Site icon Vistara News

Shah Rukh Khan : ಶಾರುಖ್‌ ಖಾನ್‌ ಪತ್ನಿ ಗೌರಿ ವಿನ್ಯಾಸಕಿ ಆಗಿದ್ದು ಏಕೆ? ಕಷ್ಟದ ದಿನಗಳನ್ನು ತೆರೆದಿಟ್ಟ ನಟ

#image_title

ಮುಂಬೈ: ಬಾಲಿವುಡ್‌ ನಟ ಶಾರುಖ್‌ ಖಾನ್‌ (Shah Rukh Khan) ಅವರ ಪತ್ನಿ ಗೌರಿ ಖಾನ್‌ ಅವರು ಬರೆದಿರುವ ʼಮೈ ಲೈಫ್‌ ಇನ್‌ ಡಿಸೈನ್‌ʼ ಪುಸ್ತಕ ಸೋಮವಾರ ಬಿಡುಗಡೆಯಾಗಿದೆ. ಮುಂಬೈನಲ್ಲಿ ಶಾರುಖ್‌ ದಂಪತಿ ಪುಸ್ತಕವನ್ನು ಲೋಕಾರ್ಪಣೆ ಮಾಡಿದ್ದಾರೆ. ಈ ವೇಳೆ ಶಾರುಖ್‌ ಅವರು ಪತ್ನಿ ವಿನ್ಯಾಸಕಿ ಆಗುವುದಕ್ಕೆ ಕಾರಣ ಏನು ಎನ್ನುವುದನ್ನು ಬಿಚ್ಚಿಟ್ಟಿದ್ದಾರೆ.

“ನಾವು ಕಷ್ಟ ಪಟ್ಟು ಹಣ ಸಂಗ್ರಹಿಸಿಟ್ಟುಕೊಂಡು ಮನ್ನತ್‌ ಬಂಗಲೆ ಖರೀದಿಸಿದೆವು. ಅದಕ್ಕೆ ಹಲವು ರಿಪೇರಿ ಕೆಲಸ ಆಗಬೇಕಿತ್ತು. ಅದಕ್ಕೊಬ್ಬರು ಡಿಸೈನರ್‌ ಬೇಕಿತ್ತು. ಅದಕ್ಕೆಂದೇ ಒಬ್ಬರನ್ನು ಮನೆಗೆ ಕರೆಸಿ ಮಾತನಾಡಿದೆವು. ಆದರೆ ಅವರು ಹೇಳಿದ ಪ್ಲಾನಿಂಗ್‌ಗೆ ನಮ್ಮ ಬಳಿ ಹಣವಿರಲಿಲ್ಲ. ಆಗ ನಾನು ಗೌರಿ ಕಡೆ ನೋಡಿ, ನೀನೇ ಏಕೆ ಮನೆಯನ್ನು ವಿನ್ಯಾಸ ಮಾಡಬಾರದು ಎಂದು ಕೇಳಿದೆ. ಅಲ್ಲಿಂದ ಅವಳ ವಿನ್ಯಾಸದ ಕೆಲಸ ಆರಂಭವಾಯಿತು” ಎಂದು ಹೇಳಿದ್ದಾರೆ.

ಇದನ್ನೂ ಓದಿ: Shah Rukh Khan: ಮತ್ತೆ ಶೂಟಿಂಗ್‌ನಲ್ಲಿ ಬ್ಯುಸಿಯಾದ್ರಾ ಶಾರುಖ್‌? ಫೋಟೊ ವೈರಲ್‌
ಹಾಗೆಯೇ ಯುವ ಜನತೆಗೆ ಸ್ಫೂರ್ತಿ ತುಂಬುವ ನಿಟ್ಟಿನಲ್ಲಿ ಮಾತನಾಡಿದ ಅವರು, “ನಮ್ಮ ವೈವಾಹಿಕ ಜೀವನ ಆರಂಭವಾಗಿ 23-24 ವರ್ಷಗಳ ಕಾಲ ನಾವು ಮುಂಬೈನಲ್ಲಿ ಸೆಟಲ್‌ ಆಗುವುದಕ್ಕೇ ಶ್ರಮಿಸಿದ್ದೇವೆ. ಗೌರಿಗೆ ಆಕೆಯಲ್ಲೂ ಒಂದು ಪ್ರತಿಭೆ ಇದೆ ಎಂದು ಕಂಡುಕೊಳ್ಳುವುದಕ್ಕೂ ಆಗಿರಲಿಲ್ಲ. ಈ ಪುಸ್ತಕ ಅದೆಲ್ಲವನ್ನೂ ಹೇಳುತ್ತದೆ. ಯುವಕರು ತಮ್ಮ ಜೀವನದ ಕನಸನ್ನು ಕಳೆದುಕೊಳ್ಳುವುದು ಬೇಡ, ನಿಮ್ಮ ಜೀವನವನ್ನು ನೀವು ಯಾವ ವಯಸ್ಸಿನಲ್ಲಾದರೂ ಆರಂಭಿಸಬಹುದು” ಎಂದು ಶಾರುಖ್‌ ಹೇಳಿದ್ದಾರೆ.

ಶಾರುಖ್‌ ಖಾನ್‌ ಹಾಗೂ ಪತ್ನಿ ಗೌರಿ ಖಾನ್ ಒಟ್ಟಾಗಿ ʼಮೈ ಲೈಫ್‌ ಇನ್‌ ಡಿಸೈನ್‌ʼ ಪುಸ್ತಕವನ್ನು ಅನಾವರಣಗೊಳಿಸಿದರು. ಈ ಜೋಡಿ ಕಾರ್ಯಕ್ರಮದಲ್ಲಿ ಕಪ್ಪು ಬಣ್ಣದ ಬಟ್ಟೆ ತೊಟ್ಟು ಮ್ಯಾಚಿಂಗ್‌ ಮಾಡಿಕೊಂಡಿದ್ದರು. ಈ ಹೊಸ ಪುಸ್ತಕದಲ್ಲಿ ಅವರ ಬಂಗಲೆಯಾದ ಮನ್ನತ್‌ನ ಕೆಲವು ವಿಶೇಷ ಫೋಟೋಗಳು ಕೂಡ ಸೇರಿಕೊಂಡಿವೆ.

ಇತ್ತೀಚೆಗೆ ಗೌರಿ ಖಾನ್‌ ಅವರು ತಮ್ಮ ಇನ್‌ಸ್ಟಾಗ್ರಾಂ ಖಾತೆಯಲ್ಲಿ ತಮ್ಮ ಕುಟುಂಬದ ಫೋಟೋವನ್ನು ಹಂಚಿಕೊಂಡಿದ್ದರು. ಪತಿ ಶಾರುಖ್‌, ಮಕ್ಕಳಾದ ಆರ್ಯನ್‌ ಖಾನ್‌, ಸುಹಾನಾ ಖಾನ್ ಮತ್ತು ಅಬ್‌ರಾಮ್ ಖಾನ್ ಎಲ್ಲರೂ ಆ ಫೋಟೋದಲ್ಲಿ ಬ್ಲಾಕ್‌ ಅಂಡ್‌ ವೈಟ್‌ ಉಡುಗೆಯಲ್ಲಿ ಕಾಣಿಸಿಕೊಂಡಿದ್ದರು. ಆ ಫೋಟೋಕ್ಕೆ ಗೌರಿ ಅವರು, ತಮ್ಮ ಹೊಸ ಪುಸ್ತಕ ಎಲ್ಲಿ ಸಿಗುತ್ತದೆ ಎನ್ನುವ ಬಗ್ಗೆ ಮಾಹಿತಿ ಕೊಟ್ಟಿದ್ದರು. ಈ ಕುಟುಂಬದ ಫೋಟೋ ಸಾಮಾಜಿಕ ಜಾಲತಾಣಗಳ ತುಂಬೆಲ್ಲ ಹರಿದಾಡಿ ಸಕತ್‌ ವೈರಲ್‌ ಕೂಡ ಆಗಿತ್ತು.

Exit mobile version