Site icon Vistara News

Shahid Kapoor: ಶಾಹಿದ್ ಕಪೂರ್‌ ಖರೀದಿಸಿದ ಈ ಕಾರಿನ ಬೆಲೆ ಎಷ್ಟು ನೋಡಿ!

Shahid Kapoor buy a new car Mercedes Maybach

ಬೆಂಗಳೂರು: ಬಾಲಿವುಡ್‌ ನಟ ಶಾಹಿದ್ ಕಪೂರ್ (Shahid Kapoor) ಅಷ್ಟಾಗಿ ಸಿನಿಮಾಗಳಲ್ಲಿ ಯಶಸ್ಸು ಕಂಡಿರಲಿಲ್ಲ. ಇತ್ತೀಚೆಗೆ ಒಟಿಟಿಗೆ ಎಂಟ್ರಿ ಕೊಟ್ಟು ಹಿಟ್ ಸಿನಿಮಾ ನೀಡಿದ್ದಾರೆ. ಶಾಹಿದ್ ಕಪೂರ್ ಇದೀಗ ಹೊಸದೊಂದು ಐಶಾರಾಮಿ ಕಾರು ಖರೀದಿಸಿ, ಕಾರಿನ ಪಕ್ಕ ನಿಂತು ಸ್ಟೈಲ್ ಆಗಿ ಫೋಸು ನೀಡಿದ್ದಾರೆ. 3.5 ಕೋಟಿ ರೂ. ಮೌಲ್ಯದ ಹೊಚ್ಚ ಹೊಸ ಮರ್ಸಿಡಿಸ್ ಮೇಬ್ಯಾಕ್ ಜಿಎಲ್‌ಎಸ್ 600 (Mercedes-Maybach GLS 600) ಖರೀದಿಸಿದ್ದಾರೆ. ಮರ್ಸಿಡಿಸ್ ಮೇಬ್ಯಾಕ್ ಇಂಡಿಯಾದ ಅಧಿಕೃತ ಇನ್‌ಸ್ಟಾ ಪೇಜ್‌ನಲ್ಲಿ ಶಾಹಿದ್ ಮತ್ತು ಅವರ ಪತ್ನಿ ಮೀರಾ ರಜಪೂತ್ ಅವರ ಚಿತ್ರವನ್ನು ಪೋಸ್ಟ್‌ ಮಾಡಿದೆ. ದಂಪತಿ ತಮ್ಮ ಹೊಸ ಕಾರಿನ ಕೀಯನ್ನು ಸ್ವೀಕರಿಸುತ್ತಿರುವುದು ಕಂಡುಬಂದಿದೆ.

ಬಾಲಿವುಡ್​ನ ಹಲವು ನಟ-ನಟಿಯರ ಮೆಚ್ಚಿನ ಕಾರು ಈ ಮರ್ಸಿಡೀಸ್ ಮೇಬ್ಯಾಕ್ ಜಿಎಲ್​ಎಸ್ 600. ನಟರಾದ ರಣವೀರ್‌ ಸಿಂಗ್, ಅರ್ಜುನ್ ಕಪೂರ್, ಆಯುಷ್ಮಾನ್ ಖುರಾನಾ, ನಟಿಯರಾದ ಕೃತಿ ಸನೂನ್, ನೀತು ಕಪೂರ್ ಇನ್ನೂ ಕೆಲವರು ಮರ್ಸಿಡೀಸ್ ಮೇಬ್ಯಾಕ್ ಜಿಎಲ್​ಎಸ್ 600 ಕಾರನ್ನು ಹೊಂದಿದ್ದಾರೆ. ಶಾಹಿದ್ ಕಪೂರ್ ಬಳಿ ಈಗಾಗಲೇ ಹಲವು ಉತ್ತಮ ಕಾರುಗಳಿವೆ. ಮರ್ಸಿಡೀಸ್ ಜಿಎಲ್ ಕ್ಲಾಸ್, ಎಂಎಲ್ ಕ್ಲಾಸ್, ಎಎಂಜಿ ಎಸ್400 ಕ್ಲಾಸ್, ಎಸ್ 580, ಜಾಗ್ವಾರ್ ಎಕ್ಸ್​ಕೆಆರ್-ಎಸ್ ಕಾರು, ಪೋರ್ಶೆ ಕೇನ್ಯಾನ್, ರೇಂಜ್ ರೋವರ್ ವೋಗ್ ಇನ್ನೂ ಕೆಲವು ಕಾರುಗಳು ಇವೆ.

ಕೃತಿ ಸನೂನ್‌ ಜತೆ ಹೆಸರಿಡದ ಚಿತ್ರವನ್ನೂ ಹೊಂದಿದ್ದಾರೆ. ಇದು 2024ರ ಫೆಬ್ರವರಿ 9ರಂದು ಥಿಯೇಟರ್‌ಗಳಿಗೆ ಬರಲಿದೆ. ಶಾಹಿದ್ ಕಪೂರ್ ಅವರ ಮುಂಬರುವ ಆ್ಯಕ್ಷನ್ ಥ್ರಿಲ್ಲರ್ ಚಿತ್ರದಲ್ಲಿ ನಟಿ ಪೂಜಾ ಹೆಗ್ಡೆ (Pooja Hegde) ನಾಯಕಿಯಾಗಿ ನಟಿಸಲಿದ್ದಾರೆ. ಈ ಬಗ್ಗೆ ಚಿತ್ರತಂಡ ಅಧಿಕೃತ ಘೋಷಿಸಿದೆ. ಇನ್ನೂ ಹೆಸರಿಡದ ಚಿತ್ರ ಪೊಲೀಸ್ ಅಧಿಕಾರಿಯ ಕುರಿತಾಗಿದೆ ಎನ್ನಲಾಗಿದೆ. “ಅಲಾ ವೈಕುಂಠಪುರಮುಲೂ”, “ಬೀಸ್ಟ್”, “ರಾಧೆ ಶ್ಯಾಮ್” ಮತ್ತು “ಕಿಸಿ ಕಾ ಭಾಯ್ ಕಿಸಿ ಕಿ ಜಾನ್” ಚಿತ್ರಗಳಲ್ಲಿ ಕಾಣಿಸಿಕೊಂಡಿರುವ ಪೂಜಾ ಹೆಗ್ಡೆ, ನಿರ್ದೇಶಕ ರೋಶನ್‌ ಆಂಡ್ರ್ಯೂಸ್ ಮತ್ತು ಕಪೂರ್ ಅವರೊಂದಿಗೆ ಮೊದಲ ಬಾರಿಗೆ ಕೈ ಜೋಡಿಸುತ್ತಿರುವುದು ಸಂತಸ ತಂದಿದೆ ಎಂದಿದ್ದಾರೆ.

ಇದನ್ನೂ ಓದಿ: Shahid Kapoor: ಶಾಹಿದ್ ಕಪೂರ್-ಕೃತಿ ಸನೂನ್ ರೊಮ್ಯಾಂಟಿಕ್‌ ಪೋಸ್ಟರ್‌ ಔಟ್‌

ರಶ್ಮಿಕಾ ಮಂದಣ್ಣ ಜತೆಯೂ ಶಾಹಿದ್‌ ನಟನೆ

ನ್ಯಾಶನಲ್‌ ಕ್ರಶ್‌ ರಶ್ಮಿಕಾ ಮಂದಣ್ಣ (Rashmika Mandanna) ಹಲವು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಈಗಾಗಲೇ ರಶ್ಮಿಕಾ ಟಾಲಿವುಡ್‌ ಅಲ್ಲದೇ ಬಾಲಿವುಡ್‌ ಸಿನಿರಂಗದಲ್ಲಿಯೂ ಮಿಂಚಿದ್ದಾರೆ. ಅನುಭವಿ ಅನೀಸ್ ಬಾಜ್ಮಿ ನಿರ್ದೇಶನದ ಹಾಗೂ ಏಕ್ತಾ ಕಪೂರ್ ಮತ್ತು ದಿಲ್ ರಾಜು ನಿರ್ಮಾಣದ ಹೊಸ ಸಿನಿಮಾಗೆ ರಶ್ಮಿಕಾ ಹಾಗೂ ಶಾಹಿದ್‌ ನಾಯಕ ನಾಯಕಿ ಎಂದು ವರದಿಯಾಗಿದೆ.

Exit mobile version