Site icon Vistara News

Shah Rukh Khan : ಶಾರುಖ್‌ ಗಾಯಗೊಂಡಿರುವುದು ನಿಜವೆ? ಮುಂಬೈ ಏರ್‌ಪೋರ್ಟ್‌ನಲ್ಲಿ ಸಿಕ್ಕಿತು ಸ್ಪಷ್ಟನೆ

Shah Rukh Khan

ಮುಂಬೈ: ಬಾಲಿವುಡ್‌ನ ಅತ್ಯಂತ ಜನಪ್ರಿಯ ನಟ ಶಾರುಖ್‌ ಖಾನ್‌ (Shah Rukh Khan) ಅವರಿಗೆ ಲಾಸ್‌ ಏಂಜಲೀಸ್‌ನಲ್ಲಿ ಚಿತ್ರೀಕರಣ ನಡೆಸುವ ವೇಳೆ ಅಪಘಾತವಾಗಿದೆ, ಅವರ ಮೂಗಿಗೆ ಆಪರೇಷನ್‌ ಮಾಡಲಾಗಿದೆ ಎನ್ನುವ ಸುದ್ದಿಯೊಂದು ಹರಿದಾಡಿತ್ತು. ಆದರೆ ಇದೀಗ ಆ ವದಂತಿಗೆ ಸ್ಪಷ್ಟನೆ ಸಿಕ್ಕಿದೆ. ಶಾರುಖ್‌ ಖಾನ್‌ ಅವರು ಮುಂಬೈ ಏರ್‌ಪೋರ್ಟ್‌ನಲ್ಲಿ ಕಾಣಿಸಿಕೊಂಡಿದ್ದು, ಅಭಿಮಾನಿಗಳಲ್ಲಿದ್ದ ಗೊಂದಲ ಬಗೆಹರಿದಿದೆ.

ಶಾರುಖ್‌ ಖಾನ್‌ ಅವರು ಬುಧವಾರ ಬೆಳಗ್ಗೆ ಮುಂಬೈ ಏರ್‌ಪೋರ್ಟ್‌ನಿಂದ ಹೊರಗೆ ಬಂದಿರುವುದು ಬಾಲಿವುಡ್‌ ಮಾಧ್ಯಮಗಳ ಕಣ್ಣಿಗೆ ಬಿದ್ದಿದೆ. ಅವರ ಜತೆಯಲ್ಲಿ ಪತ್ನಿ ಗೌರಿ ಖಾನ್‌ ಮತ್ತು ಮಗ ಅಬ್‌ರಾಮ್‌ ಕೂಡ ಕಾಣಿಸಿಕೊಂಡಿದ್ದಾರೆ. ಶಾರುಖ್‌ ಅವರು ಯಾವುದೇ ತೊಂದರೆಯಿಲ್ಲದೆಯೇ ಆರಾಮವಾಗಿ ಇರುವುದು ಕಂಡುಬಂದಿದೆ. ಶಾರುಖ್‌ ಖಾನ್‌ ಅವರು ಏರ್‌ಪೋರ್ಟ್‌ನಿಂದ ಹೊರಬಂದು ಕಾರು ಹತ್ತುವ ವಿಡಿಯೊವನ್ನು ಬಾಲಿವುಡ್‌ ಮಾಧ್ಯಮಗಳು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿವೆ.

ಇದನ್ನೂ ಓದಿ: Viral video: ಹೆದ್ದಾರಿಯಲ್ಲಿ ಉರುಳಿಬಂದ ಬಂಡೆಗೆ ಕಾರುಗಳು ಪುಡಿಪುಡಿ, ಬೆಚ್ಚಿ ಬೀಳಿಸುವಂತಿದೆ ವಿಡಿಯೋ!
ಈ ವಿಡಿಯೊ ನೋಡುತ್ತಿದ್ದಂತೆಯೇ ಶಾರುಖ್‌ ಅವರ ಅಭಿಮಾನಿಗಳು ಸಂತೋಷದಿಂದ ವಿಡಿಯೊಗೆ ಲೈಕ್‌ ಮಾಡಲಾರಂಭಿಸಿದ್ದಾರೆ. “ಕಿಂಗ್‌ ಈಸ್‌ ಬ್ಯಾಕ್‌”, “ಶಾರುಖ್‌ ಯಾವುದೇ ಅಪಾಯಕ್ಕೆ ಒಳಗಾಗದೆ ಚೆನ್ನಾಗಿದ್ದಾರೆ ಎನ್ನುವುದೇ ಸಂತೋಷ”, “ಈಗ ನಾವು ನೆಮ್ಮದಿಯಿಂದ ಇರಬಹುದು”, “ಅಬ್ಬಾ ದೇವರ ದಯೆ” ಎನ್ನುವ ಕಾಮೆಂಟ್‌ಗಳನ್ನು ಅಭಿಮಾನಿಗಳು ಮಾಡಲಾರಂಭಿಸಿದ್ದಾರೆ.


ಇತ್ತೀಚೆಗೆ ಶಾರುಖ್‌ ಖಾನ್‌ ಅವರಿಗೆ ಅಪಘಾತವಾಗಿದೆ ಎನ್ನುವ ಸುದ್ದಿಯೊಂದು ಹರಿದಾಡಿತ್ತು. ಅವರ ಮೂಗಿಗೆ ಗಾಯವಾಗಿದೆ, ಹೆಚ್ಚಿನ ಪ್ರಮಾಣದಲ್ಲಿ ರಕ್ತಸ್ರಾವ ಆಗಿದೆ ಎನ್ನಲಾಗಿತ್ತು. ರಕ್ತಸ್ರಾವ ನಿಲ್ಲಿಸಲೆಂದು ಸಣ್ಣದೊಂದು ಆಪರೇಷನ್‌ ಮಾಡಲಾಗಿದೆ ಎಂದೂ ವರದಿಯಾಗಿತ್ತು. ಅದಾದ ಮೇಲೆ ಅವರ ಮೂಗಿಗೆ ಬ್ಯಾಂಡೇಜ್‌ ಹಾಕಲಾಗಿದೆ ಎಂಬ ಸುದ್ದಿಗಳು ಹರಿದಾಡುತ್ತಿದ್ದವು. ಈ ಸುದ್ದಿ ಕೇಳಿ ಶಾರುಖ್‌ ಖಾನ್‌ ಅಭಿಮಾನಿಗಳು ಆಘಾತಕ್ಕೆ ಒಳಗಾಗಿದ್ದರು.

Exit mobile version