Site icon Vistara News

Shahrukh Khan: ಶಾರುಖ್‌ ಅಭಿನಯದ ʻಜವಾನ್‌ʼ ಸಿನಿಮಾ ದೃಶ್ಯ ಲೀಕ್‌

Shahrukh Khan

ಬೆಂಗಳೂರು: ನಟ ಶಾರುಖ್‌ ಖಾನ್‌ ಅಭಿನಯದ ʻಪಠಾಣ್ ʼ ಸಿನಿಮಾ ಯಶಸ್ಸಿನ ಬಳಿಕ ಜವಾನ್‌ (Shahrukh Khan) ಸಿನಿಮಾ ಬಗ್ಗೆ ಅವರ ಅಭಿಮಾನಿಗಳು ಕುತೂಹಲದಿಂದ ಕಾಯುತ್ತಿದ್ದಾರೆ. ಆದರೆ ಇದೀಗ ಜವಾನ್ ಸಿನಿಮಾದ ದೃಶ್ಯ ಆನ್‌ಲೈನ್‌ನಲ್ಲಿ ಸೋರಿಕೆಯಾಗಿದೆ. ಶೂಟಿಂಗ್‌ ಸೆಟ್‌ನಲ್ಲಿ ಶಾರುಖ್‌ ನಿಭಾಯಿಸುತ್ತಿರುವ ಆ್ಯಕ್ಷನ್‌ ದೃಶ್ಯಗಳು ಲೀಕ್‌ ಆಗಿದೆ.

ನೀಲಿ ಪ್ಯಾಂಟ್ ಮತ್ತು ನೀಲಿ ಶರ್ಟ್‌ನಲ್ಲಿ ಶಾರುಖ್‌ ಕಾಣಿಸಿಕೊಂಡಿದ್ದಾರೆ. ವಿಡಿಯೊ ಲೀಕ್‌ ಆಗುತ್ತಿದ್ದಂತೆ ʻಹಿಂದೆಂದೂ ಕಾಣದ ಅವತಾರದಲ್ಲಿ ಶಾರುಖ್‌” ಎಂದು ಅಭಿಮಾನಿಯೊಬ್ಬರು ಕಮೆಂಟ್‌ ಮಾಡಿದ್ದಾರೆ. ಜವಾನ್ ಚಿತ್ರವನ್ನು ಅಟ್ಲಿ ನಿರ್ದೇಶಿಸಿದ್ದಾರೆ. ನಯನತಾರಾ ಮತ್ತು ವಿಜಯ್ ಸೇತುಪತಿ ಕೂಡ ನಟಿಸಿದ್ದಾರೆ. ಈ ಚಿತ್ರದ ಪ್ರೊಮೊ ಕಳೆದ ವರ್ಷ ಬಿಡುಗಡೆಯಾಯಿತು. ನಯನತಾರಾ ಇತ್ತೀಚೆಗಷ್ಟೇ ಚಿತ್ರದ ಚಿತ್ರೀಕರಣವನ್ನು ಮುಗಿಸಿದ್ದಾರೆ.

ಶಾರುಖ್‌ ಖಾನ್‌ ನಟನೆಯ ʼಜವಾನ್‌ʼ ಸಿನಿಮಾದಲ್ಲಿ ರಾಮ್‌ ಚರಣ್‌ ಅತಿಥಿ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂದು ವರದಿಯಿದೆ. ಜವಾನ್‌ ಸಿನಿಮಾದಲ್ಲಿ ಮುಖ್ಯ ಪಾತ್ರವೊಂದರಲ್ಲಿ ನಟಿಸುವುದಕ್ಕೆ ಟಾಲಿವುಡ್‌ನ ಅಲ್ಲು ಅರ್ಜುನ್‌ ಅವರಿಗೆ ಸಿನಿ ತಂಡ ಕೇಳಿಕೊಂಡಿತ್ತು. ಆದರೆ ಅಲ್ಲು ಅದಕ್ಕೆ ಒಪ್ಪಿಲ್ಲ ಎಂದು ಹೇಳಲಾಗಿದೆ. ಹಾಗೆಯೇ ದಳಪತಿ ವಿಜಯ್‌ ಅವರ ಬಳಿಯೂ ಜವಾನ್‌ ಸಿನಿಮಾದಲ್ಲಿ ನಟಿಸುವುದಕ್ಕೆ ಕೇಳಿಕೊಳ್ಳಲಾಗಿತ್ತು. ಅಲ್ಲು ಮತ್ತು ದಳಪತಿ ವಿಜಯ್‌ ಇಬ್ಬರೂ ಬೇರೆ ಬೇರೆ ಸಿನಿಮಾಗಳ ಚಿತ್ರೀಕರಣದಲ್ಲಿ ಬಿಜಿ ಇರುವ ಹಿನ್ನೆಲೆಯಲ್ಲಿ ಜವಾನ್‌ ಸಿನಿಮಾಕ್ಕೆ ಒಪ್ಪಿಕೊಂಡಿಲ್ಲ ಎಂದು ಹೇಳಲಾಗಿದೆ.

ಇದನ್ನೂ ಓದಿ: Actor Ram Charan : ಶಾರುಖ್‌ ಖಾನ್‌ ʼಜವಾನ್‌ʼ ಸಿನಿಮಾದಲ್ಲಿ ಅಲ್ಲು ಬದಲು ರಾಮ್‌ ಚರಣ್‌ ನಟನೆ?

ಇದೀಗ ಚಿತ್ರತಂಡ ರಾಮ್‌ ಚರಣ್‌ ಅವರ ಬಳಿ ತೆರಳಿದ್ದು, ಅವರು ಶಾರುಖ್‌ ಜತೆ ನಟಿಸಲು ಒಪ್ಪಿಕೊಂಡಿದ್ದಾರೆ ಎನ್ನಲಾಗಿದೆ. ಹಾಗೊಂದು ವೇಳೆ ಆದರೆ ಮೊದಲನೇ ಬಾರಿಗೆ ಶಾರುಖ್‌ ಮತ್ತು ರಾಮ್‌ ಚರಣ್‌ ಜೋಡಿಯನ್ನು ನಾವು ತೆರೆಯ ಮೇಲೆ ಕಾಣಬಹುದಾಗಿದೆ. ಇನ್ನೊಂದು ವಿಚಾರವೆಂದರೆ, ರಾಮ್‌ ಚರಣ್‌ ಅವರು ಸಲ್ಮಾನ್‌ ಖಾನ್‌ ನಟನೆಯ ʼಕಿಸಿ ಕಾ ಭಾಯ್‌ ಕಿಸಿ ಕಾ ಜಾನ್‌ʼ ಸಿನಿಮಾದಲ್ಲಿಯೂ ನಟಿಸಲಿದ್ದಾರೆ.ನ್ನಡದ ಖ್ಯಾತ ನಟ ಶಿವರಾಜ್‌ ಕುಮಾರ್‌ ಅವರೂ ಈ ಚಿತ್ರದಲ್ಲಿ ವಿಶೇಷ ಪಾತ್ರವೊಂದರಲ್ಲಿ ನಟಿಸುತ್ತಾರೆ ಎನ್ನಲಾಗುತ್ತಿದೆ. ಪುಣೆ, ಮುಂಬೈ, ಹೈದರಾಬಾದ್‌ ಮತ್ತು ಚೆನ್ನೈನಲ್ಲಿ ಚಿತ್ರೀಕರಣ ನಡೆಯುತ್ತಿದೆ.

Exit mobile version