Site icon Vistara News

Shah Rukh Khan: ʻಜವಾನ್‌ʼ ರಿಲೀಸ್‌ ವಿಳಂಬ ವದಂತಿಗಳ ಬೆನ್ನಲ್ಲೇ ಅಟ್ಲೀ ಮನೆಯಲ್ಲಿ ಕಾಣಿಸಿಕೊಂಡ ಶಾರುಖ್‌

Shah Rukh Khan Spotted at Atlee's House

ಬೆಂಗಳೂರು: ಶಾರುಖ್‌ ಖಾನ್‌ (Shah Rukh Khan) ಅಭಿನಯದ ʻಜವಾನ್‌ʼ ಸಿನಿಮಾ ಬಿಡುಗಡೆಯ ದಿನಾಂಕ ಮುಂದೂಡಿದೆ ಎಂಬ ವದಂತಿಗಳ ಬೆನ್ನಲ್ಲೇ ನಟ ಮೇ 5ರ ತಡರಾತ್ರಿ ನಿರ್ದೇಶಕ ಅಟ್ಲೀ ಅವರ ಮುಂಬೈ ನಿವಾಸದಲ್ಲಿ ಕಾಣಿಸಿಕೊಂಡಿದ್ದಾರೆ. ಹೀಗಿದ್ದೂ ಮಾಧ್ಯಮವೊಂದು, ಚಿತ್ರತಂಡ ಮೊದಲೇ ನಿರ್ಧರಿಸಿದ ದಿನಾಂಕದಂದು ಸಿನಿಮಾ ಬಿಡುಗಡೆ ಮಾಡಲಿದೆ ಎಂದು ವರದಿ ಮಾಡಿದೆ.

ಮೇ 5ರ ಸಂಜೆ ಅಟ್ಲೀ ಅವರ ಮನೆಯಿಂದ ಶಾರುಖ್‌ ಕಾರಲ್ಲಿ ಹೊರಡುತ್ತಿರುವುದನ್ನು ಪಾಪರಾಜಿಗಳು (ಫೋಟೊಗ್ರಾಫರ್‌ಗಳು) ಸೆರೆ ಹಿಡಿದಿದ್ದಾರೆ. ವಿಎಫ್‌ಎಕ್ಸ್‌ನಿಂದಾಗಿ ಜವಾನ್ ಬಿಡುಗಡೆ ವಿಳಂಬವಾಗಿದೆ ಎಂದು ಪಿಂಕ್ವಿಲ್ಲಾ ವರದಿ ಹೇಳಿದೆ.

“ಜವಾನ್ ಸಿನಿಮಾ ಜೂನ್ 2 ರಂದು ಬಿಡುಗಡೆಯಾಗುವುದಿಲ್ಲ. ಚಿತ್ರದ ಇನ್ನುಳಿದ ಕೆಲಸಗಳು ಪೂರ್ಣಗೊಳಿಸಲು ತಂಡಕ್ಕೆ ಇನ್ನೂ ಸ್ವಲ್ಪ ಸಮಯ ಬೇಕಾಗುತ್ತದೆ. ವಿಎಫ್‌ಎಕ್ಸ್‌ (VFX) ಕೆಲಸಗಳು ಆಗುತ್ತಿವೆ. ಆದ್ದರಿಂದ ಸಿನಿಮಾ ರಿಲೀಸ್‌ ಆಗಲು ಹೆಚ್ಚು ಸಮಯ ತೆಗೆದುಕೊಳ್ಳುತ್ತದೆʼʼಎಂದು ವರದಿ ಮಾಡಿತ್ತು.

ಇದೀಗ ಮೂಲಗಳ ಪ್ರಕಾರ ನಿರ್ದೇಶಕ ಅಟ್ಲೀ ಜೂನ್ 2ರಂದೇ ಸಿನಿಮಾ ರಿಲೀಸ್‌ ಮಾಡುವುದಾಗಿ ನಿರ್ಧರಿಸಿದ್ದಾರೆ. ಈಗಾಗಲೇ ಚಿತ್ರತಂಡ ಟ್ರೈಲರ್‌ ಕೂಡ ರೆಡಿ ಮಾಡಿದ್ದು, ಜೂನ್ 2ರಂದೇ ಸಿನಿಮಾ ಬಿಡುಗಡೆ ಮಾಡಲಿದೆ. ಚಿತ್ರದ ಪ್ರಚಾರ ಕಾರ್ಯಗಳೂ ಕೂಡ ತಂಡವು ಮಾಡುತ್ತಿಲ್ಲ ಎಂದು ವರದಿಯಾಗಿದೆ. ಜವಾನ್‌ ಸಿನಿಮಾ ಪಠಾಣ್‌ ರೀತಿಯಲ್ಲಿಯೇ ಪ್ರಚಾರ ತೊಡಗಿಸಿಕೊಳ್ಳುತ್ತಿಲ್ಲ. ಚಿತ್ರ ಬಿಡುಗಡೆಯ 10-15 ದಿನಗಳ ಮುಂಚಿತವಾಗಿ ಸಿನಿಮಾ ಟ್ರೈಲರ್‌ ಬಿಡುಗಡೆ ಮಾಡಲಾಗುವುದು ಎಂದು ಮೂಲಗಳು ತಿಳಿಸಿವೆ.

ಇದನ್ನೂ ಓದಿ: Adipurush Movie: ʻಆದಿಪುರುಷ್‌ʼ ಸಿನಿಮಾದಿಂದಾಗಿ ʻಜವಾನ್‌ʼ ರಿಲೀಸ್‌ ಆಗ್ತಾ ಇಲ್ವಾ? ಪ್ರಭಾಸ್‌ ಫಿಲ್ಮ್‌ ರಿಲೀಸ್‌ ಯಾವಾಗ?

ಹಲವು ಸಿನಿಮಾಗಳಿಂದಾಗಿ ಸಿನಿಮಾ ರಿಲೀಸ್‌ ಡೇಟ್‌ ಮುಂದೂಡಲಿದೆಯಾ?

ಶಾರುಖ್‌ ಅವರ ಪಠಾಣ್‌ ಸಿನಿಮಾ ರಿಲೀಸ್‌ ಆಗಿ ಸಖತ್‌ ಹಿಟ್‌ ಕಂಡಾಯ್ತು. ಇನ್ನು ಎರಡನೇ ಸಿನಿಮಾ ಅಟ್ಲೀ ನಿರ್ದೇಶನದ ‘ಜವಾನ್’. ಹಾಗೇ ಮೂರನೇ ಸಿನಿಮಾ ರಾಜ್‌ಕುಮಾರ್ ಹಿರಾನಿ ನಿರ್ದೇಶನದ ‘ಡಂಕಿ’ ಬಿಡುಗಡೆಯಾಗಬೇಕಿದೆ.

ಜೂನ್ 2ಕ್ಕೆ ಶಾರುಖ್ ಖಾನ್ ‘ಜವಾನ್’ ರಿಲೀಸ್ ಒಂದು ವೇಳೆ ಆದರೆ, ಎರಡು ವಾರಗಳ ಬಳಿಕ ಜೂನ್‌ 16ರಂದು ಪ್ರಭಾಸ್ ಸಿನಿಮಾ ‘ಆದಿಪುರುಷ್’ ರಿಲೀಸ್ ಆಗಲಿದೆ. ಜೂನ್ 23ಕ್ಕೆ ಅಜಯ್ ದೇವಗನ್ ಸಿನಿಮಾ ‘ಮೈದಾನ್’ (ಜೂನ್ 23) ರಿಲೀಸ್ ಆಗುತ್ತಿದೆ. ಜೂನ್ 29ಕ್ಕೆ ಕಿಯಾರಾ ಅಡ್ವಾಣಿ ಹಾಗೂ ಕಾರ್ತಿಕ್ ಆರ್ಯನ್ ಅಭಿನಯದ ‘ಸತ್ಯಪ್ರೇಮ್ ಕಿ ಕಹಾನಿ’ ರಿಲೀಸ್ ಆಗಲಿದೆ. ಒಂದು ವೇಳೆ ಜವಾನ್‌ ರಿಲೀಸ್‌ ಆದರೆ ಕಾಂಪಿಟೇಶನ್‌ಗಳು ಜಾಸ್ತಿ. ಇದೀಗ ಜೂನ್‌ನಲ್ಲಿ ರಿಲೀಸ್ ಆಗಬೇಕಿರುವ ಎಲ್ಲಾ ಸಿನಿಮಾಗಳು ಪೋಸ್ಟ್‌ಪೋನ್ ಆಗುವ ಸಾಧ್ಯತೆಯಿದೆ ಎಂದು ವರದಿಯಾಗಿದೆ. ಜೂನ್ 2 ರಂದು ‘ಜವಾನ್’ ರಿಲೀಸ್ ಆಗದೇ ಇದ್ದರೆ , ‘ಆದಿಪುರುಷ್’ ಆ ಡೇಟ್‌ನಲ್ಲಿ ರಿಲೀಸ್ ಆಗುವ ಸಾಧ್ಯತೆಯಿದೆ ಎನ್ನಲಾಗಿದೆ.

Exit mobile version