ಬೆಂಗಳೂರು: ಬಾಲಿವುಡ್ ನಟ ಶಾರುಖ್ ಖಾನ್ (Shahrukh Khan) ಅವರ ಪುತ್ರಿ ಸುಹಾನಾ ಖಾನ್ ಈಗಾಗಲೇ ಬಣ್ಣದ ಲೋಕಕ್ಕೆ ಎಂಟ್ರಿ ಕೊಟ್ಟಿದ್ದಾರೆ. ಇದೀಗ ಶಾರುಖ್ ಅವರ ಪುತ್ರ ಆರ್ಯನ್ ಖಾನ್ ಸಿನಿರಂಗಕ್ಕೆ ಪದಾರ್ಪಣೆ ಮಾಡುತ್ತಿದ್ದಾರೆ. ಆದರೆ ನಾಯಕನಾಗಿ ಅಲ್ಲ, ನಿರ್ದೇಶಕನಾಗಿ ಎಂಬುದು ವಿಶೇಷ. ಆರ್ಯನ್ ಖಾನ್ ತಮ್ಮ ಪ್ರಾಜೆಕ್ಟ್ ಸ್ಕ್ರಿಪ್ಟ್‌ಅನ್ನು ಇನ್‌ಸ್ಟಾದಲ್ಲಿ ಹಂಚಿಕೊಂಡಿದ್ದಾರೆ.
ರೆಡ್ ಚಿಲ್ಲೀಸ್ ಎಂಟರ್‌ರ್ಟೈನ್‌ಮೆಂಟ್ ಸಂಸ್ಥೆಯ ನಿರ್ಮಾಣದ ಹೊಸ ಚಿತ್ರಕ್ಕೆ ಆರ್ಯನ್ ಖಾನ್ ಡೈರೆಕ್ಷನ್ ಮಾಡುತ್ತಿದ್ದಾರೆ. ಕ್ಲ್ಯಾಪ್ ಬೋರ್ಡ್ ಜತೆ ಸ್ಕ್ರಿಪ್ಟ್‌ಅನ್ನು ಕೂಡ ಫೋಟೊ ಹಂಚಿಕೊಂಡಿದ್ದಾರೆ. ಆ್ಯಕ್ಷನ್ ಕಟ್ ಹೇಳಲು ಕಾಯುತ್ತಿದ್ದೇನೆ ಎಂದು ಆರ್ಯನ್ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದಾರೆ. ಆರ್ಯನ್ ಚೊಚ್ಚಲ ಸಿನಿಮಾ, ಯಾವ ನಟನಿಗೆ ನಿರ್ದೇಶನ ಮಾಡ್ತಿದ್ದಾರೆ ಎಂಬುದು ಅಧಿಕೃತವಾಗಿ ಹೊರಬಿದ್ದಿಲ್ಲ. ಆರ್ಯನ್ ಕೂಡ ಬಾಲಿವುಡ್‌ನಲ್ಲಿ ಗುರುತಿಸಿಕೊಳ್ಳಲು ಅದೃಷ್ಟ ಪರೀಕ್ಷೆಗೆ ಇಳಿದಿದ್ದಾರೆ.
ಇದನ್ನೂ ಓದಿ | Hombale Films | ಬಾಲಿವುಡ್ ನಟ ಶಾರುಖ್ ಖಾನ್ ಸಿನಿಮಾ ನಿರ್ಮಾಣ ಮಾಡಲಿದೆಯಂತೆ ಹೊಂಬಾಳೆ ಫಿಲ್ಮ್ಸ್!
ಶಾರುಖ್ ಅವರು ʻಪಠಾಣ್ʼ ಸಿನಿಮಾ ಪ್ರಚಾರದಲ್ಲಿ ಬ್ಯಸಿಯಾಗಿದ್ದಾರೆ. 2018ರಲ್ಲಿ ʻಜೀರೋ’ ಚಿತ್ರ ತೆರೆಕಂಡ ಬಳಿಕ ಶಾರುಖ್ ಖಾನ್ ʻಪಠಾಣ್ʼ ಸಿನಿಮಾ ಮೂಲಕ ಮತ್ತೆ ತೆರೆ ಮೇಲೆ ಕಾಣಿಸಿಕೊಳ್ಳುತ್ತಿದ್ದಾರೆ. ಶಾರುಖ್ ಖಾನ್ ಅವರ ‘ಪಠಾಣ್’ ಸಿನಿಮಾ ಶೀಘ್ರವೇ ತೆರೆಗೆ ಬರಲಿದ್ದು, ಇದೊಂದು ಅದ್ಧೂರಿ ಆ್ಯಕ್ಷನ್ ಸಿನಿಮಾ ಆಗಿರಲಿದೆ. ಸಿನಿಮಾವನ್ನು ಎಂಟು ವಿವಿಧ ದೇಶಗಳಲ್ಲಿ ಚಿತ್ರೀಕರಣ ಮಾಡಲಾಗಿದೆ ಎಂದು ಸಿನಿಮಾದ ನಿರ್ಮಾಪಕ ಆದಿತ್ಯ ಚೋಪ್ರಾ ಹೇಳಿಕೊಂಡಿದ್ದಾರೆ.
ಇದನ್ನೂ ಓದಿ | Shahrukh Khan | ಹಲವು ದೇಶಗಳಲ್ಲಿ ಶಾರುಖ್ ಅಭಿನಯದ ʻಪಠಾಣ್ʼ ಚಿತ್ರೀಕರಣ: ಶೀಘ್ರವೇ ತೆರೆಗೆ!