Site icon Vistara News

Shahrukh Khan: ನಯನತಾರಾ-ವಿಘ್ನೇಶ್ ಶಿವನ್ ದಂಪತಿ ಅವಳಿ ಮಕ್ಕಳನ್ನು ಭೇಟಿ ಮಾಡಿದ ಶಾರುಖ್‌: ಜಮಾಯಿಸಿದ ಅಭಿಮಾನಿಗಳು

Shahrukh Khan visits Nayanthara and her twin boys

ಬೆಂಗಳೂರು: ನಿರ್ದೇಶಕ ಅಟ್ಲಿ ಕುಮಾರ್ ಅವರ ಜವಾನ್ ಚಿತ್ರದಲ್ಲಿ ಶಾರುಖ್ ಖಾನ್ (Shahrukh Khan) ಮತ್ತು ನಯನತಾರಾ ತೆರೆ ಹಂಚಿಕೊಳ್ಳಲಿದ್ದಾರೆ. ಇತ್ತೀಚೆಗೆ, ಶಾರುಖ್‌ ಅವರು ನಯನತಾರಾ (Nayanthara) -ವಿಘ್ನೇಶ್ ಶಿವನ್ ( Vignesh Shivan) ದಂಪತಿಯ ಅವಳಿ ಮಕ್ಕಳನ್ನು ಭೇಟಿ ಮಾಡಲು ಚೆನ್ನೈನಲ್ಲಿರುವ ನಯನತಾರಾ ಅವರ ಅಪಾರ್ಟ್ಮೆಂಟ್‌ಗೆ ಆಗಮಿಸಿದರು. ಶಾರುಖ್ ಖಾನ್ ಬರುತ್ತಿರುವ ವಿಚಾರ ಗೊತ್ತಾಗುತ್ತಿದ್ದಂತೆ ಶಾರುಖ್‌ ಅಭಿಮಾನಿಗಳು ಅಪಾರ್ಟ್ಮೆಂಟ್‌ಗೆ ಜಮಾಯಿಸಿದ್ದಾರೆ.

ಹೊರಡುವಾಗ ನಯನತಾರಾ ಅವರ ಕೆನ್ನೆಗೆ ಮುತ್ತಿಕ್ಕಿ ಆಕೆಗೆ ಹಾಗೂ ಹೊರಗೆ ನೆರೆದಿದ್ದ ಅಭಿಮಾನಿಗಳಿಗೆ ಫ್ಲೈಯಿಂಗ್ ಕಿಸ್ ನೀಡಿದ್ದಾರೆ ಶಾರುಖ್‌. ಇದೀಗ ಈ ವಿಡಿಯೊಗಳು ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗುತ್ತಿವೆ. ಸಿದ್ಧಾರ್ಥ್ ಆನಂದ್ ನಿರ್ದೇಶನದ ಪಠಾಣ್‌ ಚಿತ್ರದ ಯಶಸ್ಸಿನಲ್ಲಿ ಶಾರುಖ್ ಖಾನ್ ಮುಳುಗಿದ್ದಾರೆ. ಈ ಚಿತ್ರವು ವಿಶ್ವದಾದ್ಯಂತ ಬಾಕ್ಸ್ ಆಫೀಸ್‌ನಲ್ಲಿ 950 ಕೋಟಿ ರೂ. ಕಲೆಕ್ಷನ್‌ ಮಾಡಿ ಮುನ್ನುಗ್ಗುತ್ತಿದೆ.

ಇದನ್ನೂ ಓದಿ: Shahrukh Khan: ಪಠಾಣ್‌ನಿಂದ ಜವಾನ್‌, ಡಂಕಿ ಸಿನಿಮಾಗಳಿಗೆ ಲಾಭವಾಗುತ್ತಾ? ಶಾರುಖ್‌ ಬಗ್ಗೆ ಭವಿಷ್ಯ ನುಡಿದ ತಜ್ಞರು!

ಇದನ್ನೂ ಓದಿ: Pathaan Movie : ಒಂಬತ್ತೇ ದಿನಗಳಲ್ಲಿ 700 ಕೋಟಿ ರೂ. ಬಾಚಿಕೊಂಡ ಪಠಾಣ್‌

ʻಜವಾನ್ʼ ಸಿನಿಮಾ ನಿರ್ದೇಶಕ ಅಟ್ಲಿ ಅವರು ಬಾಲಿವುಡ್‌ ಚೊಚ್ಚಲ ಚಿತ್ರವಾಗಿದೆ. ಆ್ಯಕ್ಷನ್ ಥ್ರಿಲ್ಲರ್ ಚಿತ್ರದಲ್ಲಿ ಶಾರುಖ್ ಖಾನ್ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಈ ಚಿತ್ರದ ಮೂಲಕ ನಯನತಾರಾ ಹಿಂದಿ ಚಿತ್ರರಂಗಕ್ಕೂ ಕಾಲಿಡಲಿದ್ದಾರೆ.

ವಿಜಯ್ ಸೇತುಪತಿ, ಸನ್ಯಾ ಮಲ್ಹೋತ್ರಾ, ಯೋಗಿ ಬಾಬು ಮತ್ತು ಪ್ರಿಯಾಮಣಿ ಪೋಷಕ ಪಾತ್ರಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ. ದೀಪಿಕಾ ಪಡುಕೋಣೆ ಅತಿಥಿ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಚಿತ್ರದಲ್ಲಿ ದಳಪತಿ ವಿಜಯ್ ಕೂಡ ಅತಿಥಿ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎನ್ನಲಾಗಿದೆ. ಚಿತ್ರವು ಜೂನ್ 2, 2023 ರಂದು ಚಿತ್ರಮಂದಿರಗಳಿಗೆ ಬರಲಿದೆ.

Exit mobile version