Site icon Vistara News

Pathaan Movie: ರಾಮ್ ಚರಣ್ ಕರೆದುಕೊಂಡು ಹೋದರೆ `ಪಠಾಣ್‌’ ವೀಕ್ಷಿಸಲು ಬರುತ್ತೇನೆ ಎಂದ ಶಾರುಖ್‌!

Pathaan Movie leaked

ಬೆಂಗಳೂರು : ಬಾಲಿವುಡ್ ಸ್ಟಾರ್ ಶಾರುಖ್ ಖಾನ್ ತಮ್ಮ ಮುಂಬರುವ ಚಿತ್ರ ‘ಪಠಾಣ್’ (Pathaan Movie) ಬಿಡುಗಡೆಗೆ ಸಜ್ಜಾಗುತ್ತಿದ್ದಾರೆ. ಜನವರಿ 25 ರಂದು ತೆರೆಗೆ ಬರಲಿದೆ. ಚಿತ್ರದ ಬಿಡುಗಡೆಗೆ ಮುನ್ನ ‘ಬಾಲಿವುಡ್ ಬಾದ್‌ಶಾ’ ಟ್ವೀಟರ್‌ನಲ್ಲಿ ಅಭಿಮಾನಿಗಳೊಂದಿಗೆ ಸಂವಾದ ನಡೆಸಿದ್ದಾರೆ. ಅಭಿಮಾನಿಗಳು ಎಲ್ಲಾ ರೀತಿಯ ಪ್ರಶ್ನೆಗಳನ್ನು ಕೇಳಿದ್ದರಿಂದ ಮತ್ತು ಶಾರುಖ್‌ ಎಲ್ಲರಿಗೂ ಪ್ರಾಮಾಣಿಕ ಉತ್ತರಗಳನ್ನು ನೀಡಿದ್ದರಿಂದ ಸಂವಾದ ಮನರಂಜನೆಯಾಗಿತ್ತು. ‘ಪಠಾಣ್‌’ ಬಿಡುಗಡೆಯ ದಿನದಂದು ವೀಕ್ಷಿಸಲು ತೆಲುಗು ರಾಜ್ಯಗಳಿಗೆ ಭೇಟಿ ನೀಡುವಂತೆ ಸಾಮಾಜಿಕ ಮಾಧ್ಯಮ ಬಳಕೆದಾರರು ಕೇಳಿದಾಗ, ಶಾರುಖ್‌ ಅವರು ರಾಮ್‌ಚರಣ್‌ ನನ್ನನ್ನು ಕರೆದುಕೊಂಡು ಹೋದರೆ ಬರುತ್ತೆನೆ ಎಂದು ಪ್ರತಿಕ್ರಿಯೆ ನೀಡಿದ್ದಾರೆ.

ಕೆಲವು ದಿನಗಳ ಹಿಂದೆ, ಆರ್‌ಆರ್‌ಆರ್‌ ಗೋಲ್ಡನ್‌ ಗ್ಲೋಬ್‌ ಪ್ರಶಸ್ತಿಯನ್ನು ಪಡೆದುಕೊಂಡ ಸಮಯದಲ್ಲಿ ಶಾರುಖ್‌ ವಿಶೇಷವಾಗಿ ವಿಶ್‌ ಮಾಡಿದ್ದರು. ಶಾರುಖ್‌ ಟ್ವೀಟ್‌ನಲ್ಲಿ ʻ ಭಾರತಕ್ಕೆ ಆಸ್ಕರ್ ಅನ್ನು ತಂದಾಗ, ದಯವಿಟ್ಟು ನನಗೆ ಅದನ್ನು ಮುಟ್ಟಲು ಬಿಡಿ.ಲವ್ ಯೂʼʼಎಂದು ಬರೆದುಕೊಂಡಿದ್ದರು. ಇದಕ್ಕೆ ರಾಮ್‌ ಚರಣ್‌ ಪ್ರತಿಕ್ರಿಯೆ ನೀಡಿ ʻʻ”ಖಂಡಿತ ಶಾರುಖ್‌ ಸರ್! ಪ್ರಶಸ್ತಿ ಭಾರತೀಯ ಚಿತ್ರರಂಗಕ್ಕೆ ಸೇರಿದ್ದು.”ಎಂದು ಬರೆದುಕೊಂಡಿದ್ದಾರೆ.

ಇದನ್ನೂ ಓದಿ: Pathaan Movie | 36 ಗಂಟೆಗಳಲ್ಲಿ ಬುಕ್‌ ಮೈ ಶೋನಲ್ಲಿ 4 ಲಕ್ಷ ಟಿಕೆಟ್‌ ಸೋಲ್ಡ್‌ ಔಟ್‌: ಪಠಾಣ್‌ಗೆ ಅದ್ಭುತ ಪ್ರತಿಕ್ರಿಯೆ!

ಇದನ್ನೂ ಓದಿ: Pathaan Movie: ಅಭಿಮಾನಿಗಳ ಜತೆ ಥಿಯೇಟರ್‌ನಲ್ಲಿ ʻಪಠಾಣ್‌ʼ ವೀಕ್ಷಿಸಲಿದ್ದಾರಾ ಶಾರುಖ್‌?

ಪಠಾಣ್‌ ಸಿನಿಮಾ ಜನವರಿ 25ರಂದು ವಿಶ್ವಾದ್ಯಂತ ತೆರೆ ಕಾಣುತ್ತಿದೆ. ಮುಂಗಡ ಟಿಕೆಟ್‌ ಬುಕ್ಕಿಂಗ್‌ನಲ್ಲಿ ಹೊಸ ದಾಖಲೆ ನಿರ್ಮಿಸುತ್ತಿದೆ. ನಾಲ್ಕು ವರ್ಷಗಳ ನಂತರ ಶಾರುಖ್‌ ಮತ್ತೆ ತೆರೆ ಮೇಲೆ ಮತ್ತೆ ಕಾಣಿಸಿಕೊಳ್ಳುತ್ತಿದ್ದಾರೆ. ಶಾರುಖ್‌ ಅಭಿಮಾನಿಗಳು ತುಂಬ ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಯಶ್‌ರಾಜ್​ ಬ್ಯಾನರ್​ನಡಿ ನಿರ್ಮಾಣವಾಗುತ್ತಿರುವ ಪಠಾಣ್​ ಸಿನಿಮಾವನ್ನು ಸಿದ್ದಾರ್ಥ್​ ಆನಂದ್​ ನಿರ್ದೇಶನ ಮಾಡಿದ್ದಾರೆ. ಶಾರುಖ್ ಖಾನ್, ದೀಪಿಕಾ ಪಡುಕೋಣೆ ಮತ್ತು ಜಾನ್ ಅಬ್ರಹಾಂ ಮೊದಲ ಬಾರಿಗೆ ಪಠಾಣ್ ಚಿತ್ರದಲ್ಲಿ ಒಟ್ಟಿಗೆ ಕಾಣಿಸಿಕೊಂಡಿದ್ದಾರೆ. ನವೆಂಬರ್​ನಲ್ಲಿ ಟೀಸರ್​ ಬಿಡುಗಡೆಯಾಗಿದೆ.

Exit mobile version