Site icon Vistara News

WPL 2024: ಆಟಗಾರ್ತಿ ಮೆಗ್ ಲ್ಯಾನಿಂಗ್‌ಗೆ ಸಿಗ್ನೇಚರ್ ಸ್ಟೆಪ್ಸ್‌ ಹೇಳಿಕೊಟ್ಟ ಶಾರುಖ್‌: ವಿಡಿಯೊ ವೈರಲ್‌!

Shah Rukh Khan teaches Meg Lanning his iconic pose

ಬೆಂಗಳೂರು: ಮಹಿಳೆಯರ ವರ್ಣರಂಜಿತ ಟಿ20 ಕ್ರಿಕೆಟ್​ ಲೀಗ್ ಡಬ್ಲ್ಯೂಪಿಎಲ್ (WPL 2024) 2ನೇ ಆವೃತ್ತಿಗೆ ಇಂದು (ಫೆ.23) ಚಾಲನೆ ಸಿಗಲಿದೆ. ಬೆಂಗಳೂರಿನ ಎಂ. ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ(chinnaswamy stadium) ಬಾಲಿವುಡ್‌ ಗ್ಲ್ಯಾಮರ್‌ನೊಂದಿಗೆ ಉದ್ಘಾಟನಾ ಸಮಾರಂಭ ನಡೆಯಲಿದೆ. ಮಹಿಳಾ ಕ್ರಿಕೆಟ್ ತಂಡಕ್ಕೆ ಬೆಂಬಲ ನೀಡಲು ಬಾಲಿವುಡ್ ಸೂಪರ್‌ಸ್ಟಾರ್ ಶಾರುಖ್‌ಖಾನ್‌ ಚಿನ್ನಸ್ವಾಮಿ ಕ್ರೀಡಾಂಗಣಕ್ಕೆ ಬಂದಿದ್ದಾರೆ. ಈ ವೇಳೆ ಆಸ್ಟ್ರೇಲಿಯಾ ಕ್ರಿಕೆಟ್‌ ಆಟಗಾರ್ತಿ ಮೆಗ್ ಲ್ಯಾನಿಂಗ್ (Meg Lanning) ಅವರಿಗೆ ತಮ್ಮ ಸಿಗ್ನೇಚರ್ ಸ್ಟೆಪ್ಸ್‌ ಹೇಳಿಕೊಟ್ಟಿದ್ದಾರೆ ಶಾರುಖ್‌. ಜತೆಗೆ ಶಾತುಖ್‌ ಅವರು ಮೈದಾನದಲ್ಲಿ ತಮ್ಮ ಸಣ್ಣ ಪುಟ್ಟ ಚೇಷ್ಟೆಗಳನ್ನು ಮಾಡಿದ್ದಾರೆ. ಇದೀಗ ಈ ವಿಡಿಯೊ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದೆ.

ʻಚಕ್ ದೇ! ಇಂಡಿಯಾʼ ಶಾರುಖ್‌ ನಟನೆಯ ಸಿನಿಮಾ. 2007ರಲ್ಲಿ ತೆರೆ ಕಂಡಿತ್ತು. ಭಾರತದ ಹಾಕಿ ಕುರಿತ ಈ ಸಿನಿಮಾ ಇತ್ತು. ಇದರಲ್ಲಿ ಶಾರುಖ್‌ ಅವರು ʻಕೋಚ್ ಕಬೀರ್ ಖಾನ್ʼ ಪಾತ್ರದಲ್ಲಿ ಅಭಿನಯಿಸಿದ್ದರು. ಇದೀಗ ಭಾರತೀಯ ಆಟಗಾರ್ತಿ ಜೆಮಿಮಾ ರಾಡ್ರಿಗಸ್ ತಂಡದ ಜತೆಗೂ ಶಾರುಖ್‌ ಸಮಯ ಕಳೆದಿದ್ದಾರೆ. ʻಕೋಚ್ ಕಬೀರ್ ಖಾನ್’ ಪ್ರೀತಿಯಿಂದ ನಮಗೆ ಹಾರೈಸಿದರು ಎಂದು ಜೆಮಿಮಾ ರಾಡ್ರಿಗಸ್ ಪೋಸ್ಟ್‌ಗೆ ಶೀರ್ಷಿಕೆ ನೀಡಿದ್ದಾರೆ. ವೀಡಿಯೊಗಳಲ್ಲಿ, ಶಾರುಖ್ ಅವರು ಮುಂಬರುವ ಪಂದ್ಯದ ಆಟಗಾರರಿಗೆ ಶುಭ ಹಾರೈಸುತ್ತಿರುವುದು ಕಂಡುಬಂದಿದೆ.

ಇದನ್ನೂ ಓದಿ: WPL 2024: ನಾಳೆಯಿಂದ ಡಬ್ಲ್ಯೂಪಿಎಲ್ ಆರಂಭ; ವೇಳಾಪಟ್ಟಿ, ತಂಡಗಳ ಮಾಹಿತಿ ಹೀಗಿದೆ

ಅಷ್ಟೇ ಅಲ್ಲದೆ, ಉದ್ಘಾಟನಾ ಸಮಾರಂಭಕ್ಕೆ ಶಾರುಖ್‌ ಪಠಾಣ್ ಸಿನಿಮಾ ಹಾಡಿಗೆ ಸ್ಟೆಪ್ಸ್‌ ಕೂಡ ಹಾಕಲಿದ್ದಾರೆ. ರಿಹರ್ಸಲ್‌ ಮಾಡುತ್ತಿರುವ ವಿಡಿಯೊಗಳು ಕೂಡ ವೈರಲ್‌ ಆಗಿವೆ.

ಮಾರ್ಚ್ 17ಕ್ಕೆ ಫೈನಲ್​


ಕಳೆದ ವರ್ಷದ ಸಂಪೂರ್ಣ ಕೂಟವು ಮುಂಬೈನಲ್ಲಿ ನಡೆದಿದ್ದು, ಈ ಬಾರಿ ಬೆಂಗಳೂರು ಮತ್ತು ನವದೆಹಲಿಯಲ್ಲಿ ನಡೆಯಲಿದೆ. ನಾಳೆ ನಡೆಯುವ ಉದ್ಘಾಟನಾ ಪಂದ್ಯದಲ್ಲಿ ಕಳೆದ ವರ್ಷದ ಫೈನಲಿಸ್ಟ್​ಗಳಾದ ಮುಂಬೈ ಇಂಡಿಯನ್ಸ್ ಮತ್ತು ಡೆಲ್ಲಿ ಕ್ಯಾಪಿಟಲ್ಸ್ ತಂಡಗಳು ಬೆಂಗಳೂರಿನ ಎಂ.ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಸೆಣಸಾಡಲಿದೆ. ಈ ಬಾರಿ ಟೂರ್ನಿಯಲ್ಲಿ ಒಟ್ಟು 22 ಪಂದ್ಯಗಳು ನಡೆಯಲಿವೆ. ಅಂತಿಮ ಪಂದ್ಯ ಮಾರ್ಚ್ 17 ರಂದು ದೆಹಲಿಯ ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ನಡೆಯಲಿದೆ. ಎಲ್ಲಾ ಪಂದ್ಯಗಳು ಸಂಜೆ 7:30ಕ್ಕೆ ಆರಂಭವಾಗಲಿವೆ. ಮಾರ್ಚ್ 15 ರಂದು ಎಲಿಮಿನೇಟರ್ ಪಂದ್ಯ ನಡೆಯಲಿದೆ.

Exit mobile version