ಬೆಂಗಳೂರು: `ಜವಾನ್’ ಚಿತ್ರದ ಚಿತ್ರೀಕರಣ ನಡುವೆಯೇ ಶಾರುಖ್ ಖಾನ್ (Shahrukh Khan) ಕಾಶ್ಮೀರದಲ್ಲಿ ʻಡಂಕಿʼ ಚಿತ್ರದ ಶೂಟಿಂಗ್ನಲ್ಲಿ ತೊಡಗಿದ್ದಾರೆ. ಚಿತ್ರೀಕರಣದ ಸಂದರ್ಭದಲ್ಲಿನ ಹೊಸ ವಿಡಿಯೊವನ್ನು ಫ್ಯಾನ್ಸ್ ಪೇಜ್ ಶೇರ್ ಮಾಡಿಕೊಂಡಿದೆ. ಇದೀಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಕ್ಲಿಪ್ನಲ್ಲಿ ಶಾರುಖ್ ಖಾನ್ ಮತ್ತು ತಾಪ್ಸಿ ಪನ್ನು ಹೊರಾಂಗಣದ ಶೂಟಿಂಗ್ನಲ್ಲಿ ಬ್ಯಸಿಯಾಗಿರುವುದು ಕಂಡಿದೆ.
ರಾಜ್ಕುಮಾರ್ ಹಿರಾನಿ ನಿರ್ದೇಶನದ ಈ ಚಿತ್ರದ ಶೂಟಿಂಗ್ ಈಗಾಗಲೇ ಶುರುವಾಗಿದೆ. ವಿಡಿಯೊದಲ್ಲಿ, ಶಾರುಖ್ ಕಪ್ಪು ಪ್ಯಾಂಟ್ನೊಂದಿಗೆ ಕೆಂಪು ಜಾಕೆಟ್ ಧರಿಸಿದ್ದರು. ದೂರದಿಂದ ಚಿತ್ರೀಕರಿಸಿದ ಕ್ಲಿಪ್ನಲ್ಲಿ, ತಾಪ್ಸಿ ಪನ್ನು ನೀಲಿ ಜೀನ್ಸ್ ಜತೆ ಬಿಳಿ ಜಾಕೆಟ್ ಧರಿಸಿ ಕಾಣಿಸಿಕೊಂಡಿದ್ದಾರೆ.
ಫ್ಯಾನ್ ಪೇಜ್ ಈ ವಿಡಿಯೊ ಹಂಚಿಕೊಂಡು ʻʻಇತ್ತೀಚಿನ ಅಪ್ಡೇಟ್: ಶಾರುಖ್ ಖಾನ್, ತಾಪ್ಸಿ ಪನ್ನು ಮತ್ತು ವಿಕ್ಕಿ ಕೌಶಲ್ ಅವರು ಏಪ್ರಿಲ್ 27ರ ಮುಂಜಾನೆ ಕಾಶ್ಮೀರದ ಸೋನ್ಮಾರ್ಗ್ನಲ್ಲಿ ಡಂಕಿ ಚಿತ್ರೀಕರಣವನ್ನು ಪೂರ್ಣಗೊಳಿಸಿದ್ದಾರೆ.” ಕಾಶ್ಮೀರ ಪ್ರವಾಸದ ವೇಳೆ ಶಾರುಖ್ ಕಪ್ಪು ಜಾಕೆಟ್ ಮತ್ತು ಮ್ಯಾಚಿಂಗ್ ಸನ್ ಗ್ಲಾಸ್ನಲ್ಲಿ ಕಾಣುತ್ತಿರುವ ಫೋಟೊವನ್ನು ಟ್ವಿಟರ್ನಲ್ಲಿ ಮತ್ತೊಂದು ಫ್ಯಾನ್ಸ್ ಪೇಜ್ ಹಂಚಿಕೊಂಡಿದೆ. ಫೋಟೊದಲ್ಲಿ ನಟ ಅಭಿಮಾನಿಗಳೊಂದಿಗೆ ಪೋಸ್ ನೀಡಿದ್ದಾರೆ.
ಇದನ್ನೂ ಓದಿ: Shahrukh Khan: `ಜವಾನ್’ ಚಿತ್ರದ ದೃಶ್ಯಗಳು ಲೀಕ್ ಆಗುತ್ತಿದ್ದಂತೆ ಕೋರ್ಟ್ ಮೆಟ್ಟಿಲೇರಿದ ತಂಡ; ಕೋರ್ಟ್ ಆದೇಶವೇನು?
ವೈರಲ್ ವಿಡಿಯೊ
2012ರಲ್ಲಿ ‘ಜಬ್ ತಕ್ ಹೈ ಜಾನ್’ ಸಿನಿಮಾದ ಶೂಟಿಂಗ್ಗಾಗಿ ಅವರು ಕಾಶ್ಮೀರಕ್ಕೆ ಹೋಗಿದ್ದರು. ಈಗ 11 ವರ್ಷಗಳ ಬಳಿಕ ಅವರು ಅಲ್ಲಿಗೆ ತೆರಳಿದ್ದಾರೆ ‘ಡಂಕಿ’ ಮಾತ್ರವಲ್ಲದೇ ‘ಜವಾನ್’ ಸಿನಿಮಾದಲ್ಲೂ ಶಾರುಖ್ ಖಾನ್ ನಟಿಸುತ್ತಿದ್ದಾರೆ. ಈ ಚಿತ್ರಕ್ಕೆ ಅಟ್ಲಿ ಕುಮಾರ್ ನಿರ್ದೇಶನ ಮಾಡುತ್ತಿದ್ದಾರೆ. ಶಾರುಖ್ ಖಾನ್ಗೆ ಜೋಡಿಯಾಗಿ ನಯನತಾರಾ ಅಭಿನಯಿಸಿದ್ದಾರೆ. ಜೂನ್ 2ರಂದು ಬಿಡುಗಡೆ ಆಗಲಿರುವ ಈ ಸಿನಿಮಾದಲ್ಲಿ ವಿಜಯ್ ಸೇತುಪತಿ ಕೂಡ ಪ್ರಮುಖ ಪಾತ್ರ ಮಾಡುತ್ತಿದ್ದಾರೆ.