Site icon Vistara News

Shamita Shetty | ಬೈ ಬೈ ಹೇಳಿದ ಶಮಿತಾ ಶೆಟ್ಟಿ ಹಾಗೂ ರಾಕೇಶ್‌ ಬಾಪಟ್‌

Shamita Shetty

ಬೆಂಗಳೂರು: ಬಿಗ್‌ಬಾಸ್‌ ಒಟಿಟಿ ಖ್ಯಾತಿಯ ಶಮಿತಾ ಶೆಟ್ಟಿ (Shamita Shetty ) ಮತ್ತು ರಾಕೇಶ್ ಬಾಪಟ್ (raqesh bapat) ಇದೀಗ ಬ್ರೇಕ್‌ಅಪ್‌ ಅಗಿರುವ ವಿಚಾರವನ್ನು ಸೋಷಿಯಲ್‌ ಮೀಡಿಯಾ ಮೂಲಕ ತಿಳಿಸಿದ್ದಾರೆ.

ಶಮಿತಾ ಶೆಟ್ಟಿ ತಮ್ಮ ಇನ್‌ಸ್ಟಾಗ್ರಾಮ್ ಸ್ಟೋರಿಯಲ್ಲಿ “ರಾಕೇಶ್ ಮತ್ತು ನಾನು ಇನ್ನು ಮುಂದೆ ಜತೆಯಾಗಿ ಇರುವುದಿಲ್ಲ. ಕಳೆದ ಕೆಲವು ಸಮಯದಿಂದ ನಾವು ದೂರ ಇದ್ದೇವೆ. ನಮಗೆ ಬೆಂಬಲ ನೀಡಿದ ಅಭಿಮಾನಿಗಳಿಗೆ ಧನ್ಯವಾದಗಳು. ನಿಮ್ಮ ಪ್ರೀತಿ ಮತ್ತು ಬೆಂಬಲ ಇನ್ನೂ ಮುಂದೆಯೂ ನೀಡಿʼʼ ಎಂದು ಬರೆದುಕೊಂಡಿದ್ದಾರೆ.

ಶಮಿತಾ ಶೆಟ್ಟಿ ಅವರಿಗೆ 43 ವರ್ಷ ವಯಸ್ಸಾಗಿತ್ತು. ಶಿಲ್ಪಾ ಶೆಟ್ಟಿ ಸಹೋದರಿ ಎಂಬ ಕಾರಣಕ್ಕೆ ಅವರಿಗೆ ಹೆಚ್ಚು ಪ್ರಚಾರ ಸಿಕ್ಕಿತ್ತು. ರಾಕೇಶ್‌ ಬಾಪಟ್‌ ಅವರೊಂದಿಗೆ ಡೇಟಿಂಗ್‌ ಶುರು ಮಾಡಿಕೊಂಡಿದ್ದಾಗ ಅಭಿಮಾನಿಗಳು ಸಂತಸ ವ್ಯಕ್ತ ಪಡಿಸಿದ್ದರು.

ಇದನ್ನೂ ಓದಿ | Beauty secret: ಬಾಲಿವುಡ್‌ ತಾರೆಯರ ಕಿಚನ್‌ನಲ್ಲೇ ಇದೆಯಂತೆ ಇವರ ಚೆಲುವಿನ ಗುಟ್ಟು!

ರಾಕೇಶ್ ಬಾಪಟ್ ಅವರು ಪೋಸ್ಟ್‌ ಶೇರ್‌ ಮಾಡಿಕೊಂಡಿದ್ದು, “ಶಮಿತಾ ಮತ್ತು ನಾನು ಇನ್ನು ಮುಂದೆ ಒಟ್ಟಿಗೆ ಇರುವುದಿಲ್ಲ ಎಂಬುದನ್ನು ನಿಮ್ಮೊಂದಿಗೆ ಹಂಚಿಕೊಳ್ಳಲು ನಾನು ಬಯಸುತ್ತೇನೆ. ವಿಧಿಯು ನಮ್ಮ ಹಾದಿಗಳನ್ನು ಅತ್ಯಂತ ಅಸಾಮಾನ್ಯ ಸಂದರ್ಭಗಳಲ್ಲಿ ಭೇಟಿ ಮಾಡಿತು. ನಿಮ್ಮ ಪ್ರೀತಿ ಮತ್ತು ಬೆಂಬಲ ಸದಾ ಇರಲಿ. ನಮ್ಮ ಅಭಿಮಾನಿಗಳಿಗೆ ನಾವು ಋಣಿಯಾಗಿದ್ದೇವೆ. ನಿಮ್ಮೆಲ್ಲರ ಬೆಂಬಲಕ್ಕಾಗಿ ಎದುರು ನೋಡುತ್ತಿದ್ದೇನೆ” ಎಂದು ಬರೆದುಕೊಂಡಿದ್ದಾರೆ.

ಮಾರ್ಚ್‌ನಲ್ಲಿ ಶಮಿತಾ ಶೆಟ್ಟಿ ಮತ್ತು ರಾಕೇಶ್ ಬಾಪಟ್ ಸಂಬಂಧದ ಬ್ರೇಕ್‌ ಅಪ್‌ ಕುರಿತು ಸುದ್ದಿ ಹರಿದಾಡಿತ್ತು. ಮಾಧ್ಯಮ ವರದಿಯ ಸ್ಕ್ರೀನ್‌ಶಾಟ್ ಅನ್ನು ಪೋಸ್ಟ್ ಮಾಡಿ, “ನಮ್ಮ ಸಂಬಂಧಕ್ಕೆ ಸಂಬಂಧಿಸಿದ ವದಂತಿಗಳನ್ನು ನಂಬಬೇಡಿ ಎಂದು ನಾವು ವಿನಂತಿಸುತ್ತೇವೆ. ಇದರಲ್ಲಿ ಯಾವುದೇ ಸತ್ಯವಿಲ್ಲʼʼ ಎಂದು ಶಮಿತಾ ಶೆಟ್ಟಿ ಅವರು ಹೇಳಿಕೆ ನೀಡಿದ್ದರು.

ಶಮಿತಾ ಶೆಟ್ಟಿ ಮತ್ತು ರಾಕೇಶ್ ಬಾಪಟ್ ಅವರು ಬಿಗ್ ಬಾಸ್ OTTಯಲ್ಲಿ ಭಾಗವಹಿಸಿದ್ದರು. ಇಬ್ಬರ ನಡುವೆ ಪ್ರೇಮಾಂಕುರವಾಗಿತ್ತು. ನಂತರ, ರಾಕೇಶ್ ಬಿಗ್ ಬಾಸ್ 15ರಲ್ಲಿ ವೈಲ್ಡ್‌ ಕಾರ್ಡ್‌ ಎಂಟ್ರಿಯಾಗಿ ಕಾಣಿಸಿಕೊಂಡರು. ಶಮಿತಾ ಫೈನಲಿಸ್ಟ್‌ಗಳಲ್ಲಿ ಒಬ್ಬರಾಗಿದ್ದರು. ಆದರೆ, ಆರೋಗ್ಯ ಸಮಸ್ಯೆಯಿಂದಾಗಿ ಅವರು ಕಾರ್ಯಕ್ರಮದಿಂದ ಹೊರಗುಳಿಯಬೇಕಾಯಿತು.

ʻಮೇರೆ ಯಾರ್ ಕಿ ಶಾದಿ ಹೈʼ ಮತ್ತು ʻಝೆಹರ್ʼ ಚಿತ್ರಗಳಲ್ಲಿನ ಅಭಿನಯಕ್ಕಾಗಿ ಶಮಿತಾ ಹೆಚ್ಚು ಹೆಸರುವಾಸಿಯಾಗಿದ್ದಾರೆ. ಅವರು ಬಿಗ್ ಬಾಸ್ 3, ಬಿಗ್ ಬಾಸ್ OTT ಮತ್ತು ಜಲಕ್ ದಿಖ್ಲಾ ಜಾ 8ನಂತಹ ರಿಯಾಲ್ಟಿ ಶೋಗಳಲ್ಲಿ ಭಾಗವಹಿಸಿದ್ದಾರೆ. ಸ್ವಸ್ತಿಕಾ ಮುಖರ್ಜಿ ಮತ್ತು ಮೋನಾ ಸಿಂಗ್ ಅವರೊಂದಿಗೆ ಬ್ಲ್ಯಾಕ್ ವಿಡೋಸ್ ವೆಬ್-ಸರಣಿಯಲ್ಲಿ ನಟಿಸಿದ್ದಾರೆ.

ಇದನ್ನೂ ಓದಿ | ರಣವೀರ್‌ ಸಿಂಗ್‌ ನಗ್ನ ಚಿತ್ರ ವಿವಾದ : ಟ್ವಿಟರ್‌ನಲ್ಲಿ ಬಟ್ಟೆ ದಾನ ಅಭಿಯಾನ, RGV ಟ್ವೀಟ್‌ನಲ್ಲಿ ಹೇಳಿದ್ದೇನು?

Exit mobile version