ಬೆಂಗಳೂರು: ಸ್ಯಾಂಡಲ್‌ವುಡ್‌ಗೆ ದೊಡ್ಮನೆ ಕುಟುಂಬದಿಂದ ಈಗಾಗಲೇ ಧನ್ಯಾ ರಾಮ್‌ಕುಮಾರ್, ಮೊಮ್ಮಗ ಧೀರೇನ್ ರಾಮ್ ಕುಮಾರ್ ಎಂಟ್ರಿ ಕೊಟ್ಟಿದ್ದಾಗಿದೆ. ಡಾ.ರಾಜ್ ಕುಮಾರ್ (dr rajkumar) ಹಾಗೂ ಪಾರ್ವತಮ್ಮ ರಾಜ್‌ಕುಮಾರ್ ಅವರ ಮೊಮ್ಮಗ ಷಣ್ಮುಖ ಗೋವಿಂದರಾಜ್ (Shanmukha Govindaraj) ಕೂಡ ಇದೀಗ ಎರಡನೇ ಸಿನಿಮಾಗೆ ಕೈ ಹಾಕಿದ್ದಾರೆ. ಅಣ್ಣಾವ್ರ ಹಿರಿಯ ಪುತ್ರಿ ಲಕ್ಷ್ಮೀ ಹಾಗೂ ಗೋವಿಂದರಾಜ್ ಪುತ್ರ ಷಣ್ಮುಖ ಗೋವಿಂದರಾಜ್ ‘ಚಿನ್ನದ ಮಲ್ಲಿಗೆ ಹೂವೇ’ (chinnada mallige hoove) ಮೂಲಕ ಮತ್ತೆ ತೆರೆಯಲ್ಲಿ ಮಿಂಚಲು ರೆಡಿಯಾಗಿದ್ದಾರೆ.
ಷಣ್ಮುಖ ಗೋವಿಂದರಾಜ್ ಅಭಿನಯದ ಮೊಟ್ಟಮೊದಲ ಸಿನಿಮಾದ ಹೆಸರು ‘ನಿಂಬಿಯಾ ಬನಾದ ಮ್ಯಾಗ’. ಈ ಚಿತ್ರಕ್ಕೆ ಅಶೋಕ್ ಕಡಬ ನಿರ್ದೇಶನ ಮಾಡಿದ್ದರು. ಪಂಕಜ್ ನಾರಾಯಣ್, ಭವ್ಯಾ, ಎಂ.ಎಸ್.ಉಮೇಶ್, ರಾಮಕೃಷ್ಣ, ಶಶಿಧರ್ ಕೋಟೆ ಮುಂತಾದವರು ತಾರಾಗಣದಲ್ಲಿದ್ದಾರೆ. ‘ನಿಂಬಿಯಾ ಬನಾದ ಮ್ಯಾಗ’ ಇನ್ನೂ ಬಿಡುಗಡೆಯಾಗಿಲ್ಲ. ಆಗಲೇ ಎರಡನೇ ಚಿತ್ರಕ್ಕೆ ಷಣ್ಮುಖ ಗೋವಿಂದರಾಜ್ ಚಾಲನೆ ಕೊಟ್ಟಿದ್ದಾರೆ.
‘ಚಿನ್ನದ ಮಲ್ಲಿಗೆ ಹೂವೇ’ ಸಿನಿಮಾ
ಜನಪ್ರಿಯ ಲೇಖಕಿ ಸಾರಾ ಅಬೂಬಕ್ಕರ್ ಬರೆದ ‘ವಜ್ರಗಳು’ ಕಾದಂಬರಿಯನ್ನು ಆಧರಿಸಿದ ‘ಸಾರಾ ವಜ್ರ’ ಸಿನಿಮಾವನ್ನು ನಿರ್ದೇಶಿಸಿದ್ದ ನಿರ್ದೇಶಕಿ ಆರ್‍ನಾ ಸಾಧ್ಯ ಈ ಸಿನಿಮಾ ಮೂಲಕ ಈಗ ನಿರ್ಮಾಪಕಿಯಾಗಿದ್ದಾರೆ. ಸಂಭ್ರಮ ಮೀಡಿಯಾ ಹೌಸ್ ಎಂಬ ಸಂಸ್ಥೆಯಿಂದ ‘ಚಿನ್ನದ ಮಲ್ಲಿಗೆ ಹೂವೇ’ ಸಿನಿಮಾವನ್ನು ನಿರ್ಮಾಣ ಮಾಡುತ್ತಿದ್ದಾರೆ. ಆ ಸಿನಮಾದಲ್ಲಿಯೇ ಷಣ್ಮುಖ ಗೋವಿಂದರಾಜು ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ.
ಇದನ್ನೂ ಓದಿ: Virat Kohli: ರಜೆಯಲ್ಲಿದ್ದರೂ ಓಟ ಮಾತ್ರ ನಿರಂತರ; ಕೊಹ್ಲಿಯ ಈ ಮಾತಿನ ರಹಸ್ಯವೇನು?
ಇತ್ತೀಚೆಗೆ ‘ಚಿನ್ನದ ಮಲ್ಲಿಗೆ ಹೂವೆ’ ಚಿತ್ರದ ಶೀರ್ಷಿಕೆಯನ್ನು ತಮ್ಮ ಅಕ್ಷರದ ಮೂಲಕ ಖ್ಯಾತ ಸಾಹಿತಿ ಡಾ ವಿ ನಾಗೇಂದ್ರ ಪ್ರಸಾದ್ ಬರೆದುಕೊಟ್ಟರು. ನಟ ಡಾ ರಾಘವೇಂದ್ರ ರಾಜ್ ಕುಮಾರ್ ಶೀರ್ಷಿಕೆ ಅನಾವರಣ ಮಾಡಿದರು. ರಾಷ್ಟ್ರಪ್ರಶಸ್ತಿ ವಿಜೇತ ನಿರ್ದೇಶಕ ನವಿಲುಗರಿ ನವೀನ್ ಈ ಸಿನಿಮಾವನ್ನು ನಿರ್ದೇಶನ ಮಾಡುತ್ತಿದ್ದಾರೆ. ಸೆಪ್ಟೆಂಬರ್‌ನಿಂದ ಸಿನಿಮಾ ಸೆಟ್ಟೇರುತ್ತಿದೆ. ಸಿನಿ ಸಾಹಿತಿ ನಾಗೇಂದ್ರ ಪ್ರಸಾದ್ ಕೂಡ ಈ ಚಿತ್ರದಲ್ಲಿ ಅಭಿನಯಿಸುತ್ತಿದ್ದಾರೆ. ಉಳಿದ ಪಾತ್ರಗಳನ್ನು ಮುಂದಿನ ದಿನಗಳಲ್ಲಿ ರಿವೀಲ್ ಮಾಡುವುದಾಗಿ ಚಿತ್ರತಂಡ ಮಾಹಿತಿ ಹಂಚಿಕೊಂಡಿದೆ. ಪ್ರಣವ್ ಸತೀಶ್ ಸಂಗೀತ ನೀಡುತ್ತಿದ್ದಾರೆ.