Site icon Vistara News

Shahrukh Khan: ಟೈಮ್ ಮ್ಯಾಗಜಿನ್‌ ವಾರ್ಷಿಕ ಓದುಗರ ಸಮೀಕ್ಷೆಯಲ್ಲಿ ಶಾರುಖ್ ಖಾನ್‌ಗೆ ನಂ.1 ಸ್ಥಾನ!

Shah Rukh Khan tops TIME magazine’s annual readers’ poll

ಬೆಂಗಳೂರು: ‘ಟೈಮ್‌ ಮ್ಯಾಗ್‌ಜಿನ್ ನಿಯತಕಾಲಿಕದ ಅತ್ಯಂತ ಪ್ರಭಾವಿ ವ್ಯಕ್ತಿಗಳ ವಾರ್ಷಿಕ ಪಟ್ಟಿಯಲ್ಲಿ ನಟ ಶಾರುಖ್ ಖಾನ್ (Shahrukh Khan) ಅಗ್ರಸ್ಥಾನದಲ್ಲಿದ್ದಾರೆ. 2023ರ ಟೈಮ್‌ 100 ಸಮೀಕ್ಷೆಯಲ್ಲಿ ನಿಯತಕಾಲಿಕದ ಸ್ಥಾನಕ್ಕೆ ಅರ್ಹರು ಎಂದು ಭಾವಿಸುವ ವ್ಯಕ್ತಿಗಳು ಅಥಾವ ಗುಂಪುಗಳಿಗೆ ಓದುಗರು ಮತ ಹಾಕಿ ಸ್ಥಾನಗಳನ್ನು ನಿರ್ಧರಿಸಿದ್ದಾರೆ. ಪ್ರಕಟಣೆಯ ಪ್ರಕಾರ, 12 ಲಕ್ಷ ಮತಗಳು ಚಲಾವಣೆಯಾಗಿದ್ದು, ಅವುಗಳಲ್ಲಿ ಶೇ.4ರಷ್ಟು ಶಾರುಖ್‌ ಅವರಿಗೆ ಹೆಚ್ಚಿನ ಮತಗಳು ಬಂದಿವೆ. ಎರಡನೇ ಸ್ಥಾನದಲ್ಲಿ ತಮ್ಮ ಹಕ್ಕುಗಳಿಗಾಗಿ ಪ್ರತಿಭಟನೆ ನಡೆಸುತ್ತಿರುವ ಇರಾನ್ ಮಹಿಳೆಯರು ಶೇ.3ರಷ್ಟು ಮತಗಳನ್ನು ಗಳಿಸಿದರು. ನಿಯತಕಾಲಿಕದ 2022ರ ವರ್ಷದ ವ್ಯಕ್ತಿ ಓದುಗರ ಸಮೀಕ್ಷೆಯಲ್ಲಿ ಮಹಿಳೆಯರು ಗೆದ್ದಿದ್ದಾರೆ. ಮೂರನೇ ಸ್ಥಾನದಲ್ಲಿ, 2020ರಿಂದ ಸಾಂಕ್ರಾಮಿಕ ರೋಗದ ಮುಂಚೂಣಿಯಲ್ಲಿರುವ ಆರೋಗ್ಯ ಕಾರ್ಯಕರ್ತರು ಶೇ.2ರಷ್ಟು ಮತಗಳನ್ನು ಪಡೆದಿದ್ದಾರೆ.

ಪ್ರಿನ್ಸ್ ಹ್ಯಾರಿ ಮತ್ತು ಮೇಘನ್ ಮಾರ್ಕೆಲ್ ನಾಲ್ಕನೇ ಸ್ಥಾನವನ್ನು ಪಡೆದಿದ್ದು, ಪ್ರತಿಯೊಬ್ಬರೂ ಶೇ.1.9 ಮತಗಳನ್ನು ಪಡೆದರು. ಹ್ಯಾರಿ ಈ ವರ್ಷದ ಆರಂಭದಲ್ಲಿ ತನ್ನ ಆತ್ಮಚರಿತ್ರೆಯಾದ ಸ್ಪೇರ್ ಅನ್ನು ಬಿಡುಗಡೆ ಮಾಡಿದ್ದು, ಬ್ರಿಟಿಷ್ ರಾಜಮನೆತನದ ಸದಸ್ಯನಾಗಿ ತನ್ನ ಅನುಭವಗಳ ಬಗ್ಗೆ ಹಂಚಿಕೊಂಡಿದ್ದರು. ಮೇಘನ್ ಆರ್ಕಿಟೈಪ್ಸ್ ಶೀರ್ಷಿಕೆಯ ಪಾಡ್‌ಕ್ಯಾಸ್ಟ್ ಅನ್ನು ಆಯೋಜಿಸಿದ್ದಾರೆ. ಫುಟ್ಬಾಲ್ ಆಟಗಾರ ಲಿಯೋನೆಲ್ ಮೆಸ್ಸಿ ಶೇ.1.8ರಷ್ಟು ಮತಗಳೊಂದಿಗೆ ಪಟ್ಟಿಯಲ್ಲಿ ಐದನೇ ಸ್ಥಾನ ಪಡೆದರು.

2023ರ ಟೈಮ್ಸ್‌ ಅವರ ಅತ್ಯಂತ ಪ್ರಭಾವಶಾಲಿ ವ್ಯಕ್ತಿಗಳ ವಾರ್ಷಿಕ ಪಟ್ಟಿಯನ್ನು ಈ ತಿಂಗಳ ಕೊನೆಯಲ್ಲಿ ಬಿಡುಗಡೆ ಮಾಡಲಾಗುತ್ತದೆ. 2022ರಲ್ಲಿ, ಗೌತಮ್ ಅದಾನಿ, ಕರುಣಾ ನುಂಡಿ, ಖುರ್ರಂ ಪರ್ವೇಜ್ ಮಾತ್ರ ಪಟ್ಟಿಯಲ್ಲಿ ಕಾಣಿಸಿಕೊಂಡ ಭಾರತೀಯರಾಗಿದ್ದರು. ಈ ಬಾರಿ ಶಾರುಖ್ ಖಾನ್ ಈ ವರ್ಷ ಪಟ್ಟಿಯಲ್ಲಿ ಸ್ಥಾನ ಗಳಿಸಬಹುದು ಎನ್ನಲಾಗಿದೆ.

ಇದನ್ನೂ ಓದಿ: Shahrukh Khan: ಶಾರುಖ್‌ ಸ್ಟೆಪ್ಸ್‌ ಕಂಡು ಖುಷಿ ಪಟ್ಟ ಮಗ ಆರ್ಯನ್‌: ಕೊನೆಗೂ ನಗು ಕಂಡೆವು ಎಂದ ನೆಟ್ಟಿಗರು!

ಶಾರುಖ್‌ ಅವರ ಇತ್ತೀಚಿನ ಹಿಟ್‌ ಸಿನಿಮಾವಾದ ಪಠಾಣ್‌ ಪ್ರಪಂಚದಾದ್ಯಂತ 1000 ಕೋಟಿ ರೂ. ಗಳಿಸಿದೆ. ಈ ವರ್ಷ, ಶಾರುಖ್ ಇನ್ನೆರಡು ಚಿತ್ರಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ . ಅಟ್ಲೀ ಅವರ ಜವಾನ್ ಮತ್ತು ರಾಜ್‌ಕುಮಾರ್ ಹಿರಾನಿ ಅವರ ಡಂಕಿ.

ಜವಾನ್ ಸಿನಿಮಾದಲ್ಲಿ ನಯನತಾರಾ ಮತ್ತು ವಿಜಯ್ ಸೇತುಪತಿ ನಟಿಸಿದ್ದಾರೆ. ಇದು ಜೂನ್ ತಿಂಗಳಲ್ಲಿ ಬಿಡುಗಡೆಯಾಗಲಿದೆ. ಡಂಕಿಯಲ್ಲಿ ಶಾರುಖ್ ಜತೆಗೆ ತಾಪ್ಸಿ ಪನ್ನು ನಟಿಸಿದ್ದಾರೆ. ಈ ಎರಡು ಚಿತ್ರಗಳ ಹೊರತಾಗಿ, ಶಾರುಖ್ ಸಲ್ಮಾನ್ ಖಾನ್ ಅವರ ಟೈಗರ್-3 ಸಿನಿಮಾದಲ್ಲಿ ಅತಿಥಿ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಅಷ್ಟೇ ಅಲ್ಲದೇ ಯಶ್‌ ರಾಜ್‌ ಫಿಲ್ಮ್ಸ್‌ ಅವರ ʻಟೈಗರ್ ವರ್ಸಸ್ ಪಠಾಣ್‌ʼನಲ್ಲಿಯೂ ಕಾಣಿಸಿಕೊಳ್ಳಲಿದ್ದಾರೆ ಎಂದು ವರದಿಯಾಗಿದೆ. ಈ ಸಿನಿಮಾವನ್ನು ಸಿದ್ಧಾರ್ಥ್ ಆನಂದ್ ನಿರ್ದೇಶಿಸಲಿದ್ದಾರೆ.

Exit mobile version