ಬೆಂಗಳೂರು: ಬಾಲಿವುಡ್ ನಟ ಶಾಹಿದ್ ಕಪೂರ್ (Shahid Kapoor) ಅವರಿಗೆ ಫೆ.25 ಜನುಮದಿನದ ಸಂಭ್ರಮ (Shahid Kapoor Birthday Special). ಸಾಮಾಜಿಕ ಜಾಲತಾಣಗಳಲ್ಲಿ ನೆಚ್ಚಿನ ನಟನಿಗೆ ಅಭಿಮಾನಿಗಳು ಶುಭಾಶಯ ತಿಳಿಸುತ್ತಿದ್ದಾರೆ. ಈ ವಿಶೇಷ ದಿನದಂದು, ಶಾಹಿದ್ ತನ್ನ ಕುಟುಂಬದ ಬಗ್ಗೆ ಮಾಧ್ಯಮದೊಂದಿಗೆ ಹಂಚಿಕೊಂಡಿದ್ದಾರೆ. ಮಕ್ಕಳು ಮತ್ತು ಪತ್ನಿ ಮೀರಾ ರಜಪೂತ್ ಅವರ ಕುರಿತು ಮಾತನಾಡಿದ್ದಾರೆ.
ಪತ್ನಿ ಮೀರಾ ರಜಪೂತ್ ಹೊಗಳಿದ ಶಾಹಿದ್!
ಶಾಹಿದ್ ಕಪೂರ್ ಮತ್ತು ಮೀರಾ ರಜಪೂತ್ ಸುಂದರವಾದ ಬಾಂಧವ್ಯವನ್ನು ಹೊಂದಿದ್ದಾರೆ. ದಂಪತಿ ಯಾವಾಗಲೂ ಒಬ್ಬರಿಗೊಬ್ಬರು ಪರಸ್ಪರ ಬೆಂಬಲವಾಗಿ ನಿಲ್ಲುತ್ತಾರೆ. ಅಲ್ಲದೆ, ಮನರಂಜನಾ ಸುದ್ದಿ ಪೋರ್ಟಲ್‌ನೊಂದಿಗೆ ಮಾತನಾಡಿದ ಶಾಹಿದ್ ʻʻಮೀರಾ ನನ್ನ ಕೆಲಸವನ್ನು ಅರ್ಥಮಾಡಿಕೊಳ್ಳುವುದು ಮತ್ತು ಬೆಂಬಲ ನೀಡುವುದು ನನಗೆ ಸಂತೋಷ. ಅವರು ಕುಟುಂಬಕ್ಕಾಗಿ ಹೆಚ್ಚು ಸಮಯವನ್ನು ಮೀಸಲಿಡುತ್ತಾರೆʼʼ ಎಂದು ಹೇಳಿಕೊಂಡಿದ್ದಾರೆ.
ʻʻಮಕ್ಕಳೊಂದಿಗೆ ಸಾಕಷ್ಟು ಸಮಯವನ್ನು ಕಳೆಯುತ್ತೇನೆ. ಅದರಲ್ಲಿಯೂ ನನಗೆ ಸುಂದರವಾದ ಮತ್ತು ತುಂಬಾ ತಿಳಿವಳಿಕೆಯುಳ್ಳ ಮತ್ತು ಬೆಂಬಲ ನೀಡುವ ಹೆಂಡತಿ ಇದ್ದಾಳೆ. ಆದ್ದರಿಂದ ಅವಳು ನನ್ನ ಕೆಲಸದ ಬಗ್ಗೆ ಚೆಂದವಾಗಿ ಅರಿತಿದ್ದಾಳೆ. ನಾನು ಕೂಡ ನನ್ನ ಕುಟುಂಬಕ್ಕಾಗಿ ಸಮಯ ಮೀಸಲಿಡುತ್ತೇನೆ. ವಿಶೇಷವಾಗಿ ಕೋವಿಡ್ ಸಮಯದಲ್ಲಿ ನಾನು ಕಲಿತ ದೊಡ್ಡ ವಿಷಯ ಎಂದರೆ, ಕುಟುಂಬದೊಂದಿಗೆ ಸಮಯ ಕಳೆಯುವುದು, ನೀವು ಪ್ರೀತಿಸುವವರೊಂದಿಗೆ ಹೆಚ್ಚು ಸಮಯ ಕಳೆಯುವುದು ಬಹಳ ಮುಖ್ಯ. ಕುಟುಬವನ್ನು ಯಾವಾಗಲೂ ಬಿಟ್ಟು ಕೊಡಬೇಡಿ, ಬದ್ಧರಾಗಿರಿʼʼಎಂದು ಹೇಳಿಕೊಂಡಿದ್ದಾರೆ.
ಇದನ್ನೂ ಓದಿ: Shahnawaz Pradhan Dies: ಬಾಲಿವುಡ್ ನಟ ಶಹನವಾಜ್ ಪ್ರಧಾನ್ ಹೃದಯಾಘಾತದಿಂದ ನಿಧನ
ಕುಟುಂಬದ ಜತೆ ಶಾಹಿದ್ ಕಪೂರ್
ಇದನ್ನೂ ಓದಿ: Bollywood Actress: ಶಿಮ್ಮರ್ ಸೀರೆಗಳಲ್ಲಿ ಮಿಂಚಿದ ಬಾಲಿವುಡ್ ನಟಿಯರು
ಶಾಹಿದ್ ಕಪೂರ್ ಅವರು 2015ರಲ್ಲಿ ಮೀರಾ ರಜ್ಪೂತ್ ಅವರನ್ನು ಮದುವೆ ಆದರು. ಆಗ ಅವರಿಗೆ 20 ವರ್ಷ ವಯಸ್ಸು. ಶಾಹಿದ್ಗೆ 34 ವರ್ಷ. ಇಬ್ಬರ ಮಧ್ಯೆ 14 ವರ್ಷ ವಯಸ್ಸಿನ ಅಂತರ ಇದೆ. ಮದುವೆಗೆ ಇದು ಅಡ್ಡಿ ಆಗಿಲ್ಲ. ಶಾಹಿದ್ ಕಪೂರ್ ಅವರ ನಟನೆಯ ‘ಫರ್ಜಿ’ ವೆಬ್ ಸೀರಿಸ್ ಇತ್ತೀಚೆಗೆ ರಿಲೀಸ್ ಆಗಿ ಯಶಸ್ಸು ಕಂಡಿದೆ. ಅವರ ಅಭಿನಯವನ್ನು ಪ್ರಶಂಸಿಸಲಾಯಿತು. ಇತ್ತೀಚಿನ ವರದಿಗಳ ಪ್ರಕಾರ ‘ಫರ್ಜಿ’ ವೆಬ್ ಸೀರಿಸ್ – 2 ಗಾಗಿ ಸಿದ್ಧರಾಗಿದ್ದಾರೆ. ಆದರೆ ಸಿಟಾಡೆಲ್ ಮತ್ತು ಫ್ಯಾಮಿಲಿ ಮ್ಯಾನ್ 3 ಪೂರ್ಣಗೊಂಡ ನಂತರವೇ ನಟ ಅದರ ಕಡೆ ಗಮನ ಕೊಡಲಿದ್ದಾರೆ ಎನ್ನಲಾಗಿದೆ.