Site icon Vistara News

Shah Rukh Khan: ಶಾರುಖ್ ಬರ್ತ್‌ಡೇ ಪಾರ್ಟಿಯಲ್ಲಿ ಧೋನಿ, ದೀಪಿಕಾ, ರಣವೀರ್‌, ಆಲಿಯಾ; ಫೋಟೊ ವೈರಲ್‌!

Shah Rukh Khan birthday celebration

ಬೆಂಗಳೂರು: ನವೆಂಬರ್ 2ರಂದು ಶಾರುಖ್ ಖಾನ್ (Shah Rukh Khan) 58ನೇ ವಸಂತಕ್ಕೆ ಕಾಲಿಟ್ಟರು. ಕರೀನಾ ಕಪೂರ್, ಕರಿಷ್ಮಾ ಕಪೂರ್, ಅಮೃತಾ ಅರೋರಾ ಮತ್ತು ಅರ್ಜುನ್ ಕಪೂರ್ ಇತರರು ರಾತ್ರಿ ಶಾರುಖ್ ಖಾನ್ ಅವರ ಹುಟ್ಟುಹಬ್ಬದ ಪಾರ್ಟಿಯಲ್ಲಿ ಭಾಗಿಯಾಗಿದ್ದರು. ಈವೆಂಟ್‌ನಲ್ಲಿ ಯಾವುದೇ ಫೋಟೊಗ್ರಾಫರ್‌ಗಳನ್ನು ಅನುಮತಿಸದ ಕಾರಣ, ಇಂಟರ್ನೆಟ್‌ನಲ್ಲಿ ಯಾವುದೇ ಫೋಟೊಗಳು ವೈರಲ್‌ ಆಗಿಲ್ಲ.

ಕರೀನಾ ಕಪೂರ್ ಮತ್ತು ಕರಿಷ್ಮಾ ಕಪೂರ್ ಪಾರ್ಟಿಯಲ್ಲಿ ಭಾಗಿಯಾಗಿರುವ ಫೋಟೊವನ್ನು ಹಂಚಿಕೊಂಡಿದ್ದಾರೆ. ಕರೀನಾ ಬಿಳಿ ಸ್ಯಾಟಿನ್, ಆಫ್ ಶೋಲ್ಡರ್ ಡ್ರೆಸ್‌ನಲ್ಲಿ ಸುಂದರವಾಗಿ ಕಾಣುತ್ತಿದ್ದರೆ, ಕರಿಷ್ಮಾ ಹಸಿರು ಉಡುಪನ್ನು ಧರಿಸಿದ್ದರು. ದೀಪಿಕಾ ಪಡುಕೋಣೆ, ರಣವೀರ್ ಸಿಂಗ್ ಮತ್ತು ಆಲಿಯಾ ಭಟ್ ಕೂಡ ಶಾರುಖ್ ಪಾರ್ಟಿಯಲ್ಲಿ ಇದ್ದರು. ಪಾರ್ಟಿಯಿಂದ ಮೀರಾ ರಜಪೂತ್ ಅವರ ಫೋಟೋಗಳು ಸಹ ಹೊರಬಂದಿವೆ. ನಿರ್ಮಾಪಕಿ ಫೌಜಿಯಾ ಅಡೀಲ್ ಅವರು ದೀಪಿಕಾ ಪಡುಕೋಣೆ, ರಣವೀರ್, ಆಲಿಯಾ ಮತ್ತು ಅವರ ಸಹೋದರಿ ಶಾಹೀನ್ ಭಟ್ ಜತೆಗೆ ಚಲನಚಿತ್ರ ನಿರ್ಮಾಪಕ ಅಟ್ಲಿ ಮತ್ತು ಕ್ರಿಕೆಟಿಗ ಎಂಎಸ್ ಧೋನಿ ಅವರೊಂದಿಗೆ ಪೋಸ್ ನೀಡಿದರು.

ದೀಪಿಕಾ ಸಿಲ್ವರ್ ಸೀಕ್ವಿನ್ ಮಿನಿಡ್ರೆಸ್ ಧರಿಸಿದ್ದರೆ, ರಣವೀರ್ ಕಪ್ಪು ಸೂಟ್‌ನಲ್ಲಿದ್ದರು. ಮೀರಾ ರಜಪೂತ್ ಕೂಡ ಬ್ಯಾಷ್‌ಗೆ ಹಾಜರಾಗಿದ್ದರು. ಶಾರುಖ್ ಅವರ ಮ್ಯಾನೇಜರ್ ಪೂಜಾ ದದ್ಲಾನಿ ಮತ್ತು ಅವರ ಸ್ನೇಹಿತರೊಂದಿಗೆ ಕೆಲವು ಪಾರ್ಟಿ ಚಿತ್ರಗಳಲ್ಲಿ ಪೋಸ್ ನೀಡಿದರು. ಪಾರ್ಟಿಗಾಗಿ ಆಲಿಯಾ ಭಟ್ ಮತ್ತು ಮೀರಾ ಕಪ್ಪು ಬಟ್ಟೆಯಲ್ಲಿ ಬಂದರು.

ಇದನ್ನೂ ಓದಿ: Shah Rukh Khan: 58ನೇ ವಸಂತಕ್ಕೆ ಕಾಲಿಟ್ಟ ಶಾರುಖ್‌; ಅಭಿಮಾನಿಗಳತ್ತ ಕೈ ಬೀಸಿದ ನಟ!

ಬಾಲಿವುಡ್ ಸ್ನೇಹಿತರೊಂದಿಗೆ ಹುಟ್ಟುಹಬ್ಬವನ್ನು ಆಚರಿಸುವ ಗಂಟೆಗಳ ಮೊದಲು, ಶಾರುಖ್ ಖಾನ್ ತಮ್ಮ ವಿಶೇಷ ದಿನವನ್ನು ಮುಂಬೈನಲ್ಲಿ ಅಭಿಮಾನಿಗಳೊಂದಿಗೆ ಆಚರಿಸಿದರು. ಈ ವೀಡಿಯೊವನ್ನು ಹಂಚಿಕೊಂಡಿದ್ದಾರೆ. ಶಾರುಖ್ ಖಾನ್ ‘ಪಠಾಣ್‌’ ಬ್ಲಾಕ್‌ಬಸ್ಟರ್‌ ಸಿನಿಮಾ ಮೂಲಕ ಈ ವರ್ಷವನ್ನು ಪ್ರಾರಂಭಿಸಿದರು. ಸೆಪ್ಟೆಂಬರ್‌ನಲ್ಲಿ ಅವರ ಎರಡನೇ ಚಿತ್ರ ‘ಜವಾನ್’ ಬಿಡುಗಡೆಯಾಯಿತು. ಅದೊಂದು ದೊಡ್ಡ ಬಾಕ್ಸ್ ಆಫೀಸ್ ಹಿಟ್ ಕೂಡ ಆಗಿತ್ತು. ಇದೀಗ, ರಾಜ್‌ಕುಮಾರ್ ಹಿರಾನಿ ನಿರ್ದೇಶನದ ಅವರ ಮುಂದಿನ ಚಿತ್ರ ‘ಡಂಕಿ’ ಮೇಲೆ ಎಲ್ಲರ ಕಣ್ಣು ಇದೆ.

ಶಾರುಖ್ ಖಾನ್ ನಾಯಕನಾಗಿ ನಟಿಸಿದ್ದು, ಬೊಮನ್ ಇರಾನಿ, ತಾಪ್ಸೀ ಪನ್ನು, ವಿಕ್ಕಿ ಕೌಶಲ್, ಅನಿಲ್ ಗ್ರೋವರ್, ವಿಕ್ರಮ್ ಕೊಚ್ಚರ್ ತಾರಾಬಳಗದಲ್ಲಿದ್ದಾರೆ. ಪ್ರೀತಿ ಮತ್ತು ಸ್ನೇಹದ ಕಥೆಯಾಗಿರುವ ಡಂಕಿ ಸಿನಿಮಾವನ್ನು ಜಿಯೋ ಸ್ಟುಡಿಯೋಸ್, ರೆಡ್ ಚಿಲ್ಲೀಸ್ ಎಂಟರ್‌ಟೈನ್‌ಮೆಂಟ್ ಮತ್ತು ರಾಜ್‌ಕುಮಾರ್ ಹಿರಾನಿ ಫಿಲ್ಮ್ಸ್‌ನಡಿ ರಾಜ್‌ಕುಮಾರ್ ಹಿರಾನಿ ಮತ್ತು ಗೌರಿ ಖಾನ್ ನಿರ್ಮಿಸಿದ್ದಾರೆ. ಅಭಿಜಾತ್ ಜೋಷಿ, ರಾಜ್‌ಕುಮಾರ್ ಹಿರಾನಿ ಮತ್ತು ಕನಿಕಾ ಧಿಲ್ಲೋನ್ ಕಥೆ ಬರೆದಿದ್ದಾರೆ.

ಇದನ್ನೂ ಓದಿ: Shah Rukh Khan: ʻಡಂಕಿʼ ಹೊಸ ಪೋಸ್ಟರ್‌ ಔಟ್‌; ಒಂದು ದಿನ ಮೊದಲೇ ವಿದೇಶದಲ್ಲಿ ರಿಲೀಸ್‌!

ನಿರ್ದೇಶಕ ರಾಜ್​ಕುಮಾರ್​ ಹಿರಾನಿ ಅವರಿಗೆ ದೊಡ್ಡ ಅಭಿಮಾನಿ ಬಳಗ ಇದೆ. ಕ್ಲಾಸ್​ ಸಿನಿಮಾಗಳನ್ನು ಮಾಡಿ ಅವರು ಅಪಾರ ಖ್ಯಾತಿ ಗಳಿಸಿದ್ದಾರೆ ಮೊದಲ ಬಾರಿಗೆ ‘ಡಂಕಿ’ ಸಿನಿಮಾದಲ್ಲಿ ಶಾರುಖ್​ ಖಾನ್​ ಜತೆ ರಾಜ್​ಕುಮಾರ್​ ಹಿರಾನಿ ಕೈ ಜೋಡಿಸಿರುವುದರಿಂದ ಸಹಜವಾಗಿಯೇ ನಿರೀಕ್ಷೆ ಹೆಚ್ಚಿದೆ. ಈ ವರ್ಷ ಡಿಸೆಂಬರ್​ 22ರಂದು ಚಿತ್ರಮಂದಿರಗಳಲ್ಲಿ ‘ಡಂಕಿ’ ಸಿನಿಮಾ ಬಿಡುಗಡೆ ಆಗಲಿದೆ.

Exit mobile version