ಬೆಂಗಳೂರು : ಶಾರುಖ್ ಖಾನ್ ಹಾಗೂ ದೀಪಿಕಾ ಪಡುಕೋಣೆ ಕಾಂಬಿನೇಶನ್‌ನಲ್ಲಿ ಬರುತ್ತಿರುವ ʻಪಠಾಣ್ʼ ಸಿನಿಮಾದ (Shahrukh Khan) ಎರಡನೇ ಹಾಡು ʻಜೂಮ್ ಜೋ ಪಠಾಣ್ʼ ಅನಾವರಣಗೊಂಡಿದೆ. ಚಿತ್ರದ ಮೊದಲ ಹಾಡು ʻಬೇಷರಮ್ ರಂಗ್ʼ ವಿವಾದ ಮಾಡುತ್ತಿರುವ ನಡುವೆ ಈ ಹಾಡು ಸಖತ್ ಸೌಂಡ್ ಮಾಡುತ್ತಿದೆ. ಶಾರುಖ್ ರಗಡ್ ಲುಕ್‌ನಲ್ಲಿ ಕಾಣಿಸಿಕೊಂಡರೆ, ದೀಪಿಕಾ ಪಡುಕೋಣೆ ಗ್ಲಾಮರಸ್ ಆಗಿ ಕಾಣಿಸಿಕೊಂಡಿದ್ದಾರೆ. ಈ ಹಾಡಿಗೆ ನೋಡುಗರಿಂದ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿದೆ.
ಈ ಹಾಡನ್ನು ಯುರೋಪ್ನ ದೇಶಗಳಲ್ಲಿ ಚಿತ್ರೀಕರಿಸಲಾಗಿದೆ. ಕಾಸ್ಟ್ಯೂಮ್‌ಗಳು ಕೂಡ ಆಕರ್ಷಕವಾಗಿದ್ದು, ಅರಿಜಿತ್ ಸಿಂಗ್ ಹಾಡಿದ್ದಾರೆ. ಹಾಡಿನ ಕುರಿತು ಮಾತನಾಡಿದ ನಿರ್ದೇಶಕ ಸಿದ್ಧಾರ್ಥ್ ಆನಂದ್, “ನಾವು ʻಜೂಮ್ ಜೋ ಪಠಾಣ್ʼ ಹಾಡು ಮಾಡುವಾಗ, ಶಾರುಖ್ ಖಾನ್ ಅವರಿಗೆ ಅರಿಜಿತ್ ಸಿಂಗ್ ಹಾಡಬೇಕು ಎಂಬುದು ನನಗೆ ಸ್ಪಷ್ಟವಾಗಿತ್ತು. ಅವರು ನಮ್ಮ ದೇಶದ ನಂಬರ್ ಒನ್ ಗಾಯಕ ಮತ್ತು ಅವರು ಹಾಡಬೇಕೆಂದು ನಾವು ಬಯಸಿದ್ದೆವು. ಈ ನೃತ್ಯದಲ್ಲಿ ಅರಿಜಿತ್ ಸಿಂಗ್ ತಮ್ಮ ಧ್ವನಿಯೊಂದಿಗೆ ಮ್ಯಾಜಿಕ್ ಮಾಡಿದ್ದಾರೆ. ನನ್ನ ಸಿನಿಮಾಗಳಲ್ಲಿ ಸಂಗೀತವು ಬಹಳ ಮುಖ್ಯ ಪಾತ್ರವನ್ನು ವಹಿಸುತ್ತದೆ. ಅದೃಷ್ಟವಶಾತ್ ನನ್ನೆಲ್ಲ ಚಿತ್ರಗಳ ಸಂಗೀತವನ್ನು ಉತ್ತಮವಾಗಿಯೇ ವಿಮರ್ಶಿಸಲಾಗುತ್ತಿದೆ. ‘ಜೂಮೇ ಜೋ ಪಠಾಣ್’ ಹಾಡು ನನಗೆ ತುಂಬಾ ಹೆಮ್ಮೆ ತಂದಿದೆ. ಪ್ರೇಕ್ಷಕರು ನೋಡಿ ಖುಷಿ ಪಡುತ್ತಾರೆ ಎಂದು ಭಾವಿಸಿದ್ದೇನೆʼʼ ಎಂದು ಹೇಳಿದ್ದಾರೆ.
ಇದನ್ನೂ ಓದಿ | Pathaan Controversy | ಮುಸ್ಲಿಂ ಸಂಘಟನೆಗಳಿಂದಲೂ ʻಪಠಾಣ್ʼ ಸಿನಿಮಾ ನಿಷೇಧಿಸುವಂತೆ ಒತ್ತಾಯ!
ಪಠಾಣ್ ಸಿನಿಮಾ ಬೇಷರಮ್ ರಂಗ್ ಹಾಡಿನ ವಿವಾದ!
ಪಠಾಣ್ ಸಿನಿಮಾದ ʻಬೇಷರಮ್ ರಂಗ್’ ಹಾಡಿನಲ್ಲಿ ಬಾಲಿವುಡ್ ನಟಿ ದೀಪಿಕಾ ಪಡುಕೋಣೆ ಕೇಸರಿ ಬಿಕಿನಿ ಹಾಕಿದ್ದಾರೆ ಎನ್ನುವ ವಿವಾದ ತಾರಕಕ್ಕೇರಿತ್ತು. ಇದು ಬೇಕು ಎಂತಲೇ ಮಾಡಿದ ಹುನ್ನಾರ ಎಂದು ಹಿಂದುಪರ ಸಂಘಟನೆಗಳು ಆರೋಪಿಸಿದ್ದವು. ‘ಬೇಷರಮ್ ರಂಗ್’ ಅಂದರೆ ಕನ್ನಡದಲ್ಲಿ ನಾಚಿಕೆ ಇಲ್ಲದ ಬಣ್ಣ ಎಂದಾಗುತ್ತದೆ. ಕೇಸರಿ ಬಣ್ಣಕ್ಕೆ ನಾಚಿಕೆ ಇಲ್ಲದ ಬಣ್ಣ ಎಂದು ಜರಿದಿದ್ದಾರೆ ಎಂದು ಹೋಲಿಕೆ ಮಾಡಿಕೊಂಡು ಹಲವರು ಗರಂ ಆಗಿದ್ದರು. ಬೇಕು ಎಂತಲೇ ಈ ರೀತಿ ಕೇಸರಿ ಬಣ್ಣಕ್ಕೆ ಅವಮಾನ ಮಾಡಲಾಗಿದೆ ಎಂದು ಕಮೆಂಟ್ ಕೂಡ ಮಾಡಿದ್ದರು. ಜನವರಿ 25, 2023ಕ್ಕೆ ಚಿತ್ರ ಬಿಡುಗಡೆಗೊಳ್ಳುತ್ತಿದೆ. ಹಿಂದಿ, ತಮಿಳು ಮತ್ತು ತೆಲುಗಿನಲ್ಲಿ ರಿಲೀಸ್ ಆಗುತ್ತಿರುವುದಾಗಿ ಚಿತ್ರ ತಂಡ ಹಂಚಿಕೊಂಡಿದೆ.
ಇದನ್ನೂ ಓದಿ | IPL 2023 | ಸನ್ರೈಸರ್ಸ್ಗೆ ಕನ್ನಡಿಗ ಮಯಾಂಕ್ ಅಗರ್ವಾಲ್ ನಾಯಕತ್ವ ಸಾಧ್ಯತೆ; ಇರ್ಫಾನ್ ಪಠಾಣ್ ವಿಶ್ವಾಸ