Site icon Vistara News

Shah Rukh Khan: ಕೇಸರಿ ಶಾಲು ಹೊದ್ದು ಪೋಸ್‌ ಕೊಟ್ಟ ಶಾರುಖ್‌; ಸಿಎಂ ಶಿಂಧೆ ಮನೆಯ ಪೂಜೆಯಲ್ಲಿ ಸಲ್ಲು ಭಾಗಿ!

Shah Rukh Khan CM Eknath Shinde Residence

ಬೆಂಗಳೂರು: ಬಾಲಿವುಡ್ ಸೂಪರ್‌ಸ್ಟಾರ್ ಶಾರುಖ್ ಖಾನ್ (Shah Rukh Khan) ಸದ್ಯ `ಜವಾನ್‌’ ಯಶಸ್ಸಿನ ಉತ್ತುಂಗದಲ್ಲಿದ್ದಾರೆ. ವಿಶ್ವಾದ್ಯಂತ ಪ್ರೀತಿ ಮತ್ತು ಮೆಚ್ಚುಗೆಯನ್ನು ಗಳಿಸಿದ ಬಳಿಕೆ ಗಣೇಶ್‌ ಹಬ್ಬ ಆಚರಣೆ ಕೂಡ ಮಾಡಿದ್ದಾರೆ. ಅಂಬಾನಿಯವರ ಗಣೇಶ ಚತುರ್ಥಿ ಕಾರ್ಯಕ್ರಮಕ್ಕೆ ಕೂಡ ನಟ ಭಾಗಿಯಾಗಿದ್ದರು. ಇತ್ತೀಚೆಗೆ ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ್ ಶಿಂಧೆ (Maharashtra CM Eknath Shinde) ಅವರ ನಿವಾಸದಲ್ಲಿ ಶಾರುಖ್‌ ಕಾಣಿಸಿಕೊಂಡಿದ್ದಾರೆ. ಏಕ್​ನಾಥ್ ಶಿಂಧೆ ಅವರ ಮನೆಯ ಗಣಪತಿ ಪೂಜೆಯಲ್ಲಿ ಭಾಗಿಯಾಗಿದ್ದಾರೆ. ಈ ವೇಳೆ ಏಕನಾಥ್ ಶಿಂಧೆ ಅವರು ಶಾರುಖ್‌ ಅವರಿಗೆ ಕೇಸರಿ ಶಾಲು ಹೊದಿಸಿದರು. ನಟ ಕೂಡ ಗಣಪತಿ ಮೂರ್ತಿ (Ganpati Celebration) ಹಿಡಿದು ಪೋಸ್ ಕೊಟ್ಟಿದ್ದಾರೆ. ಈ ವಿಡಿಯೊ ವೈರಲ್‌ ಆಗಿದ್ದು, ನಟ ಮೆಚ್ಚುಗೆಗೆ ಪಾತ್ರವಾಗಿದ್ದಾರೆ. ಅಷ್ಟೇ ಅಲ್ಲದೇ ಸಲ್ಮಾನ್‌ ಕೂಡ ಭಾಗಿಯಾಗಿದ್ದು ಒಟ್ಟಿಗೆ ನಿಂತು ನಟರು ಪೋಸ್‌ ಕೊಟ್ಟರು.

ನೀಲಿ ಕುರ್ತಾ ಮತ್ತು ಬಿಳಿ ಪ್ಯಾಂಟ್ ಧರಿಸಿದ್ದ ಶಾರುಖ್‌ ಸರಳವಾಗಿ ಕಂಡಿದ್ದರು. ಅದೇ ಸಮಯದಲ್ಲಿ ಹಾಜರಿದ್ದ ನಟ ಸಲ್ಮಾನ್ ಖಾನ್ ಅವರೊಂದಿಗೆ ಪೋಸ್ ಕೂಡ ನೀಡಿದರು. ಕಳೆದ ವಾರ ಅಂಬಾನಿ ಅವರ ಗಣೇಶ ಚತುರ್ಥಿ ಆಚರಣೆಯಲ್ಲಿ ಮಗ ಅಬ್ರಾಮ್, ಮಗಳು ಸುಹಾನಾ ಖಾನ್, ಪತ್ನಿ ಗೌರಿ ಖಾನ್ ಮತ್ತು ಅವರ ಅತ್ತೆಯೊಂದಿಗೆ ಶಾರುಖ್‌ ಕಾಣಿಸಿಕೊಂಡರು. ಹಿಂದು ಧರ್ಮದ ಬಗ್ಗೆ ಶಾರುಖ್‌ ಅವರಿಗೆ ಅಪಾರ ಗೌರವವಿದೆ. ಈ ವಿಡಿಯೊ ವೈರಲ್‌ ಆಗುತ್ತಿದ್ದಂತೆ ಶಾರುಖ್‌ ಫ್ಯಾನ್ಸ್‌ ʻನಟ ಎಲ್ಲರಿಗೂ ಮಾದರಿʼʼಎಂದು ಕಮೆಂಟ್‌ ಮಾಡಿದ್ದಾರೆ. ಇನ್ನೂ ಕೆಲವರು ಶಾರುಖ್ ಖಾನ್ ಬಗ್ಗೆ ಅಸಮಾಧಾನ ಹೊರಹಾಕಿದ್ದಾರೆ.

ಇದನ್ನೂ ಓದಿ: Shah Rukh Khan: ನಯನತಾರಾ-ಅಟ್ಲೀ ಮುನಿಸಿನ ರೂಮರ್ಸ್‌ ಬೆನ್ನಲ್ಲೇ ನಟಿಗೆ ಸ್ಕ್ರೀನ್​ ಸ್ಪೇಸ್​ ಸಿಕ್ಕಿಲ್ಲ ಎಂದ ಶಾರುಖ್‌!

ʻಡಂಕಿʼ ಸಿನಿಮಾಗೆ ಕಾಯುತ್ತಿರುವ ಶಾರುಖ್‌ ಫ್ಯಾನ್ಸ್

ಈ ಬಾರಿ ಶಾರುಖ್‌ ಕ್ರಿಸ್‌ಮಸ್ ಮತ್ತು ಹೊಸ ವರ್ಷಕ್ಕೆ ಡಂಕಿ ಸಿನಿಮಾವನ್ನು ಫ್ಯಾನ್ಸ್‌ಗೆ ಗಿಫ್ಟ್‌ ಆಗಿ ನೀಡಲಿದ್ದಾರೆ. ಡಂಕಿ ಚಿತ್ರಕ್ಕೆ ಜಿಯೋ ಸ್ಟುಡಿಯೋಸ್, ರೆಡ್ ಚಿಲ್ಲೀಸ್ ಎಂಟರ್‌ಟೈನ್‌ಮೆಂಟ್ ಮತ್ತು ರಾಜ್‌ಕುಮಾರ್ ಹಿರಾನಿ ಫಿಲ್ಮ್ಸ್ ಬೆಂಬಲ ನೀಡಿವೆ. ಚಿತ್ರವನ್ನು ರಾಜ್‌ಕುಮಾರ್ ಹಿರಾನಿ ನಿರ್ದೇಶಿಸಿದ್ದಾರೆ. ತಾಪ್ಸಿ ಪನ್ನು ನಾಯಕಿಯಾಗಿದ್ದಾರೆ. ಇದರಲ್ಲಿ ಶಾರುಖ್ ಖಾನ್ ಮತ್ತು ತಾಪ್ಸಿಯ ಹೊರತಾಗಿ ಬೊಮನ್ ಇರಾನಿ ಕೂಡ ನಟಿಸಲಿದ್ದಾರೆ.

ಬಾಲಿವುಡ್​ ಹಂಗಾಮಾ’ ವರದಿ ಮಾಡಿರುವ ಪ್ರಕಾರ ಶೂಟಿಂಗ್​ ಮುಗಿಯುವುದಕ್ಕೂ ಮುನ್ನವೇ ‘ಡಂಕಿ’ (Dunki Movie) ಚಿತ್ರದ ಒಟಿಟಿ (Dunki OTT) ಹಕ್ಕುಗಳು ಸೇಲ್​ ಆಗಿವೆ. ಅದು ಕೂಡ ಬರೋಬ್ಬರಿ 155 ಕೋಟಿ ರೂ. ಎಂದು ಹೇಳಲಾಗುತ್ತಿದೆ ನಿರ್ದೇಶಕ ರಾಜ್​ಕುಮಾರ್​ ಹಿರಾನಿ ಅವರಿಗೆ ದೊಡ್ಡ ಅಭಿಮಾನಿ ಬಳಗ ಇದೆ.ಕ್ಲಾಸ್​ ಸಿನಿಮಾಗಳನ್ನು ಮಾಡಿ ಅವರು ಅಪಾರ ಖ್ಯಾತಿ ಗಳಿಸಿದ್ದಾರೆ. ‘ಮುನ್ನಾಭಾಯ್​ ಎಂಬಿಬಿಎಸ್​​’, ‘3 ಈಡಿಯಟ್ಸ್​’, ‘ಪಿಕೆ’, ‘ಸಂಜು’ ಚಿತ್ರಗಳ ಮೂಲಕ ಅವರು ಅಭಿಮಾನಿಗಳನ್ನು ರಂಜಿಸಿದ್ದಾರೆ. ಮೊದಲ ಬಾರಿಗೆ ‘ಡಂಕಿ’ ಸಿನಿಮಾದಲ್ಲಿ ಶಾರುಖ್​ ಖಾನ್​ ಜತೆ ರಾಜ್​ಕುಮಾರ್​ ಹಿರಾನಿ ಕೈ ಜೋಡಿಸಿರುವುದರಿಂದ ಸಹಜವಾಗಿಯೇ ನಿರೀಕ್ಷೆ ಹೆಚ್ಚಿದೆ.

Exit mobile version