Site icon Vistara News

Shahrukh Khan | ವಿಶ್ವದ ಶ್ರೀಮಂತ ನಟರ ಪಟ್ಟಿ ಪ್ರಕಟ, ಶಾರುಖ್ ಎಷ್ಟನೇ ಸ್ಥಾನದಲ್ಲಿದ್ದಾರೆ?

Shah Rukh Khan-Sameer Wankhede WhatsApp chats: How Actor Showed Fatherhood

Shah Rukh Khan-Sameer Wankhede WhatsApp chats: How Actor Showed Fatherhood

ಬೆಂಗಳೂರು : ಶಾರುಖ್‌ (Shahrukh Khan)-ದೀಪಿಕಾ ಪಡುಕೋಣೆ ಅಭಿನಯದ ಪಠಾಣ್‌ ಸಿನಿಮಾ ತೆರೆಗೆ ಬರಲು ದಿನಗಣನೆ ಆರಂಭಗೊಂಡಿದೆ. ನಾಲ್ಕು ವರ್ಷಗಳ ನಂತರ ಹೊಸ ಅವತಾರದಲ್ಲಿ ಶಾರುಖ್‌ ಕಾಣಿಸಿಕೊಳ್ಳುತ್ತಿದ್ದಾರೆ. ನಾಲ್ಕು ವರ್ಷಗಳ ಕಾಲ ವಿರಾಮ ತೆಗೆದುಕೊಂಡಿದ್ದರೂ ವಿಶ್ವದ ಶ್ರೀಮಂತ ನಟರ ಪಟ್ಟಿಯಲ್ಲಿ ಕಾಣಿಸಿಕೊಂಡಿದ್ದಾರೆ. ಟಾಮ್ ಕ್ರೂಸ್ ಮತ್ತು ಜಾರ್ಜ್ ಕ್ಲೂನಿಯಂತಹ ಸ್ಟಾರ್‌ಗಳನ್ನು ಸೋಲಿಸಿ ನಾಲ್ಕನೇ ಸ್ಥಾನದಲ್ಲಿದ್ದಾರೆ. SRK ವಿಶ್ವದ ನಾಲ್ಕನೇ ಶ್ರೀಮಂತ ನಟ ಎಂದು ಖ್ಯಾತಿ ಪಡೆದಿದ್ದಾರೆ.

ಶಾರುಖ್ ಖಾನ್ ವಿಶ್ವದ ನಾಲ್ಕನೇ ಶ್ರೀಮಂತ ನಟ ಎಂದು ಹೆಸರಿಸಿದ್ದಾರೆ. ಅವರು ಟಾಮ್ ಕ್ರೂಸ್, ಜಾರ್ಜ್ ಕ್ಲೂನಿ, ಜಾಕಿ ಚಾನ್ ಮತ್ತು ರಾಬರ್ಟ್ ಡಿ ನಿರೋ ಅವರಂತಹ ತಾರೆಗಳನ್ನು ಸೋಲಿಸಿದ್ದಾರೆ. ಅವರ ನಿವ್ವಳ ಮೌಲ್ಯವು 70 ಕೋಟಿ ರೂ. ಆಗಿದೆ. ವರ್ಲ್ಡ್ ಆಫ್ ಸ್ಟ್ಯಾಟಿಸ್ಟಿಕ್ಸ್ ಈ ಪಟ್ಟಿಯನ್ನು ಪ್ರಕಟಿಸಿದೆ. ವರ್ಲ್ಡ್ ಆಫ್ ಸ್ಟಾಟಿಸ್ಟಿಕ್ಸ್ ಬಿಡುಗಡೆ ಮಾಡಿರುವ 10 ಮಂದಿ ನಟರ ಪೈಕಿ 9 ಜನ ಹಾಲಿವುಡ್‌ನವರು. ಶಾರುಖ್ ಶ್ರೀಮಂತ ನಂತರ ಪಟ್ಟಿಯಲ್ಲಿ ಏಕೈಕ ಭಾರತೀಯ ನಟ ಎನಿಸಿಕೊಂಡಿದ್ದಾರೆ. ಬಾಲಿವುಡ್ ನಟ ಶಾರುಖ್ ಖಾನ್ ವಿಶ್ವದ ನಾಲ್ಕನೇ ಶ್ರೀಮಂತ ನಟರ ಪಟ್ಟಿ ಸೇರಿಕೊಂಡಿದ್ದಾರೆ. ಉಳಿದಂತೆ ಹಾಲಿವುಡ್‌ ನಟರ ಹೆಸರುಗಳೇ ಹೆಚ್ಚಿವೆ.

ಇದನ್ನೂ ಓದಿ | Pathaan Film | ದುಬೈನ ಬುರ್ಜ್ ಖಲೀಫಾದಲ್ಲಿ ʻಪಠಾಣ್‌ʼ ಟ್ರೈಲರ್‌ ಅನಾವರಣ!

ಜನವರಿ 25, ಗಣರಾಜ್ಯೋತ್ಸವದ ದಿನದ ಮುನ್ನಾದಿನವೇ ಪಠಾಣ್ ಸಿನಿಮಾ ರಾಷ್ಟ್ರಾದ್ಯಂತ ಥಿಯೇಟರ್​ಗಳಲ್ಲಿ ಬಿಡುಗಡೆಯಾಗಲಿದೆ. ಯಶ್​ ರಾಜ್​ ಬ್ಯಾನರ್​ನಡಿ ನಿರ್ಮಾಣವಾಗುತ್ತಿರುವ ಪಠಾಣ್​ ಸಿನಿಮಾವನ್ನು ಸಿದ್ದಾರ್ಥ್​ ಆನಂದ್​ ನಿರ್ದೇಶನ ಮಾಡಿದ್ದಾರೆ. ಶಾರುಖ್ ಖಾನ್, ದೀಪಿಕಾ ಪಡುಕೋಣೆ ಮತ್ತು ಜಾನ್ ಅಬ್ರಹಾಂ ಮೊದಲ ಬಾರಿಗೆ ಪಠಾಣ್ ಚಿತ್ರದಲ್ಲಿ ಒಟ್ಟಿಗೆ ಕಾಣಿಸಿಕೊಂಡಿದ್ದಾರೆ.ನವೆಂಬರ್​ನಲ್ಲಿ ಟೀಸರ್​ ಬಿಡುಗಡೆಯಾಗಿದೆ.

ಇದನ್ನೂ ಓದಿ | Pathaan Film | ʻಜೂಮ್ ಜೋ ಪಠಾಣ್‌ʼ ರಿ ಕ್ರಿಯೇಟ್‌ ಮಾಡಿದ ಇಂಡೋನೇಷ್ಯಾ ಡ್ಯಾನ್ಸ್‌ ಗ್ರೂಪ್‌: ವಿಡಿಯೊ ವೈರಲ್‌!

Exit mobile version