ಬೆಂಗಳೂರು: 2004ರಲ್ಲಿ ಜೋಶ್ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಪದಾರ್ಪಣೆ ಮಾಡಿದ ಮಾಲಿವುಡ್ ನಟಿ ಶಾಮ್ನಾ ಕಾಸೀಮ್ (Shamna Kasim) ಮಗುವಿನ ನಿರೀಕ್ಷೆಯಲ್ಲಿದ್ದಾರೆ. ಇದೀಗ ಬೇಬಿ ಬಂಪ್ ಫೋಟೊಶೂಟ್ ಮಾಡಿಸಿಕೊಂಡಿದ್ದಾರೆ. 2022 ಜೂನ್ ತಿಂಗಳಿನಲ್ಲಿ ಉದ್ಯಮಿ ಶಾನಿದ್ ಆಸಿಫ್ ಅಲಿ ಜತೆ ವೈವಾಹಿಕ ಜೀವನಕ್ಕೆ ಕಾಲಿಟ್ಟರು. ಕುಟುಂಬಸ್ಥರು ಮತ್ತು ಆಪ್ತ ಸ್ನೇಹಿತರು ಮಾತ್ರ ಮದುವೆಯಲ್ಲಿ ಭಾಗಿಯಾಗಿದ್ದರು.
2013ರಲ್ಲಿ ರಾಧನ ಗಂಡ ಚಿತ್ರದಲ್ಲಿ ನಟಿಸಿದ್ದಾರೆ. ಇದೀಗ ಗುಲಾಬಿ ಬಣ್ಣದ ಗೌನ್‌ನಲ್ಲಿರುವ ಫೋಟೊವನ್ನು ಇನ್‌ಸ್ಟಾದಲ್ಲಿ ಹಂಚಿಕೊಂಡಿದ್ದಾರೆ. 2022ರ ಡಿಸೆಂಬರ್ ತಿಂಗಳಿನಲ್ಲಿ ಮೊದಲ ಮಗುವಿನ ನಿರೀಕ್ಷೆಯಲ್ಲಿರುವುದಾಗಿ ನಟಿ ಹೇಳಿಕೊಂಡಿದ್ದಾರೆ.
ಇದನ್ನೂ ಓದಿ: Alia Bhatt: ಜಾಹಿರಾತಿನ ಪೋಸ್ಟ್ ಜತೆ ಮಗುವಿನ ಫೋಟೊಗಳನ್ನು ಹಂಚಿಕೊಂಡ ಆಲಿಯಾ ಭಟ್!
ನಮ್ಮೊಳಗೆ ಪುಟ್ಟ ಜೀವ ಬೆಳೆಯುವುದು ಒಂದು ಮಿರಾಕಲ್, ಜೀವನದಲ್ಲಿ ಪಡೆದಿರುವ ಬೆಸ್ಟ್ ಗಿಫ್ಟ್ ಇದು’ ಎಂದು ಶಾಮ್ನಾ ಬರೆದುಕೊಂಡಿದ್ದಾರೆ.