Site icon Vistara News

Shah Rukh Khan: ಆರ್ಯನ್ ಖಾನ್ ಉಡುಪಿನ ಬ್ರ್ಯಾಂಡ್‌ ದುಬಾರಿ: ಒಂದು ಕಿಡ್ನಿ ಮಾರಿದರೂ ಬಟ್ಟೆ ಖರೀದಿಸಲು ಕಷ್ಟ ಅಂದ್ರು ನೆಟ್ಟಿಗರು!

Aryan Khan's clothing brand is ridiculously expensive

ಬೆಂಗಳೂರು: ಆರ್ಯನ್ ಖಾನ್ ಇತ್ತೀಚೆಗಷ್ಟೇ ತಮ್ಮ D’YAVOL X ಉಡುಪಿನ ಬ್ರ್ಯಾಂಡ್‌ ಅನ್ನು ಶಾರುಖ್‌ ಖಾನ್‌ (Shah Rukh Khan) ಜತೆ ಕ್ರಿಯೇಟಿವ್‌ ಆಗಿ ಪರಿಚಯಿಸಿದ್ದಾರೆ. ಈ ಜಾಹೀರಾತಿನೊಂದಿಗೆ ನಿರ್ದೇಶಕರಾಗಿಯೂ ಪದಾರ್ಪಣೆ ಮಾಡಿದರು ಆರ್ಯನ್‌. ಜನರು ಕೂಡ ಈ ಬ್ರ್ಯಾಂಡ್‌ ಬಗ್ಗೆ ಕುತೂಹಲಕ್ಕೆ ಒಳಗಾಗಿದ್ದರು. ಇದೀಗ ಆರ್ಯನ್ ಖಾನ್ ಅವರ ಐಷಾರಾಮಿ ಬಟ್ಟೆ ಬ್ರಾಂಡ್ D’YAVOL X ಆನ್‌ಲೈನ್‌ನಲ್ಲಿ ಬರುತ್ತಿದ್ದಂತೆ ಬಟ್ಟೆಗಳ ದುಬಾರಿ ಬೆಲೆಗಳಿಂದ ಜನರು ಆಘಾತಕ್ಕೊಳಗಾಗಿದ್ದಾರೆ. ಒಂದು ಕಿಡ್ನಿಯನ್ನು ಮಾರಿದರೂ ಬಟ್ಟೆಗಳನ್ನು ಕೊಂಡುಕೊಳ್ಳಲು ಕಷ್ಟ ಎಂದು ನೆಟ್ಟಿಗರು ಟ್ರೋಲ್‌ ಕೂಡ ಮಾಡುತ್ತಿದ್ದಾರೆ.

ಶಾರುಖ್ ಖಾನ್ ( Shah Rukh Khan) ಮತ್ತು ಆರ್ಯನ್ ಕಳೆದ ಕೆಲವು ವಾರಗಳಿಂದ ಬ್ರ್ಯಾಂಡ್‌ ಪ್ರಚಾರ ಮಾಡುತ್ತಿದ್ದಾರೆ. ಆರ್ಯನ್ ಖಾನ್ ಅವರ ಐಷಾರಾಮಿ ಬಟ್ಟೆ ಬ್ರಾಂಡ್ D’YAVOL X ವೆಬ್‌ಸೈಟ್‌ ಏಪ್ರಿಲ್‌ 30ರಂದು ಲೈವ್‌ಗೆ ಬಂದಿತು. ವೆಬ್‌ಸೈಟ್ ಲೈವ್ ಆದ ತಕ್ಷಣ, ಅನೇಕ ಜನರಿಗೆ ನೋಡಲು ಸಾಧ್ಯವಾಗಲಿಲ್ಲ. ʻʻಒಮ್ಮೆಲೆ ಜನರು ಪ್ರವೇಶಿಸಿದ ಕಾರಣ ಟ್ರಾಫಿಕ್ ಅನುಭವಿಸುತ್ತಿದ್ದೇವೆʼʼ ಎಂದು ಬ್ರ್ಯಾಂಡ್‌ ತನ್ನ ಟ್ವೀಟರ್‌ ಖಾತೆಯಲ್ಲಿ ಮಾಹಿತಿ ಹಂಚಿಕೊಂಡಿತು. ಬಳಿಕ ಸೈಟ್ ಮತ್ತೆ ಲೈವ್ ಆಗಿದೆ. ಬಳಕೆದಾರರು ನೋಡುತ್ತಿದ್ದಂತೆ ಬಟ್ಟೆಗಳ ದುಬಾರಿ ಬೆಲೆಗಳಿಂದ ಆಘಾತಕ್ಕೊಳಗಾಗಿದ್ದಾರೆ.

ಕಾಮೆಂಟ್‌ಗಳಲ್ಲಿ ಜನರು ಅಸಮಾಧಾನ ಹೊರಹಾಕಿದ್ದಾರೆ. ಒಬ್ಬರು ʻʻಖಾನ್ ಸಾಬ್, ಇದನ್ನು ಕೊಂಡುಕೊಳ್ಳಲು ನನ್ನ ಒಂದು ಕಿಡ್ನಿಯನ್ನು ಮಾರಿದರೂ ಸಾಕಾಗುವುದಿಲ್ಲ, ನನ್ನ ಎರಡೂ ಕಿಡ್ನಿಗಳನ್ನು ಮಾರಬೇಕಾಗುತ್ತದೆ” ಎಂದು ಬರೆದರೆ ಇನ್ನೊಬ್ಬರು “ಈಗಷ್ಟೇ ಬೆಲೆಗಳನ್ನು ನೋಡಿದೆ. ಮಧ್ಯಮ ವರ್ಗದ ವ್ಯಕ್ತಿ ಎಂದಿಗೂ ಖರೀದಿಸಲು ಸಾಧ್ಯವಿಲ್ಲʼʼ ಎಂದು ಬರೆದುಕೊಂಡಿದ್ದಾರೆ. ಕಾಮೆಂಟ್‌ಗಳಲ್ಲಿ ಬಟ್ಟೆಗಳ ಬೆಲೆಯ ಫೋಟೊಗಳನ್ನು ಹಂಚಿಕೊಂಡಿದ್ದಾರೆ. ಪ್ರಿಂಟೆಡ್‌ ಬಿಳಿ ಟಿ-ಶರ್ಟ್ 24,400 ರೂ. ಬೆಲೆ ಆಗಿದ್ದರೆ, ಕಪ್ಪು ಬಣ್ಣದ ಹೂಡಿಗೆ 45,500 ರೂ. ಬೆಲೆಯಿದೆ. ಒಂದು ಜಾಕೆಟ್ 2 ಲಕ್ಷ ರೂ.ಕ್ಕಿಂತ ಹೆಚ್ಚಿದೆ.

ಇದನ್ನೂ ಓದಿ: Shah Rukh Khan: ಶಾರುಖ್‌ ಜತೆಗಿನ ಕೆಲಸದ ಅನುಭವ ಹಂಚಿಕೊಂಡ ಮಗ ಆರ್ಯನ್

ಸಂದರ್ಶನದಲ್ಲಿ, ಆರ್ಯನ್ ಖಾನ್ ಬ್ರ್ಯಾಂಡ್ ಬಗ್ಗೆ ಮಾತನಾಡಿದ್ದರು. ಸೆಟ್‌ಗಳಲ್ಲಿ ತಂದೆಯೊಂದಿಗೆ ಕೆಲಸ ಮಾಡಿರುವ ಅನುಭವ ಹೇಗಿತ್ತು ಎಂಬದನ್ನು ಹಂಚಿಕೊಂಡಿದ್ದರು. ಆರ್ಯನ್ ಖಾನ್ ಮಾತನಾಡಿ “ನನ್ನ ತಂದೆಯೊಂದಿಗೆ ಕೆಲಸ ಮಾಡುವುದು ಎಂದಿಗೂ ನನಗೆ ಚಾಲೆಂಜಿಂಗ್‌ ಎನಿಸಲಿಲ್ಲ. ಏಕೆಂದರೆ, ಅವರ ಅನುಭವ ಹಾಗಿದೆ. ಅವರು ಸೆಟ್‌ನಲ್ಲಿ ಪ್ರತಿಯೊಬ್ಬರ ಕೆಲಸವನ್ನು ಸುಲಭಗೊಳಿಸುತ್ತಿದ್ದರು. ಎಲ್ಲ ಸಿಬ್ಬಂದಿಗೆ ಕೆಲಸ ಆರಾಮದಾಯಕವಾಗಿತ್ತು. ಸೆಟ್‌ನಲ್ಲಿ ಅವರ ಬಗ್ಗೆ ಅಪಾರವಾದ ಗೌರವವನ್ನು ಹೊಂದಿದ್ದಾರೆ. ಅವರು ಸೆಟ್‌ನಲ್ಲಿದ್ದರೆ ನಾನು ಇನ್ನೂ ಹೆಚ್ಚಿಗೆ ಗಮನ ನೀಡುತ್ತಿದ್ದೆ. ನಾನು ಕಲಿಯಬಹುದಾದ ಸಂಗತಿಗಳನ್ನು ಮಿಸ್‌ ಮಾಡಿಕೊಳ್ಳುವುದಿಲ್ಲʼʼ ಎಂದು ಹೇಳಿದ್ದರು.

Exit mobile version