Site icon Vistara News

Shahrukh Khan | ʻದೇಶಭಕ್ತಿ ಸಾರುವ ಚಿತ್ರ ಪಠಾಣ್‌ʼ: ಟ್ವೀಟ್‌ನಲ್ಲಿ ಅಭಿಮಾನಿಗಳ ಜತೆ ಶಾರುಖ್‌ ಹೇಳಿದ್ದೇನು?

Shahrukh Khan

ಬೆಂಗಳೂರು : ʻಪಠಾಣ್‌ʼ ಸಿನಿಮಾದ ಕೇಸರಿ ವಿವಾದದ ಬೆನ್ನಲ್ಲೇ ನಟ ಶಾರುಖ್‌ ಖಾನ್‌ (Shahrukh Khan) ಆನ್‌ಲೈನ್‌ನಲ್ಲಿ ಅಭಿಮಾನಿಗಳೊಂದಿಗೆ #AskSRK ಟ್ಯಾಗ್‌ನಲ್ಲಿ ಸಂವಾದ ನಡೆಸಿದ್ದಾರೆ. ಟ್ವೀಟ್‌ಗಳ ಮೂಲಕ ಅಭಿಮಾನಿಗಳ ಹಲವು ಪ್ರಶ್ನೆಗಳಿಗೆ ಉತ್ತರಿಸಿದ್ದಾರೆ. ʻಪಠಾಣ್‌ʼ ಸಿನಿಮಾ ದೇಶಭಕ್ತಿ ಸಾರುವ ಚಿತ್ರ ಎಂದು ಶಾರುಖ್‌ ಹೇಳಿದ್ದಾರೆ.

ತಮ್ಮ ಮುಂಬರುವ ಚಿತ್ರ ‘ಪಠಾಣ್’ ಬಿಡುಗಡೆಗೆ ಸಿದ್ಧರಾಗಿರುವ ಶಾರುಖ್ ಖಾನ್, ಟ್ವಿಟರ್‌ನಲ್ಲಿ ಅಭಿಮಾನಿಗಳ ಪ್ರಶ್ನೆಗಳಿಗೆ ಉತ್ತರಿಸಲು ಸ್ವಲ್ಪ ಸಮಯ ಮೀಸಲಿಟ್ಟಿದ್ದಾರೆ. ಡಿಸೆಂಬರ್‌ 17 ಶನಿವಾರ ಸಂಜೆ, ಅವರು ಸರಣಿ ಟ್ವೀಟ್ ಮಾಡಿದ್ದಾರೆ. ತಮ್ಮ 15 ನಿಮಿಷಗಳ ಕಾಲ ಅಭಿಮಾನಿಗಳಿಗೆ ಮೀಸಲಿಟ್ಟ ಶಾರುಖ್‌ ಅವರಿಗೆ ಅಭಿಮಾನಿಯೊಬ್ಬರು ಕಾರ್ಯಕ್ರಮ 15 ನಿಮಿಷಗಳ ಕಾಲ ಮಾತ್ರ ಏಕೆ? ಎಂದು ಪ್ರಶ್ನೆ ಕೇಳಿದ್ದಾರೆ. ಉತ್ತರಿಸಿದ ಶಾರುಖ್‌ ಖಾನ್‌ ʻʻಎಲ್ಲರಿಗೂ 15 ನಿಮಿಷದ ಜನಪ್ರಿಯತೆ ಬೇಕು. ಪಠಾಣ್‌ ಕೂಡ ದೇಶಭಕ್ತಿಯ ಸಿನಿಮಾ. ಆದರೆ ಆ್ಯಕ್ಷನ್‌ ರೀತಿಯಲ್ಲಿ ಇದೆʼʼಎಂದು ಹೇಳಿದ್ದಾರೆ.

ಇದನ್ನೂ ಓದಿ | Shahrukh Khan | ಶುರುವಾಯ್ತು ಬಾಯ್ಕಾಟ್‌ ಅಭಿಯಾನ: ʻಪಠಾಣ್‌ʼ ಸಿನಿಮಾ ವಿರುದ್ಧ ನೆಟ್ಟಿಗರ ಆಕ್ರೋಶ, ಏನಿದು ವಿವಾದ?

ಅಭಿಮಾನಿಯೊಬ್ಬರು ಶಾರುಖ್ ಅವರನ್ನು ʻಸ್ವದೇಶ್‌ʼ ಮತ್ತು ʻಚಕ್ ದೇʼಯಂತಹ ಚಿತ್ರಗಳಲ್ಲಿ ಏಕೆ ಕೆಲಸ ಮಾಡುವುದಿಲ್ಲ ಎಂದು ಕೇಳಿದ್ದಾರೆ. ʻʻನಾವು ಅಂತಹ ಎರಡು ಚಲನಚಿತ್ರಗಳನ್ನು ಈಗಾಗಲೇ ಮಾಡಿದ್ದೇವೆ, ನಾನು ಅದನ್ನು ಎಷ್ಟು ಬಾರಿ ಮಾಡಬೇಕು?” ಎಂದು ಶಾರುಖ್‌ ಉತ್ತರ ನೀಡಿದ್ದಾರೆ.

ಬಾಕ್ಸ್ ಆಫೀಸ್‌ನಲ್ಲಿ ಪಠಾಣ್‌ ಮೊದಲ ದಿನ ಎಷ್ಟು ಗಳಿಕೆ ಕಾಣಬಹುದು ಎಂದು ಅಭಿಮಾನಿಯೊಬ್ಬರು ಪ್ರಶ್ನಿಸಿದ್ದಾರೆ. ಶಾರುಖ್ ಈ ಬಗ್ಗೆ ಪ್ರತಿಕ್ರಿಯೆ ನೀಡಿ ʻʻನಾನು ಈ ಪ್ರೆಡಿಕ್ಷನ್‌ನಲ್ಲಿ ಭಾಗಿಯಾಗಿಲ್ಲ. ನಾನು ನಿಮಗೆ ಮನರಂಜನೆ ನೀಡುವ ಮತ್ತು ನಿಮ್ಮನ್ನು ನಗಿಸುವುದರಲ್ಲಿದ್ದೇನೆ. ಈಗ ನನ್ನ ತಂಡವು ನನ್ನನ್ನು ಕೆಲಸಕ್ಕೆ ಕರೆಯುತ್ತಿದೆ. ಇನ್ನೊಂದು ದಿನ ನಿಮ್ಮೊಂದಿಗೆ ಮಾತನಾಡುತ್ತೇನೆ. ಪ್ರೀತಿ ಮತ್ತು ನಿಮ್ಮ ಸಮಯಕ್ಕೆ ಧನ್ಯವಾದಗಳು. ಶೀಘ್ರದಲ್ಲೇ ಥಿಯೇಟರ್‌ನಲ್ಲಿ ಭೇಟಿಯಾಗೋಣʼʼ ಎಂದು ಅವರು ಟ್ವಿಟರ್‌ನಲ್ಲಿ ತಮ್ಮ ಚಾಟ್ ಅನ್ನು ಅಂತ್ಯಗೊಳಿಸಿದ್ದಾರೆ.

ಸಿದ್ಧಾರ್ಥ್ ಆನಂದ್ ನಿರ್ದೇಶನದ ‘ಪಠಾಣ್‌’ ಮುಂದಿನ ವರ್ಷ ಜನವರಿ 25 ರಂದು ಬಿಡುಗಡೆಯಾಗಲಿದೆ. ಇದರಲ್ಲಿ ದೀಪಿಕಾ ಪಡುಕೋಣೆ ಮತ್ತು ಜಾನ್ ಅಬ್ರಹಾಂ ಕೂಡ ನಟಿಸಿದ್ದಾರೆ. ಈಗಾಗಲೇ ಒಂದು ಗುಂಪು ಪಠಾಣ್‌ ಸಿನಿಮಾದ ʻಬೇಷರಮ್‌ ರಂಗ್‌ʼ ಹಾಡಿನಲ್ಲಿ ಕೇಸರಿ ಬಣ್ಣಕ್ಕೆ ಅವಮಾನಿಸಿ ಕೆಲವರ ಭಾವನೆಗೆ ದಕ್ಕೆ ತರಲಾಗಿದೆ ಎಂದು ಆರೋಪಿಸಿ, ಸಿನಿಮಾ ಬಾಯ್ಕಾಟ್‌ ಮಾಡಬೇಕೆಂದು ಕರೆ ನೀಡಿದೆ.

ಇದನ್ನೂ ಓದಿ | Pathaan Controversy | ಮುಸ್ಲಿಂ ಸಂಘಟನೆಗಳಿಂದಲೂ ʻಪಠಾಣ್‌ʼ ಸಿನಿಮಾ ನಿಷೇಧಿಸುವಂತೆ ಒತ್ತಾಯ!

Exit mobile version