Site icon Vistara News

Adipurush Movie: ʻಆದಿಪುರುಷ್‌ʼ ಸಿನಿಮಾದಿಂದಾಗಿ ʻಜವಾನ್‌ʼ ರಿಲೀಸ್‌ ಆಗ್ತಾ ಇಲ್ವಾ? ಪ್ರಭಾಸ್‌ ಫಿಲ್ಮ್‌ ರಿಲೀಸ್‌ ಯಾವಾಗ?

Shah Rukh Khan’s Jawan postponed, way for Prabhas’ Adipurush

ಬೆಂಗಳೂರು: ಶಾರುಖ್‌ ಖಾನ್‌ ಅವರ ʻಜವಾನ್‌ʼ ಸಿನಿಮಾ ಜೂನ್‌ 2ರಂದು ಬಿಡುಗಡೆಯಾಗಲಿದೆ ಎಂದು ಚಿತ್ರತಂಡ ಹೇಳಿಕೊಂಡಿತ್ತು. ಆದರೆ ಇದೀಗ ಬಿ ಟೌನ್‌ನಲ್ಲಿ ಸಿನಿಮಾ ಜೂನ್‌ನಲ್ಲಿ ರಿಲೀಸ್‌ ಆಗುತ್ತಿಲ್ಲ ಬದಲಾಗಿ ಆದಿಪುರುಷ್‌ ಸಿನಿಮಾ (Adipurush Movie) ಬಿಡುಗಡೆಗೊಳ್ಳಲಿದೆ ಎಂದು ಚರ್ಚೆಗಳು ಆಗುತ್ತಿವೆ.

ಶಾರುಖ್‌ ಅವರ ಪಠಾಣ್‌ ಸಿನಿಮಾ ರಿಲೀಸ್‌ ಆಗಿ ಸಖತ್‌ ಹಿಟ್‌ ಕಂಡಾಯ್ತು. ಇನ್ನು ಎರಡನೇ ಸಿನಿಮಾ ಅಟ್ಲಿ ನಿರ್ದೇಶನದ ‘ಜವಾನ್’. ಹಾಗೇ ಮೂರನೇ ಸಿನಿಮಾ ರಾಜ್‌ಕುಮಾರ್ ಹಿರಾನಿ ನಿರ್ದೇಶನದ ‘ಡಂಕಿ’ ಬಿಡುಗಡೆಯಾಗಬೇಕಿದೆ.

ಮೊದಲು ಜೂನ್ 2ಕ್ಕೆ ಶಾರುಖ್ ಖಾನ್ ‘ಜವಾನ್’ ರಿಲೀಸ್ ಆಗಬೇಕಿತ್ತು. ಎರಡು ವಾರಗಳ ಬಳಿಕ ಜೂನ್‌ 16ರಂದು ಪ್ರಭಾಸ್ ಸಿನಿಮಾ ‘ಆದಿಪುರುಷ್’ ರಿಲೀಸ್ ಆಗಲಿದೆ. ಜೂನ್ 23ಕ್ಕೆ ಅಜಯ್ ದೇವಗನ್ ಸಿನಿಮಾ ‘ಮೈದಾನ್’ (ಜೂನ್ 23) ರಿಲೀಸ್ ಆಗುತ್ತಿದೆ. ಜೂನ್ 29ಕ್ಕೆ ಕಿಯಾರಾ ಅಡ್ವಾಣಿ ಹಾಗೂ ಕಾರ್ತಿಕ್ ಆರ್ಯನ್ ಅಭಿನಯದ ‘ಸತ್ಯಪ್ರೇಮ್ ಕಿ ಕಹಾನಿ’ ರಿಲೀಸ್ ಆಗಲಿದೆ. ಒಂದು ವೇಳೆ ಜವಾನ್‌ ರಿಲೀಸ್‌ ಆದರೆ ಕಾಂಪಿಟೇಶನ್‌ಗಳು ಜಾಸ್ತಿ. ಇದೀಗ ಜೂನ್‌ನಲ್ಲಿ ರಿಲೀಸ್ ಆಗಬೇಕಿರುವ ಎಲ್ಲಾ ಸಿನಿಮಾಗಳು ಪೋಸ್ಟ್‌ಪೋನ್ ಆಗುವ ಸಾಧ್ಯತೆಯಿದೆ ಎಂದು ವರದಿಯಾಗಿದೆ. ಜೂನ್ 2 ರಂದು ‘ಜವಾನ್’ ರಿಲೀಸ್ ಆಗದೇ ಇದ್ದರೆ , ‘ಆದಿಪುರುಷ್’ ಆ ಡೇಟ್‌ನಲ್ಲಿ ರಿಲೀಸ್ ಆಗುವ ಸಾಧ್ಯತೆಯಿದೆ ಎನ್ನಲಾಗಿದೆ. ಆದರೆ ಈಗಲೂ ಆದಿ ಪುರುಷ್‌ ತಂಡ ಜೂನ್‌ 16ಕ್ಕೆ ತೆರೆಗೆ ಬರಲಿದೆ ಎಂದು ಹೇಳಿಕೊಂಡಿದೆ.

ಇದನ್ನೂ ಓದಿ: Adipurush Movie: 3 ಗಂಟೆ ಸಿನಿಮಾ ಆದಿಪುರುಷ್‌: ವಿದೇಶದಲ್ಲಿ 3 ದಿನ ಮೊದಲೇ ಬಿಡುಗಡೆ!

ಆದಿಪುರುಷ್‌ ಸಿನಿಮಾ ಜೂನ್‌ 16ರಂದು ತೆರೆಗೆ

ಜೂನ್ 16ಕ್ಕೆ ಸಿನಿಮಾ ವಿಶ್ವದಾದ್ಯಂತ ತೆರೆಗಪ್ಪಳಿಸಲಿದೆ. ಕೆಲ ದಿನಗಳ ಹಿಂದೆ ರಿಲೀಸ್ ಆಗಿದ್ದ ಟೀಸರ್ ಭಾರೀ ಟೀಕೆಗೆ ಗುರಿಯಾಗಿತ್ತು. ಮೇ 9ರಂದು ಸಂಜೆ 5.30ಕ್ಕೆ ಥಿಯೇಟರ್‌ಗಳಲ್ಲಿ ‘ಆದಿಪುರುಷ್’ ಟ್ರೈಲರ್‌ ಪ್ರದರ್ಶನ ಆಗುತ್ತದೆ ಎಂದು ಹೇಳಲಾಗುತ್ತಿದೆ. ಆಂಧ್ರ, ತೆಲಂಗಾಣ ಮಾತ್ರವಲ್ಲ ಬೆಂಗಳೂರು ಸೇರಿದಂತೆ ದೇಶದ ಪ್ರಮುಖ ನಗರಗಳಲ್ಲಿ ‘ಆದಿಪುರುಷ್’ ಟ್ರೈಲರ್ ಪ್ರದರ್ಶನವಾಗಲಿದೆ. ಬೆಂಗಳೂರಿನಲ್ಲಿ ಓರಾಯನ್ ಮಾಲ್, ಊವರ್ಶಿ ಥಿಯೇಟರ್‌ ಸೇರಿದಂತೆ ಹಲವು ಥಿಯೇಟರ್‌ಗಳಲ್ಲಿ ಟ್ರೈಲರ್ ಪ್ರದರ್ಶನಕ್ಕೆ ಸಿದ್ಧತೆ ನಡೆಯುತ್ತಿದೆ. ಜೂನ್ 16ಕ್ಕೆ ಸಿನಿಮಾ ರಿಲೀಸ್ ಆಗುವುದಕ್ಕೂ ಮುನ್ನ ಟ್ರಿಬೈಕಾ ಫಿಲ್ಮ್ ಫೆಸ್ಟಿವಲ್‌ನಲ್ಲಿ ಸಿನಿಮಾ ಪ್ರದರ್ಶನವಾಗಲಿದೆ..

Exit mobile version