ಬೆಂಗಳೂರು : ಶಾರುಖ್ ಖಾನ್ (Shahrukh Khan) ಅಭಿನಯದ ʻಪಠಾಣ್ʼ ಸಿನಿಮಾ ಬಿಡುಗಡೆಗೂ ಮುಂಚೆ ಹಾಡಿನ ವಿಚಾರವಾಗಿ ವಿವಾದದಲ್ಲಿದೆ. ಈಗಾಗಲೇ ನೆಟ್ಟಿಗರು ಶಾರುಖ್ ಅವರಿಗೆ ಸಿನಿಮಾ ಈಗಾಗಲೇ ಡಿಸಾಸ್ಟರ್ ಆಗಿದೆ ಎಂದು ಮನಬಂದಂತೆ ಟ್ರೋಲ್ ಮಾಡುತ್ತಿದ್ದಾರೆ. ಟ್ವೀಟ್ನಲ್ಲಿ ʻಆಸ್ಕ್ ಮಿ ಎನಿಥಿಂಗ್ʼ ಎಂದು ಶಾರುಖ್ ಪ್ರಶ್ನೋತ್ತರ ಪ್ರಕ್ರಿಯೆಯನ್ನು ಆರಂಭಿಸಿದ್ದರು. ಈ ವೇಳೆ ನೆಟ್ಟಿಗರೊಬ್ಬರ ಪ್ರಶ್ನೆಗೆ ಖಡಕ್ ಆಗಿ ಉತ್ತರ ನೀಡಿದ್ದಾರೆ.
ಈ ಹಿಂದೆ ಪ್ರಶ್ನೋತ್ತರ ಪ್ರಕ್ರಿಯೆಯಲ್ಲಿ ನಟನಿಗೆ ಸಿನಿಮಾ ಕುರಿತಾಗಿ ನೆಟ್ಟಿಗರಿಂದ ಹತ್ತು, ಹಲವು ಪ್ರಶ್ನೆಗಳು ಹರಿದು ಬಂದಿದ್ದವು. ಅದರಲ್ಲಿ ಪ್ರಮುಖವಾದ, ಆಸಕ್ತಿಕರವಾದ ಪ್ರಶ್ನೆಗಳಿಗೆ ಶಾರುಖ್ ಉತ್ತರವನ್ನು ನೀಡಿದ್ದರು. ಒಂದು ಪ್ರಶ್ನೆಗೆ ಉತ್ತರಿಸುತ್ತ ಅವರು ನಟ ಯಶ್ ಅವರನ್ನು ಹೊಗಳಿದ್ದು ಸಹ ಇದೆ. ಆದರೆ ಇದೀಗ ನೆಟ್ಟಿಗರೊಬ್ಬರು ʻʻಪಠಾಣ್ ಸಿನಿಮಾ ಈಗಾಗಲೇ ಡಿಸಾಸ್ಟರ್ ಆಗಿದೆ ನೀವು ನಿವೃತ್ತಿ ತೆಗೆದುಕೊಳ್ಳಿʼʼ ಎಂದು ಬರೆದಿದ್ದಾರೆ. ಪ್ರತಿಕ್ರಿಯೆ ನೀಡಿದ ಶಾರುಖ್ ʻʻಮಗನೇ, ದೊಡ್ಡವರ ಜತೆಗೆ ಹಾಗೆಲ್ಲ ಮಾತನಾಡಬಾರದು” ಎಂದು ಟ್ವೀಟ್ ಮಾಡಿದ್ದಾರೆ. ಇದೀಗ ಟ್ವೀಟ್ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ʻಬೇಷರಮ್ ರಂಗ್’ ವಿವಾದ
ಪಠಾಣ್ ಸಿನಿಮಾದ ʻಬೇಷರಮ್ ರಂಗ್’ ಹಾಡಿನಲ್ಲಿ ಬಾಲಿವುಡ್ ನಟಿ ದೀಪಿಕಾ ಪಡುಕೋಣೆ ಕೇಸರಿ ಬಿಕಿನಿ ಹಾಕಿದ್ದಾರೆ ಎನ್ನುವ ವಿವಾದ ತಾರಕಕ್ಕೇರಿತ್ತು. ಇದು ಅವಮಾನಿಸಲೆಂದೇ ಮಾಡಿದ ಕೃತ್ಯ ಎಂದು ಹಿಂದುಪರ ಸಂಘಟನೆಗಳು ಆರೋಪಿಸಿದ್ದವು. ‘ಬೇಷರಮ್ ರಂಗ್’ ಅಂದರೆ ಕನ್ನಡದಲ್ಲಿ ನಾಚಿಕೆ ಇಲ್ಲದ ಬಣ್ಣ ಎಂದಾಗುತ್ತದೆ. ಕೇಸರಿ ಬಣ್ಣಕ್ಕೆ ನಾಚಿಕೆ ಇಲ್ಲದ ಬಣ್ಣ ಎಂದು ಜರೆದಿದ್ದಾರೆ ಎಂದು ಹೋಲಿಕೆ ಮಾಡಿಕೊಂಡು ಹಲವರು ಗರಂ ಆಗಿದ್ದರು. ಬೇಕು ಎಂತಲೇ ಈ ರೀತಿ ಕೇಸರಿ ಬಣ್ಣಕ್ಕೆ ಅವಮಾನ ಮಾಡಲಾಗಿದೆ ಎಂದು ಕಮೆಂಟ್ ಕೂಡ ಮಾಡಿದ್ದರು. ಜನವರಿ 25, 2023ಕ್ಕೆ ಚಿತ್ರ ಬಿಡುಗಡೆಗೊಳ್ಳುತ್ತಿದೆ. ಹಿಂದಿ, ತಮಿಳು ಮತ್ತು ತೆಲುಗಿನಲ್ಲಿ ರಿಲೀಸ್ ಆಗುತ್ತಿರುವುದಾಗಿ ಚಿತ್ರ ತಂಡ ಹಂಚಿಕೊಂಡಿದೆ.
ಇದನ್ನೂ ಓದಿ | Shahrukh Khan | ಶಾರುಖ್ ʻಪಠಾಣ್ʼ ಹೇರ್ಸ್ಟೈಲ್ ಟ್ರೆಂಡ್ ಬಹುಶಃ ನನ್ನಿಂದಾಗಿರಬಹುದು ಎಂದ ಮರಾಠಿ ಬಿಗ್ ಬಾಸ್ ಸ್ಪರ್ಧಿ!