Site icon Vistara News

Shahrukh Khan | ಹಲವು ದೇಶಗಳಲ್ಲಿ ಶಾರುಖ್‌ ಅಭಿನಯದ ʻಪಠಾಣ್‌ʼ ಚಿತ್ರೀಕರಣ: ಶೀಘ್ರವೇ ತೆರೆಗೆ!

Shahrukh Khan (pathaan film)

ಬೆಂಗಳೂರು: 2018ರಲ್ಲಿ ʻಜೀರೋ’ ಚಿತ್ರ ತೆರೆಕಂಡ ಬಳಿಕ ಶಾರುಖ್‌ ಖಾನ್‌ (Shahrukh Khan) ʻಪಠಾಣ್‌ʼ ಸಿನಿಮಾ ಮೂಲಕ ಮತ್ತೆ ತೆರೆ ಮೇಲೆ ಕಾಣಿಸಿಕೊಳ್ಳುತ್ತಿದ್ದಾರೆ. ಶಾರುಖ್ ಖಾನ್‌ ಅವರ ‘ಪಠಾಣ್’ ಸಿನಿಮಾ ಶೀಘ್ರವೇ ತೆರೆಗೆ ಬರಲಿದ್ದು, ಇದೊಂದು ಅದ್ಧೂರಿ ಆ್ಯಕ್ಷನ್ ಸಿನಿಮಾ ಆಗಿರಲಿದೆ. ಸಿನಿಮಾವನ್ನು ಎಂಟು ವಿವಿಧ ದೇಶಗಳಲ್ಲಿ ಚಿತ್ರೀಕರಣ ಮಾಡಲಾಗಿದೆ ಎಂದು ಸಿನಿಮಾದ ನಿರ್ಮಾಪಕ ಆದಿತ್ಯ ಚೋಪ್ರಾ ಹೇಳಿಕೊಂಡಿದ್ದಾರೆ.

ಚಿತ್ರದಲ್ಲಿ ಜಾನ್ ಅಬ್ರಾಹಂ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಜನವರಿ 25, 2023ಕ್ಕೆ ಚಿತ್ರ ಬಿಡುಗಡೆಗೊಳ್ಳುತ್ತಿದೆ. ಹಿಂದಿ, ತಮಿಳು ಮತ್ತು ತೆಲುಗಿನಲ್ಲಿ ರಿಲೀಸ್‌ ಆಗುತ್ತಿರುವುದಾಗಿ ಚಿತ್ರ ತಂಡ ಹಂಚಿಕೊಂಡಿದೆ. ʻಪಠಾಣ್’ ಸಿನಿಮಾವನ್ನು ಭಾರತ, ಇಟಲಿ, ಯುಎಇ, ಫ್ರಾನ್ಸ್, ಟರ್ಕಿ, ಸ್ಪೇನ್, ರಷ್ಯಾ ಹಾಗೂ ಅಫಘಾನಿಸ್ತಾನದಲ್ಲಿ ಚಿತ್ರೀಕರಣ ಮಾಡಲಾಗಿದೆ. ಸಿನಿಮಾದ ಕೆಲವು ಸ್ಟಿಲ್‌ಗಳನ್ನು ನಿರ್ಮಾಪಕ ಆದಿತ್ಯ ಚೋಪ್ರಾ ಹಂಚಿಕೊಂಡಿದ್ದು, ಇದೊಂದು ಭರ್ಜರಿ ಆ್ಯಕ್ಷನ್ ಸಿನಿಮಾ ಆಗಿದ್ದು, ಹಲವು ಮೈನವಿರೇಳಿಸುವ ದೃಶ್ಯಗಳು ಸಿನಿಮಾದಲ್ಲಿರಲಿವೆʼʼ ಎಂದಿದ್ದಾರೆ.

ಇದನ್ನೂ ಓದಿ | Pathaan Film | ಶಾರುಖ್‌ ಖಾನ್‌ ಜನುಮದಿನಕ್ಕೆ ʻಪಠಾಣ್‌ʼಸಿನಿಮಾ ಟೀಸರ್‌ ಔಟ್‌: ರಗಡ್‌ ಲುಕ್‌ ಅಂದ್ರು ಫ್ಯಾನ್ಸ್‌!

ಈ ಮುಂಚೆ ದೀಪಿಕಾ ಅವರ ಲುಕ್‌ ಚಿತ್ರತಂಡ ರಿವೀಲ್‌ ಮಾಡಿತ್ತು. ಪೋಸ್ಟರ್‌ ನೋಡುವಾಗ ಗನ್‌ ಹಿಡಿದು ಗುರಿಯಿಟ್ಟು ಹೊಡೆಯುವಂತೆ ಖಡಕ್‌ ಲುಕ್‌ನಲ್ಲಿ ಮಿಂಚಿದ್ದಾರೆ ಡಿಂಪಲ್‌ ಸುಂದರಿ. ಕಮೆಂಟ್‌ನಲ್ಲಿ ದೀಪಿಕಾ ಅಭಿಮಾನಿಗಳು ಸಂತಸ ವ್ಯಕ್ತ ಪಡಿಸಿದ್ದರು. ಶಾರುಖ್ ಖಾನ್ ಅವರು ದೀಪಿಕಾ ಮೋಷನ್ ಪೋಸ್ಟರ್‌ ಅನ್ನು ಹಂಚಿಕೊಂಡು “ನಿನ್ನನ್ನು ಕೊಲ್ಲಲು ಆಕೆಗೆ ಬುಲೆಟ್ ಅಗತ್ಯವಿಲ್ಲ” ಎಂದು ಬರೆದುಕೊಂಡಿದ್ದರು.

ಪಠಾಣ್‌ ಸಿನಿಮಾದ ನಂತರ ಶಾರುಖ್‌ ಖಾನ್‌ ʻಡಂಕಿʼ ಸಿನಿಮಾ ತೆರೆಗೆ ಬರಲಿದೆ. ನಿರ್ದೇಶಕ ರಾಜ್‌ಕುಮಾರ್‌ ಹಿರಾನಿ ಈ ಸಿನಿಮಾವನ್ನು ನಿರ್ದೇಶಿಸುತ್ತಿದ್ದಾರೆ. ಸಿನಿಮಾದಲ್ಲಿ ತಾಪ್ಸಿ ಪನ್ನು ನಾಯಕಿಯಾಗಿ ನಟಿಸುತ್ತಿದ್ದಾರೆ. ಈಗಾಗಲೇ ಚಿತ್ರದ ಚಿತ್ರೀಕರಣ ಪ್ರಾರಂಭಗೊಂಡಿದೆ.

2013ರಲ್ಲಿ ನಟ ಶಾರುಖ್‌ ಹಾಗೂ ನಟಿ ದೀಪಿಕಾ ಪಡುಕೋಣೆ ʻಚೆನ್ನೈ ಎಕ್ಸ್‌ಪ್ರೆಸ್‌ʼನಲ್ಲಿ ನಟಿಸಿ ದೊಡ್ಡ ಹಿಟ್‌ ಚಿತ್ರವನ್ನು ನೀಡಿದ್ದರು. ಇಬ್ಬರ ನಟನೆಗೆ ಭಾರಿ ಮೆಚ್ಚುಗೆ ವ್ಯಕ್ತವಾಗಿತ್ತು. ಯಶ್‌ ರಾಜ್‌ ಫಿಲ್ಮ್ಸ್‌ ಬ್ಯಾನರ್‌ನಲ್ಲಿ ʻಪಠಾಣ್‌ʼ ಸಿನಿಮಾ ಮೂಡಿಬರುತ್ತಿದೆ. ಈ ಚಿತ್ರದಲ್ಲಿ ಶಾರುಖ್‌ ಖಾನ್‌ ಸಿಕ್ಸ್‌ ಪ್ಯಾಕ್‌ನಲ್ಲಿ ಕಾಣಿಸಿಕೊಳ್ಳಲಿದ್ದಾರೆ.

ಇದನ್ನೂ ಓದಿ | Cobra Movie | ಪ್ರಚಾರಕ್ಕಾಗಿ ಬೆಂಗಳೂರಿಗೆ ಬಂದ ಕೋಬ್ರಾ ಚಿತ್ರತಂಡ: ಟ್ರೈಲರ್‌ನಲ್ಲಿ ಮಿಂಚಿದ ಇರ್ಫಾನ್‌ ಪಠಾಣ್‌!

Exit mobile version