Site icon Vistara News

Shah Rukh Khan: ʻಡಂಕಿʼ ಹೊಸ ಪೋಸ್ಟರ್‌ ಔಟ್‌; ಒಂದು ದಿನ ಮೊದಲೇ ವಿದೇಶದಲ್ಲಿ ರಿಲೀಸ್‌!

new poster from Dunki out

ಬೆಂಗಳೂರು: 2023 ಶಾರುಖ್ ಖಾನ್ (Shah Rukh Khan) ಅವರ ವರ್ಷ. ಈ ವರ್ಷ ಜನವರಿಯಲ್ಲಿ ‘ಪಠಾಣ್’ ಮತ್ತು ನಂತರ ಸೆಪ್ಟೆಂಬರ್‌ನಲ್ಲಿ ಬಿಡುಗಡೆಯಾದ ಜವಾನ್‌ ಸಿನಿಮಾಗಳು ಬ್ಲಾಕ್‌ಬಸ್ಟರ್ ಚಿತ್ರಗಳಾಗಿ ಹೊರಹೊಮ್ಮಿದವು. ಇದೀಗ ಕ್ರಿಸ್‌ಮಸ್‌ನಲ್ಲಿ ‘ಡಂಕಿ’ ಸಿನಿಮಾ ಬಿಡುಗಡೆಯಾಗುತ್ತಿದೆ. ಇದೀಗ ಸಿನಿಮಾ ಹೊಸ ಪೋಸ್ಟರ್‌ ಜತೆಗೆ ಬಿಡುಗಡೆಯ ದಿನಾಂಕವನ್ನು ರಿವೀಲ್‌ ಮಾಡಿದೆ. ರಾಜ್‌ಕುಮಾರ್ ಹಿರಾನಿ ಅವರ ಕಾಮಿಡಿ-ಡ್ರಾಮಾ ಈ ಸಿನಿಮಾ ಡಿಸೆಂಬರ್ 22ರಂದು ಭಾರತದಲ್ಲಿ ಬಿಡುಗಡೆಯಾಗಲಿದೆ. ಚಿತ್ರದ ಅಂತಾರಾಷ್ಟ್ರೀಯ ಬಿಡುಗಡೆ ಪೋಸ್ಟರ್ ಅನ್ನು ಸಾಮಾಜಿಕ ಮಾಧ್ಯಮದಲ್ಲಿ ಚಿತ್ರತಂಡ ಹಂಚಿಕೊಂಡಿದೆ. ಡಿಸೆಂಬರ್ 21ರಂದು ‘ಡಂಕಿ’ ವಿದೇಶದಲ್ಲಿ ಬಿಡುಗಡೆಯಾಗಲಿದೆ ಎಂದು ಚಿತ್ರತಂಡ ರಿವೀಲ್‌ ಮಾಡಿದೆ.

‘ಡಂಕಿ’ ಹೊಸ ಪೋಸ್ಟರ್

ಡಂಕಿ ಡಿಸೆಂಬರ್ 21ರಂದು ಭಾರತದಲ್ಲಿ ಹಿಟ್‌ ಆಗುವ ಒಂದು ದಿನ ಮೊದಲು ಅಂತಾರಾಷ್ಟ್ರೀಯ ಮಾರುಕಟ್ಟೆಗಳಲ್ಲಿ ಬಿಡುಗಡೆಯಾಗಲಿದೆ. ಚಿತ್ರದ ಅಂತಾರಾಷ್ಟ್ರೀಯ ರಿಲೀಸ್ ಪೋಸ್ಟರ್ ರಿವೀಲ್ ಆಗಿದೆ. ಪೋಸ್ಟರ್‌ನಲ್ಲಿ ಸೈನಿಕನ ವೇಷಭೂಷಣದಲ್ಲಿರುವ ಶಾರುಖ್ ಖಾನ್ ಹಿಮ್ಮುಖವಾಗಿ ಪೋಸ್‌ ನೀಡಿದ್ದಾರೆ.

ಡಂಕಿ ಎಸ್‌ಆರ್‌ಕೆ ರೆಡ್ ಚಿಲ್ಲೀಸ್ ಎಂಟರ್‌ಟೈನ್‌ಮೆಂಟ್ ಅಡಿಯಲ್ಲಿ ನಿರ್ಮಿಸಿದೆ. ರಾಜ್‌ಕುಮಾರ್ ಹಿರಾನಿ ನಿರ್ದೇಶನದ ಡಂಕಿಯಲ್ಲಿ ಎಸ್‌ಆರ್‌ಕೆ ಎದುರು ತಾಪ್ಸಿ ಪನ್ನು ಕೂಡ ಕಾಣಿಸಿಕೊಳ್ಳಲಿದ್ದಾರೆ.

ಇದನ್ನೂ ಓದಿ: Shah Rukh Khan: ಡಂಕಿ Vs ಸಲಾರ್: ಸ್ಕ್ರೀನ್‌ಗಳಿಗಾಗಿ ಆಫ್-ಸ್ಕ್ರೀನ್ ಫೈಟ್!

ನಿರ್ದೇಶಕ ರಾಜ್​ಕುಮಾರ್​ ಹಿರಾನಿ ಅವರಿಗೆ ದೊಡ್ಡ ಅಭಿಮಾನಿ ಬಳಗ ಇದೆ. ಕ್ಲಾಸ್​ ಸಿನಿಮಾಗಳನ್ನು ಮಾಡಿ ಅವರು ಅಪಾರ ಖ್ಯಾತಿ ಗಳಿಸಿದ್ದಾರೆ. ‘ಮುನ್ನಾಭಾಯ್​ ಎಂಬಿಬಿಎಸ್​​’, ‘3 ಈಡಿಯಟ್ಸ್​’, ‘ಪಿಕೆ’, ‘ಸಂಜು’ ಚಿತ್ರಗಳ ಮೂಲಕ ಅವರು ಅಭಿಮಾನಿಗಳನ್ನು ರಂಜಿಸಿದ್ದಾರೆ. ಮೊದಲ ಬಾರಿಗೆ ‘ಡಂಕಿ’ ಸಿನಿಮಾದಲ್ಲಿ ಶಾರುಖ್​ ಖಾನ್​ ಜತೆ ರಾಜ್​ಕುಮಾರ್​ ಹಿರಾನಿ ಕೈ ಜೋಡಿಸಿರುವುದರಿಂದ ಸಹಜವಾಗಿಯೇ ನಿರೀಕ್ಷೆ ಹೆಚ್ಚಿದೆ. ಇದೊಂದು ಕಾಮಿಡಿ ಚಿತ್ರ ಎಂದು ಹೇಳಲಾಗುತ್ತಿದೆ. ಲಂಡನ್, ಬುಡಾಪೆಸ್ಟ್, ಜೆಡ್ಡಾ ಮತ್ತು ನಿಯೋಮ್‌ನಲ್ಲಿ ‘ಡಂಕಿ’ ಚಿತ್ರೀಕರಣ ನಡೆದಿದೆ.

Exit mobile version