂ ಓದಿ: Jawan Actress Priyamani: ಪ್ರಿಯಾಮಣಿಗೆ ಮೋಸ ಮಾಡಿದ ʻಜವಾನ್‌ʼ ನಿರ್ದೇಶಕ ಅಟ್ಲೀ!

ಮೊದಲ ದಿನ ಭಾರತದ ಎಲ್ಲಾ ಭಾಷೆಗಳಲ್ಲಿ 74.50 ಕೋಟಿ ಗಳಿಸಿತು. ಈ ಚಿತ್ರವು ವಿಶ್ವಾದ್ಯಂತ 129.06 ಕೋಟಿ ರೂಪಾಯಿಗಳನ್ನು ಗಳಿಸುವ ಮೂಲಕ ಹಿಂದಿ ಚಿತ್ರರಂಗದ ಇತಿಹಾಸದಲ್ಲಿ ಅತಿದೊಡ್ಡ ಆರಂಭಿಕ ದಿನಕ್ಕೆ ಸಾಕ್ಷಿಯಾಯಿತು. ವ್ಯಾಪಾರ ವರದಿಗಳ ಪ್ರಕಾರ, ಸೆಪ್ಟೆಂಬರ್ 12ರಂದು 6 ನೇ ದಿನದಂದು, ‘ಜವಾನ್’ ಭಾರತದಲ್ಲಿ 26.50 ಕೋಟಿ ರೂ ಗಳಿಕೆ ಕಂಡಿದೆ. ಹಾಗಾಗಿ, ಭಾರತದಲ್ಲಿ ಈಗ ಒಟ್ಟು ಕಲೆಕ್ಷನ್ 345.58 ಕೋಟಿ ರೂ. ‘ಜವಾನ್’ ಸೆಪ್ಟೆಂಬರ್ 11ರಂದು ಒಟ್ಟಾರೆ ಶೇಕಡಾ 26.28 ಆಕ್ಯುಪೆನ್ಸಿ ಹೊಂದಿತ್ತು.

Exit mobile version