ಬೆಂಗಳೂರು: 2023 ಶಾರುಖ್ ಖಾನ್ (Shahrukh Khan) ವರ್ಷ ಎಂದು ಹೇಳಲಾಗುತ್ತಿದೆ. ನಾಲ್ಕು ವರ್ಷಗಳ ನಂತರ ಪಠಾಣ್ ಮೂಲಕ ಮತ್ತೆ ತೆರೆ ಮೇಲೆ ಮಿಂಚಿದ ಶಾರುಖ್ 500 ಕೋಟಿ ರೂ. ಅಧಿಕ ಗಳಿಕೆ ಮಾಡಿದ್ದಾರೆ. ಪಠಾಣ್ ಬಳಿಕ ಶಾರುಖ್ ಅಭಿನಯದ ಜವಾನ್ ಮತ್ತು ಡಂಕಿ ಸಿನಿಮಾಗಳೂ ಇದೇ ವರ್ಷ ಬಿಡುಗಡೆಯಾಗಲಿವೆ. ಪಠಾಣ್ ಸಿನಿಮಾದಿಂದಾಗಿ ಜವಾನ್ ಮತ್ತು ಡಂಕಿ ಸಿನಿಮಾಗೆ ಯಶಸ್ಸು ತಂದು ಕೊಡುತ್ತದೆ. ಹಾಗಾಗಿ ಮುಂಬರುವ ವರ್ಷವು ಶಾರುಖ್ ಅವರಿಗೆ ಮಹತ್ವದ್ದಾಗಿದೆ ಎಂದು ವ್ಯಾಪಾರ ತಜ್ಞರು ಭವಿಷ್ಯ ನುಡಿದಿದ್ದಾರೆ.
ವ್ಯಾಪಾರ ತಜ್ಞರಾದ ತರಣ್ ಆದರ್ಶ್ ಈ ಬಗ್ಗೆ ʻʻಶಾರುಖ್ ಅವರಿಗೆ ಪಠಾಣ್ ಸಿನಿಮಾದಿಂದ ಖಂಡಿತ ಲಾಭವಾಗುತ್ತದೆ. ಒಂದು ಚಿತ್ರ ಚೆನ್ನಾಗಿ ಮೂಡಿಬಂದಾಗ ಅದು ನಟನ ಮುಂದಿನ ಚಿತ್ರಗಳ ಮೇಲೆ ತಾನಾಗಿಯೇ ಒಳ್ಳೆಯ ಅಥವಾ ಕೆಟ್ಟ ಪರಿಣಾಮ ಬೀರುತ್ತದೆ. ಜವಾನ್ ಸಿನಿಮಾ ಜೂನ್‌ನಲ್ಲಿ ತಿಂಗಳಲ್ಲಿ ತೆರೆಗ ಬರಲಿದೆ, ಡಂಕಿ ಡಿಸೆಂಬರ್‌ನಲ್ಲಿ ತೆರೆಗೆ ಬರುವ ಸಾಧ್ಯತೆ ಇದೆ,ʼʼ ಎಂದು ತರಣ್ ಆದರ್ಶ್ ಹೇಳಿದ್ದಾರೆ.
ಇದನ್ನೂ ಓದಿ: Shahrukh Khan: ಟಾಪ್ 10 ಶಾರುಖ್ ಖಾನ್ ಹಿಟ್ ಸಿನಿಮಾ, ಗಳಿಕೆ ಎಷ್ಟು?
ʻʻಈ ವರ್ಷದ ಮಧ್ಯದಲ್ಲಿ ಜವಾನ್ ತೆರೆ ಮೇಲೆ ಬರಲಿದೆ. ಅಟ್ಲೀಯಂತಹ ನಿರ್ದೇಶಕರ ಜತೆ ಶಾರುಖ್ ಹೊಸ ಅವತಾರದಲ್ಲಿ ಬರಲಿದ್ದಾರೆ. ಇತರ ಅನೇಕ ಚಿತ್ರ ನಿರ್ಮಾಪಕರಿಗಿಂತ ಭಿನ್ನವಾಗಿ ತನ್ನ ನಾಯಕರನ್ನು ಹೇಗೆ ಪ್ರಸ್ತುತಪಡಿಸಬೇಕೆಂದು ಅವರಿಗೆ ತಿಳಿದಿದೆ. ಪಠಾಣ್‌ನಿಂದ ಇದು ಸಾಕಷ್ಟು ಪ್ರಯೋಜನವನ್ನು ಪಡೆಯಲಿದೆ. ಡಂಕಿ ಕೂಡ ನಿರ್ದೇಶಕ ರಾಜ್‌ಕುಮಾರ್ ಹಿರಾನಿ ಅವರ ಚಿತ್ರವಾಗಿದೆ. ಜವಾನ್ ಮತ್ತು ಡಂಕಿಯಿಂದ 300 ಕೋಟಿ ರೂ.ಗಿಂತ ಹೆಚ್ಚು ನಿರೀಕ್ಷಿಸಲಾಗಿದೆ. ಜವಾನ್ ಮತ್ತು ಡಂಕಿ ಎರಡೂ ಬಾಕ್ಸ್ ಆಫೀಸ್‌ನಲ್ಲಿ ಅದ್ಭುತ ಕಲೆಕ್ಷನ್ ಮಾಡುತ್ತವೆʼʼ ಎಂದು ಭವಿಷ್ಯ ನುಡಿದಿದ್ದಾರೆ.
ಇದನ್ನೂ ಓದಿ: Shahrukh Khan | ವಿಶ್ವದ ಶ್ರೀಮಂತ ನಟರ ಪಟ್ಟಿ ಪ್ರಕಟ, ಶಾರುಖ್ ಎಷ್ಟನೇ ಸ್ಥಾನದಲ್ಲಿದ್ದಾರೆ?
ದಕ್ಷಿಣ ಭಾರತದಲ್ಲಿ ಸಖತ್ ಕ್ರೇಜ್!
ದಕ್ಷಿಣ ಭಾರತದಲ್ಲಿ ಜವಾನ್ ಸಿನಿಮಾ ಬಗ್ಗೆ ಹೆಚ್ಚು ಕ್ರೇಜ್ ಇದೆ. ಹಿಂದಿ ಸಿನಿಮಾಗಳಿಗೆ ತಮಿಳುನಾಡಿನಲ್ಲಿ ಒಳ್ಳೆಯ ರೆಸ್ಪಾನ್ಸ್ ದೊರೆಯುತ್ತದೆ. ದಕ್ಷಿಣದಲ್ಲಿ ಅಟ್ಲಿ ಅವರು ತಮ್ಮದೇ ಆದ ಅಭಿಮಾನಿಗಳನ್ನು ಹೊಂದಿರುವ ನಿರ್ದೇಶಕರಾಗಿದ್ದಾರೆ. ಜವಾನ್ ಬಹುಶಃ ತಮಿಳುನಾಡಿನ ಮಾರುಕಟ್ಟೆಯಲ್ಲಿ ಅತ್ಯಧಿಕ ಸಂಖ್ಯೆಯನ್ನು ಗಳಿಸುವ ಸಾಮರ್ಥ್ಯವನ್ನು ಹೊಂದಿರುವ ಏಕೈಕ ಹಿಂದಿ ಚಲನಚಿತ್ರವಾಗಬಹುದು ಎಂದು ಊಹಿಸಲಾಗುತ್ತಿದೆ.