Site icon Vistara News

Shahrukh Khan | ಶಾರುಖ್‌ ಖಾನ್‌ ಅಭಿನಯದ `ಅಂಜಾಮ್‌’ ಸಾಹಸ ದೃಶ್ಯ ನೆನೆದ ಅಭಿಮಾನಿಗಳು : ವಿಡಿಯೊ ವೈರಲ್‌!

Shahrukh Khan

ಬೆಂಗಳೂರು : ಬಾಲಿವುಡ್‌ ನಟ ಶಾರುಖ್‌ ಖಾನ್‌ (Shahrukh Khan) ಅಭಿನಯದ ʻಪಠಾಣ್‌ʼ ಸಿನಿಮಾ ಟ್ರೈಲರ್‌ ಬಿಡುಗಡೆಗೊಂಡಿದೆ. ಇದರ ಬೆನ್ನಲ್ಲೇ 1994ರಲ್ಲಿ ತೆರೆ ಕಂಡ ‘ಅಂಜಾಮ್’ ಸಿನಿಮಾದ ‘ಬಢೀ ಮುಷ್ಕಿಲ್ ಹೇ’ ಹಾಡಿನ ಸಾಹಸ ದೃಶ್ಯವೊಂದು ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗುತ್ತಿದೆ. ಶಾರುಖ್‌ ಬಾಲಿವುಡ್‌ ರೊಮ್ಯಾಂಟಿಕ್‌ ಬಾಯ್‌ ಎಂತಲೇ ಖ್ಯಾತಿ ಪಡೆದಿದ್ದಾರೆ. ಇದೀಗ ಟ್ವೀಟ್‌ ಬಳಕೆದಾರರು, ಶಾರುಖ್‌ ಅವರ ಸಾಹಸ ದೃಶ್ಯವನ್ನು ಶೇರ್‌ ಮಾಡಿ ಹೊಗಳಿದ್ದಾರೆ.

1994ರಲ್ಲಿ ತೆರೆ ಕಂಡ ‘ಅಂಜಾಮ್’ ಸಿನಿಮಾದಲ್ಲಿ ಶಾರುಖ್‌ ಹಾಗೂ ಮಾಧುರಿ ದೀಕ್ಷಿತ್‌ ಒಟ್ಟಿಗೆ ನಟಿಸಿದ್ದರು. ಚಲಿಸುವ ಟ್ಯಾಕ್ಸಿಯ ಮೇಲೆ ಶಾರುಖ್‌ ಸಾಹಸಮಯವಾಗಿ ಚಿಲ್‌ ಆಗಿ ಡ್ಯಾನ್ಸ್‌ ಮಾಡುತ್ತಿರುವ ವಿಡಿಯೊ ವೈರಲ್‌ ಆಗಿದೆ. ಪ್ರಮಿತ್ ಎಂಬುವರು ವಿಡಿಯೊ ಶೇರ್‌ ಮಾಡಿ ತಮ್ಮ ಟ್ವೀಟ್‌ನಲ್ಲಿ ರೆ ʻʻಗ್ರೀನ್‌ ಪರದೆ ಇಲ್ಲ. ತಂತಿಗಳಿಲ್ಲ. ಪ್ಯಾಡಿಂಗ್ ಇಲ್ಲ. ಶಾರುಖ್ ಅವರ ಈ ಸಾಹಸ ಅಕ್ಷರಶಃ ಅದ್ಭುತವಾದದ್ದು ಎಂದು ʼಬರೆದಿದ್ದಾರೆ.

ಇದನ್ನೂ ಓದಿ | World’s Richest Actors | ಶಾರುಖ್‌ ಖಾನ್‌ ಸಂಪತ್ತು 6,306 ಕೋಟಿ ರೂ, ವಿಶ್ವದ ಅತಿ ಶ್ರೀಮಂತ ನಟರ ಪಟ್ಟಿಯಲ್ಲಿ ನಂ.4

“90 ರ ದಶಕದಲ್ಲಿ ನಾವು ಶಾರುಖ್ ಖಾನ್, ಅಜಯ್ ದೇವಗನ್, ಅಕ್ಷಯ್ ಕುಮಾರ್ ಮತ್ತು ಸಲ್ಮಾನ್ ಖಾನ್ ಅವರಲ್ಲಿ ನಂಬಲಾಗದಷ್ಟು ಕಷ್ಟಪಟ್ಟು ದುಡಿಯುವ ನಟರನ್ನು ನೋಡಿದ್ದೇವೆ. ಎಲ್ಲರೂ ಬಹುಶಃ ಎಲ್ಲರ ಮೆಚ್ಚುಗೆ ಪಡೆದ ನಟರಲ್ಲ.ಆದರೆ ಅವರು ನಿಜವಾಗಿಯೂ ಸಿನಿಮಾಗೆ ಸಮರ್ಪಿತರಾಗಿದ್ದರು. ಅವರೆಲ್ಲರೂ ಇನ್ನೂ ನಿಂತಿರುವುದು ಆಶ್ಚರ್ಯವೇನಿಲ್ಲ” ಎಂದು ಟ್ವಿಟ್ಟರ್ ಬಳಕೆದಾರರು ಬರೆದಿದ್ದಾರೆ.

ಜನವರಿ 10 ಮಂಗಳವಾರ ಬೆಳಗ್ಗೆ 11 ಗಂಟೆಗೆ ʻಪಠಾಣ್‌ʼ (Pathaan Film ) ಟ್ರೈಲರ್ ಹಿಂದಿ, ತಮಿಳು ಮತ್ತು ತೆಲುಗಿನಲ್ಲಿ ಬಿಡುಗಡೆಯಾಗಿದೆ. ಶನಿವಾರ ಜನವರಿ 14ರಂದು ದುಬೈನ ಬುರ್ಜ್ ಖಲೀಫಾದಲ್ಲಿ ʻಪಠಾಣ್‌ʼ ಟ್ರೈಲರ್‌ ಪ್ರದರ್ಶಿಸಲಾಗಿದೆ. ಜನವರಿ 25, ಗಣರಾಜ್ಯೋತ್ಸವದ ದಿನದ ಮುನ್ನಾದಿನವೇ ಪಠಾಣ್ ಸಿನಿಮಾ ರಾಷ್ಟ್ರಾದ್ಯಂತ ಥಿಯೇಟರ್​ಗಳಲ್ಲಿ ಬಿಡುಗಡೆಯಾಗಲಿದೆ. ಯಶ್​ ರಾಜ್​ ಬ್ಯಾನರ್​ನಡಿ ನಿರ್ಮಾಣವಾಗುತ್ತಿರುವ ಪಠಾಣ್​ ಸಿನಿಮಾವನ್ನು ಸಿದ್ಧಾರ್ಥ್‌​ ಆನಂದ್​ ನಿರ್ದೇಶನ ಮಾಡಿದ್ದಾರೆ. ಶಾರುಖ್ ಖಾನ್, ದೀಪಿಕಾ ಪಡುಕೋಣೆ ಮತ್ತು ಜಾನ್ ಅಬ್ರಹಾಂ ಮೊದಲ ಬಾರಿಗೆ ಪಠಾಣ್ ಚಿತ್ರದಲ್ಲಿ ಒಟ್ಟಿಗೆ ಕಾಣಿಸಿಕೊಂಡಿದ್ದಾರೆ.ನವೆಂಬರ್​ನಲ್ಲಿ ಟೀಸರ್​ ಬಿಡುಗಡೆಯಾಗಿದೆ.

ಇದನ್ನೂ ಓದಿ | Shah Rukh Khan Donation | ಭೀಕರ ಅಪಘಾತಕ್ಕೆ ಬಲಿಯಾದ ಅಂಜಲಿ ಸಿಂಗ್ ಕುಟುಂಬಸ್ಥರಿಗೆ ಶಾರುಖ್‌ ಖಾನ್‌ ನೆರವು

Exit mobile version