Site icon Vistara News

Shahrukh Khan | ಶಾರುಖ್‌ ಪುತ್ರ ಅಬ್ರಾಮ್‌ ಹೆಸರಲ್ಲಿ `R’ ಏಕೆ ಕ್ಯಾಪಿಟಲ್‌? ಅಭಿಮಾನಿ ಪ್ರಶ್ನೆಗೆ ನಟ ಹೇಳಿದ್ದೇನು?

Shahrukh Khan (Abram khan name)

ಬೆಂಗಳೂರು: ಬಾಲಿವುಡ್‌ ನಟ ಶಾರುಖ್‌ ಖಾನ್‌ (Shahrukh Khan) ಹಾಗೂ ಗೌರಿ ಖಾನ್‌ ದಂಪತಿ ಆಗಾಗ ಮಕ್ಕಳ ಬಗ್ಗೆ ಸೋಷಿಯಲ್‌ ಮೀಡಿಯಾದಲ್ಲಿ ಹಂಚಿಕೊಳ್ಳುತ್ತಿರುತ್ತಾರೆ. ಇದೀಗ ಶಾರುಖ್‌ ಮತ್ತು ಗೌರಿ ಖಾನ್‌ ದಂಪತಿ ಮೂರನೇ ಪುತ್ರ ಅಬ್ರಾಮ್‌ (AbRam) ಕುರಿತಾಗಿ ಸೋಷಿಯಲ್‌ ಮೀಡಿಯಾದಲ್ಲಿ ಚರ್ಚೆಯಾಗುತ್ತಿದೆ. ಅಭಿಮಾನಿಯೊಬ್ಬರು ಶಾರುಖ್‌ ಅವರಿಗೆ ಅಬ್ರಾಮ್‌ ಹೆಸರಿನಲ್ಲಿ ‘R’ ಏಕೆ ಕ್ಯಾಪಿಟಲ್‌ ಇದೆ? ಎಂದು ಪ್ರಶ್ನಿಸಿದ್ದಾರೆ. ಅದರ ಹಿಂದಿನ ಕಾರಣವನ್ನು ಶಾರುಖ್‌ ತಿಳಿಸಿದ್ದು, ಅಭಿಮಾನಿಗಳ ಹೃದಯ ಗೆದ್ದಿದ್ದಾರೆ.

ಅಬ್ರಾಮ್‌ ಖಾನ್‌ ಬಾಡಿಗೆ ತಾಯ್ತನದ ಮೂಲಕ 2013ರಲ್ಲಿ ಜನಿಸಿದರು. ಶಾರುಖ್‌ ದಂಪತಿ ಮೂರನೇ ಮಗುವಿನ ನಿರೀಕ್ಷೆಯಲ್ಲಿದ್ದಾಗ ಶಾರುಖ್‌ ಖಾನ್‌ ಅವರ ಮಗ ಆರ್ಯನ್ ಖಾನ್ ಬಗ್ಗೆ ಹಲವು ವದಂತಿಗಳು ಹಬ್ಬಿದ್ದವು. ಅಬ್ರಾಮ್ ಶಾರುಖ್ ಅವರ ಹಿರಿಯ ಮಗ ಆರ್ಯನ್ ಖಾನ್ ಅವರ ಮಗು ಎಂದು ಗಾಸಿಪ್‌ಗಳು ಹರಿದಾಡಿದ್ದವು. ಬಳಿಕ ಶಾರುಖ್‌ ದಂಪತಿ ಬಾಡಿಗೆ ತಾಯ್ತನದ ಮೂಲಕ ಅಬ್ರಾಮ್‌ ಅವರನ್ನು ಪಡೆದಿರುವುದಾಗಿ ಸ್ಪಷ್ಟನೆ ನೀಡಿದ್ದರು. ಇದೀಗ ಅಬ್ರಾಮ್‌ ಹೆಸರಿನ ಕುರಿತು ಸಾಕಷ್ಟು ಚರ್ಚೆಗಳು ಸೋಷಿಯಲ್‌ ಮೀಡಿಯಾದಲ್ಲಿ ಹರಿದಾಡುತ್ತಿವೆ.

ಇದನ್ನೂ ಓದಿ | Shahrukh Khan‌ | ನಟ ಶಾರುಖ್‌ ನಿವಾಸದ ಗೇಟ್‌ಗೆ ಫ್ಯಾನ್ಸ್‌ ಫಿದಾ ಆಗಿದ್ಯಾಕೆ?

ಅಭಿಮಾನಿಯೊಬ್ಬರು ಶಾರುಖ್‌ ಅವರಿಗೆ ಅಬ್ರಾಮ್‌ ಹೆಸರಿನಲ್ಲಿ ‘R’ ಏಕೆ ಕ್ಯಾಪಿಟಲ್‌ ಇದೆ? ಎಂದು ಟ್ವೀಟ್‌ ಮೂಲಕ ಪ್ರಶ್ನಿಸಿದ್ದಾರೆ. ಅದರ ಹಿಂದಿನ ಕಾರಣವನ್ನು ಶಾರುಖ್‌ ತಿಳಿಸಿದ್ದು ʻʻನಮ್ಮದು ಹಿಂದೂ-ಮುಸ್ಲಿಂ ಕುಟುಂಬ ಆದ್ದರಿಂದ ನನ್ನ ಮಕ್ಕಳು ಹೆಸರಿನಲ್ಲಿ ಯಾವುದೇ ಭಿನ್ನಾಭಿಪ್ರಾಯವಿಲ್ಲದೆ ಬೆಳೆಯಬೇಕೆಂದು ನಾನು ಬಯಸುತ್ತೇನೆ. ಮುಸ್ಲಿಂ ಧರ್ಮದ ಪ್ರವಾದಿ ಇಬ್ರಾಹಿಂ ಹಾಗೂ ಹಿಂದೂ ದೇವರಾದ ರಾಮನ ಹೆಸರಿನೊಂದಿಗೆ ಇದೆ. ಈ ಹೆಸರು ಹೆಚ್ಚು ಸಾರ್ವತ್ರಿಕ ಆಕರ್ಷಣೆಯನ್ನು ಹೊಂದಿದೆʼʼಎಂದು ಉತ್ತರ ನೀಡಿದ್ದಾರೆ. ಈ ಉತ್ತರಕ್ಕೆ ಶಾರುಖ್‌ ಅಭಿಮಾನಿಗಳು ಟ್ವೀಟ್‌ ಮೂಲಕ ಸಂತಸ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ | Actor Shahrukh Khan | ಮುಂಬೈ ಏರ್‌ಪೋರ್ಟ್‌ನಲ್ಲಿ ಕಸ್ಟಮ್ಸ್‌ ಅಧಿಕಾರಿಗಳು ಶಾರುಖ್‌ ಖಾನ್‌ರನ್ನು ತಡೆದಿದ್ದೇಕೆ?

Exit mobile version