Site icon Vistara News

Shahrukh Khan | ಶಾರುಖ್‌ ʻಪಠಾಣ್‌ʼ ಹೇರ್‌ಸ್ಟೈಲ್‌ ಟ್ರೆಂಡ್ ಬಹುಶಃ ನನ್ನಿಂದಾಗಿರಬಹುದು ಎಂದ ಮರಾಠಿ ಬಿಗ್‌ ಬಾಸ್‌ ಸ್ಪರ್ಧಿ!

Shahrukh Khan

ಬೆಂಗಳೂರು: ಮರಾಠಿ ಮಾಜಿ ಬಿಗ್ ಬಾಸ್ ಸ್ಪರ್ಧಿ ಅಭಿಜಿತ್ ಬಿಚುಕಲೆ ಅವರು ʻʻಶಾರುಖ್‌ ನನ್ನ ಹೇರ್ ಸ್ಟೈಲ್‌ ಕಾಪಿ ಮಾಡಿರಬಹುದುʼʼ ಎಂದು ಹೇಳಿಕೆ ನೀಡಿದ್ದಾರೆ. ಬಾಲಿವುಡ್ ಸೂಪರ್‌ಸ್ಟಾರ್ ಶಾರುಖ್ ಖಾನ್ (Shahrukh Khan ) ಅವರು ʻಪಠಾಣ್‌ʼ ಚಿತ್ರದಲ್ಲಿ ಹೊಸ ಲುಕ್‌ನೊಂದಿಗೆ ರಿವೀಲ್‌ ಆಗಿದ್ದಾರೆ. ʻʻಅವರ ಹೇರ್‌ಸ್ಟೈಲ್‌ ನೋಡಿದಾಗ, ಬಹುಶಃ ನನ್ನ ರಿಯಾಲಿಟಿ ಶೋ ನೋಡಿ ನನ್ನ ಹೇರ್‌ಸ್ಟೈಲ್‌ ಕಾಪಿ ಮಾಡಿರಬಹುದು ಅನಿಸುತ್ತದೆ ʼʼ ಎಂದು ಅಭಿಜಿತ್ ಬಿಚುಕಲೆ ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದಾರೆ.

ʻʻಸೋಷಿಯಲ್ ಮೀಡಿಯಾದಲ್ಲಿ ಬಳಕೆದಾರರು ನನ್ನ ಹೇರ್‌ಸ್ಟೈಲ್‌ ಹಾಗೂ ʻಪಠಾಣ್‌ʼ ಸಿನಿಮಾದಲ್ಲಿರುವ ಶಾರುಖ್‌ ಅವರ ಹೇರ್‌ಸ್ಟೈಲ್‌ ಒಂದೇ ತರಹವಿದೆ ಎಂದು ಹೋಲಿಕೆ ಮಾಡುತ್ತಿದ್ದಾರೆʼʼ ಎಂದು ಅಭಿಜಿತ್ ಬಿಚುಕಲೆ ಹೇಳಿದ್ದಾರೆ.

ಇದನ್ನೂ ಓದಿ | Asha Parekh | ಬಾಲಿವುಡ್‌ ಟಾರ್ಗೆಟ್‌ ಆಗುತ್ತಿದೆ ಎಂದ ನಟಿ ಆಶಾ ಪರೇಖ್: ʻಪಠಾಣ್‌ʼ ವಿವಾದದ ಕುರಿತು ಹೇಳಿದ್ದೇನು?

“ಪಠಾಣ್‌ನಲ್ಲಿ ಶಾರುಖ್ ನನ್ನಂತೆ ಕಾಣುತ್ತಾರೆʼʼ ಎಂತಲೂ ಅಭಿಜಿತ್‌ ಹೇಳಿಕೊಂಡಿದ್ದಾರೆ. ಸಂದರ್ಶನವೊಂದರಲ್ಲಿ ಅಭಿಜಿತ್‌ ಮಾತನಾಡಿ ʻʻಈ ರೀತಿ ನನ್ನ ಮತ್ತು ಶಾರುಖ್‌ ಅವರನ್ನು ಹೋಲಿಕೆ ಮಾಡುತ್ತಿರುವುದು ನನ್ನ ಪಾಲಿಗೆ ಪಾಸಿಟಿವ್‌ ಸಂಗತಿಯಾಗಿದೆ. ಶಾರುಖ್ ಬಿಗ್ ಬಾಸ್ ಸೀಸನ್ 15 ವೀಕ್ಷಿಸುತ್ತಿದ್ದರು ಎಂದು ನಾನು ಭಾವಿಸುತ್ತೇನೆ. ಈ ಟ್ರೆಂಡ್ ಬಹುಶಃ ನನ್ನಿಂದಾಗಿರಬಹುದು” ಎಂದು ಅವರು ಹೇಳಿದ್ದಾರೆ.

ಅಭಿಜಿತ್ ಬಿಚುಕಲೆ ಬಿಗ್ ಬಾಸ್ ಮರಾಠಿ ಸೀಸನ್ 2ರಲ್ಲಿ ಸ್ಪರ್ಧಿಯಾಗಿದ್ದರು. ವೈಲ್ಡ್ ಕಾರ್ಡ್ ಮೂಲಕ 15ನೇ ಸೀಸನ್‌ಗೆ ಪ್ರವೇಶಿಸಿದ್ದರು. ಬಿಗ್ ಬಾಸ್‌ನಲ್ಲಿ ಅಭಿಜಿತ್ ಬಿಚುಕಲೆ ಅವರ ವರ್ತನೆಗಳು ತಮಾಷೆಯಾಗಿ ಕಾಣಿಸಿಕೊಂಡಿದ್ದರಿಂದ ಆರಂಭದಲ್ಲಿ ಅವರು ಹಲವು ಅಭಿಮಾನಿಗಳನ್ನು ಹೊಂದಿದ್ದರು.

ಇದನ್ನೂ ಓದಿ | Rashmika Mandanna | ರಶ್ಮಿಕಾ ಮಂದಣ್ಣ ಭೋಜ್‌ಪುರಿ ಸಿನಿಮಾಗೆ ಸೂಕ್ತ, ಹಿಂದಿಗಲ್ಲ ಎಂದ ವಿಮರ್ಶಕ ಕಮಾಲ್ ಖಾನ್!

Exit mobile version