Site icon Vistara News

Shahrukh Khan: ಶಾರುಖ್ ಖಾನ್ ತಲೆಯ ಮೇಲೆ ಇರೋ ಟ್ಯಾಟೂ ಅರ್ಥ ರಿವೀಲ್‌!

Shahrukh Khan

ಬೆಂಗಳೂರು; ಬಾಲಿವುಡ್‌ ನಟ ಶಾರುಖ್ ಖಾನ್ (Shahrukh Khan) ಅವರ ʻಜವಾನ್ʼ ಈ ವರ್ಷದ ಬಹು ನಿರೀಕ್ಷಿತ ಚಿತ್ರಗಳಲ್ಲಿ ಒಂದಾಗಿದೆ. ಅಟ್ಲೀ ಅವರ ನಿರ್ದೇಶನದಲ್ಲಿ ಮೂಡಿ ಬಂದ ಈ ಸಿನಿಮಾದ ಪ್ರಿವ್ಯೂ ಈಗಾಗಲೇ ಬಿಡುಗಡೆಗೊಂಡಿದೆ. ಇದಾದ ಬೆನ್ನಲ್ಲೇ ಎಲ್ಲರೂ ಮಾತನಾಡುವಂತೆ ಮಾಡಿದ್ದು ಶಾರುಖ್ ಖಾನ್ ಅವರ ಹಿಂದೆಂದೂ ನೋಡಿರದ ಲುಕ್‌. ಸೂಪರ್‌ಸ್ಟಾರ್ ಮೊದಲ ಬಾರಿಗೆ ಬೋಳು ತಲೆಯಲ್ಲಿ ಕಾಣಿಸಿಕೊಂಡಿದ್ದಾರೆ. ಎಡ ಕಿವಿಯ ಮೇಲ್ಭಾಗದಲ್ಲಿ ಏನನ್ನೋ ಬರೆದುಕೊಂಡಿರುವುದು ಕಂಡು ಬಂದಿದೆ. ಹಚ್ಚೆಯಲ್ಲಿ ಏನು ಬರೆಯಲಾಗಿದೆ ಎಂಬುದು ಸ್ಪಷ್ಟವಾಗಿ ತಿಳಿದಿರಲಿಲ್ಲ. ಆದರೆ ಈಗ ಆ ವಿಚಾರ ಗೊತ್ತಾಗಿದೆ.

ಮನೋಬಾಲಾ ವಿಜಯಬಾಲನ್ ಟ್ವಿಟರ್‌ನಲ್ಲಿ ಶಾರುಖ್ ಖಾನ್ ಅವರ ಫೋಟೊವನ್ನು ಹಂಚಿಕೊಂಡಿದ್ದು, ಹಚ್ಚೆಯಲ್ಲೇನಿದೆ ಎಂಬುದನ್ನು ವಿವರಿಸಿದ್ದಾರೆ. ಶಾರುಖ್ ಟ್ಯಾಟೂದಲ್ಲಿ ‘ಮಾ ಜಗತ್ ಜನನಿ’ ಎಂದು ಬರೆದುಕೊಂಡಿದ್ದಾರೆ. ಶಾರುಖ್ ಅವರ ಹಚ್ಚೆಗೂ ಸಿನಿಮಾದ ಕಥೆಗೂ ವಿಶೇಷ ಸಂಬಂಧ ಇರಬಹುದು ಎಂದು ಹೇಳುತ್ತಿದ್ದಾರೆ.

ಶಾರುಖ್‌ ಜತೆಗೆ, ʼಜವಾನ್ʼ ಸಿನಿಮಾದಲ್ಲಿ ನಯನತಾರಾ, ವಿಜಯ್ ಸೇತುಪತಿ ಮತ್ತು ಸಾನ್ಯಾ ಮಲ್ಹೋತ್ರಾ ಕೂಡ ನಟಿಸಿದ್ದಾರೆ. ಈ ಹಿಂದೆ ದೀಪಿಕಾ ಪಡುಕೋಣೆ ಕೂಡ ಚಿತ್ರದಲ್ಲಿ ವಿಶೇಷ ಪಾತ್ರದಲ್ಲಿ ಕಾಣಿಸಿಕೊಳ್ಳುವ ಸಾಧ್ಯತೆ ಇದೆ ಎಂದು ವರದಿಯಾಗಿತ್ತು. ಇದೀಗ ದೀಪಿಕಾ ನಟಿಸುತ್ತಿರುವುದು ಕನ್‌ಫರ್ಮ್‌ ಆಗಿದೆ. ಈ ಹಿಂದೆ ಬಿಡುಗಡೆಯಾದ ಟೀಸರ್‌ನಲ್ಲಿ ಶಾರುಖ್ ಬ್ಯಾಂಡೇಜ್‌ನಲ್ಲಿ ಕಾಣಿಸಿಕೊಂಡಿದ್ದರು.

ಇದನ್ನೂ ಓದಿ: Shahrukh Khan: ಕಾಶ್ಮೀರದಲ್ಲಿ ʻಡಂಕಿʼ ಸಿನಿಮಾ ಶೂಟಿಂಗ್‌ನಲ್ಲಿ ಬ್ಯುಸಿಯಾದ ಶಾರುಖ್‌: ವಿಡಿಯೊ ವೈರಲ್‌

ʼಜವಾನ್’ ಚಿತ್ರವು ಸೆಪ್ಟೆಂಬರ್ 7ರಂದು ಜಗತ್ತಿನಾದ್ಯಂತ ಹಿಂದಿ, ತಮಿಳು ಮತ್ತು ತೆಲುಗು ಭಾಷೆಗಳಲ್ಲಿ ಬಿಡುಗಡೆಯಾಗುತ್ತಿದೆ. ಈಗಾಗಲೇ ಜವಾನ್‌ ಪ್ರಿವ್ಯೂ ಹಿಂದಿ, ತಮಿಳು ಮತ್ತು ತೆಲುಗು ಭಾಷೆಗಳಲ್ಲಿ ಬಿಡುಗಡೆಯಾಗಿದೆ. ‘ಜವಾನ್’ ಚಿತ್ರವನ್ನು ರೆಡ್ ಚಿಲ್ಲೀಸ್ ಎಂಟರ್‌ಟೇನ್‌ಮೆಂಟ್ ಸಂಸ್ಥೆಯಡಿ ಗೌರಿ ಖಾನ್ ನಿರ್ಮಿಸುತ್ತಿದ್ದು, ಅಟ್ಲಿಯವರ ನಿರ್ದೇಶನದಲ್ಲಿ ಮೂಡಿಬಂದಿದೆ. ಚಿತ್ರದ ಮ್ಯೂಸಿಕ್‌ ರೈಟ್ಸ್‌ ಈಗಾಗಲೇ 36 ಕೋಟಿ ರೂ. ಮಾರಾಟವಾಗಿದೆ ಎಂದು ವರದಿಯಾಗಿದೆ.

Exit mobile version