Site icon Vistara News

Sharad Kelkar: ‘ಬಾಹುಬಲಿ’ಗೆ ಧ್ವನಿ ನೀಡಿದ್ದು ಮರೆಯಲಾಗದ ಅನುಭವ ಎಂದ ಶರದ್ ಕೇಳ್ಕರ್

Sharad Kelkar

ಅದ್ಧೂರಿ ಬಜೆಟ್‌ನ ʼಬಾಹುಬಲಿʼ (bahubali) ಚಿತ್ರದ ಒಂದೊಂದು ದೃಶ್ಯಗಳು ಇನ್ನೂ ಕಣ್ಣಿಗೆ ಕಟ್ಟಿದಂತಿದೆ. ಸಿನಿಮಾದ ಮೊದಲ ಭಾಗ ಬಿಡುಗಡೆಯಾಗಿ ಹತ್ತು ವರ್ಷ ಸಮೀಪಿಸಿದರೂ ಈಗಲೂ ಚಿತ್ರದ ಬಗ್ಗೆ ಚರ್ಚೆಗಳು ನಡೆಯುತ್ತಲೇ ಇದೆ. ʼಬಾಹುಬಲಿʼ ಪಾತ್ರಧಾರಿ ಪ್ರಭಾಸ್‌ಗೆ (actor prabhas) ಧ್ವನಿ ನೀಡಿರುವ ಶರದ್ ಕೇಳ್ಕರ್ (Sharad Kelkar) ತಮ್ಮ ಮರೆಯಲಾಗದ ಅನುಭವವನ್ನು ಹಂಚಿಕೊಂಡಿದ್ದಾರೆ.

ಡಿಸ್ನಿ+ಹಾಟ್‌ಸ್ಟಾರ್‌ ನಲ್ಲಿ (Disney Plus star) ಬಿಡುಗಡೆಯಾಗಿರುವ “ಬಾಹುಬಲಿ: ಕ್ರೌನ್ ಆ ಬ್ಲಡ್” (Baahubali: Crown of Blood) ಅನಿಮೇಟೆಡ್ ಸರಣಿಯು ಈಗ ಚರ್ಚೆಯಲ್ಲಿದೆ. ಬಾಹುಬಲಿ ಮತ್ತು ಮಾಹಿಷ್ಮತಿಯ ಜಗತ್ತಿನಲ್ಲಿ ಇದೂವರೆಗೂ ಕೇಳಿರದ, ಕಂಡಿರದ ಹಾಗೂ ತಿಳಿಯಲಾಗದಿದ್ದ ಅನೇಕ ಘಟನೆಗಳು ಕಥೆಗಳು ಒಂದೊಂದಾಗಿ ಕೇಳಿ ಬರುತ್ತಿವೆ.


ಅನೇಕ ಐತಿಹಾಸಿಕ ಚಿತ್ರಗಳಿಗೆ ಧ್ವನಿ ನೀಡಿ ಖ್ಯಾತರಾಗಿರುವ ಮೂಲತಃ ನಟರೂ ಆಗಿರುವ ಶರದ್ ಕೇಳ್ಕರ್ ಅವರು ಬಾಹುಬಲಿ ನಾಯಕ ಪ್ರಭಾಸ್‌ ಅವರಿಗೆ ಕಂಠದಾನ ಮಾಡಿದ್ದರು. ಈ ಕುರಿತಂತೆ ಅವರು ತಮ್ಮ ಸಂತಸವನ್ನು ಈಗ ಹಂಚಿಕೊಂಡಿದ್ದಾರೆ.

ತನ್ನ ಬಲವಾದ ಧ್ವನಿಗಾಗಿ ಹೆಸರಾಗಿರುವ ಶರದ್ , ಐಕಾನಿಕ್ ‘ಬಾಹುಬಲಿ’ ಸರಣಿಯನ್ನು ಹಿಂದಿ ಭಾಷೆಗೆ ಡಬ್‌ ಮಾಡುವಾಗ ಚಲನಚಿತ್ರ ನಿರ್ಮಾಪಕ ಎಸ್‌.ಎಸ್. ರಾಜಮೌಳಿ ಅವರು ತಮ್ಮ ಆಯ್ಕೆ ಬಗ್ಗೆ ಮೊದಲು ಸಂದೇಹ ಪಟ್ಟಿದ್ದರು. ‘ಬಾಹುಬಲಿ: ದಿ ಬಿಗಿನಿಂಗ್’ ಮತ್ತು ‘ಬಾಹುಬಲಿ: ದಿ ಕನ್‌ಕ್ಲೂಷನ್’ ಎರಡರಲ್ಲೂ ರೆಬೆಲ್ ಸ್ಟಾರ್ ಪ್ರಭಾಸ್ ಮೂಲತಃ ಚಿತ್ರಿಸಿದ ಅಮರೇಂದ್ರ ಬಾಹುಬಲಿ ಮತ್ತು ಮಹೇಂದ್ರ ಬಾಹುಬಲಿ ಪಾತ್ರಗಳಿಗೆ ಧ್ವನಿ ನೀಡಿದ ಕೇಳ್ಕರ್‌ ಅವರು ಎಪಿಕ್ ಸಾಹಸದ ಡಬ್ಬಿಂಗ್ ಕಾರ್ಯದ ಬಗ್ಗೆ ಅನೇಕ ವಿಚಾರಗಳನ್ನು ಹೇಳಿಕೊಂಡಿದ್ದಾರೆ.

ಪವನ್ ಕಲ್ಯಾಣ್ ಅಭಿನಯದ 2016 ರ ತೆಲುಗು ಆಕ್ಷನ್- ಕಾಮಿಡಿ ಚಿತ್ರ ‘ಸರ್ದಾರ್ ಗಬ್ಬರ್ ಸಿಂಗ್’ ನಲ್ಲಿ ಕೇಳ್ಕರ್ ತೊಡಗಿಸಿಕೊಂಡಿದ್ದರು. ಈ ವೇಳೆ ಸಿಬ್ಬಂದಿಯೊಬ್ಬ ಅವರ ಗಾಯನವನ್ನು ಗುರುತಿಸಿ ರಾಜಮೌಳಿ ಅವರಿಗೆ ಇವರ ಹೆಸರು ಶಿಫಾರಸು ಮಾಡಿದ್ದರು ಎನ್ನಲಾಗಿದೆ.


ನನಗೆ ‘ಬಾಹುಬಲಿ’ ಬಗ್ಗೆ ಯಾವುದೇ ಕಲ್ಪನೆ ಇರಲಿಲ್ಲ. ಆದರೆ ನಾನು ರಾಜಮೌಳಿ ಅವರ ಹಿಂದಿನ ಚಿತ್ರಗಳಾದ ‘ಮಗಧೀರ’ ನೋಡಿದ್ದೇನೆ. ಒಬ್ಬ ನಟನಾಗಿ ನಾನು ಈ ಮಾಸ್ಟರ್‌ಪೀಸ್‌ನ ಸೃಷ್ಟಿಕರ್ತನನ್ನು ಭೇಟಿಯಾಗಲು ಬಯಸಿದ್ದೆ. ಹಾಗಾಗಿ ನಾನು ನನ್ನ ಧ್ವನಿ ಪರೀಕ್ಷೆಯನ್ನು ಮಾಡಿದೆ. ಟೇಪ್ ನೊಂದಿಗೆ ಮರುದಿನ ಅವರನ್ನು ಸ್ಟುಡಿಯೋದಲ್ಲಿ ಭೇಟಿಯಾದೆ. ನೀವು ಬಾಹುಬಲಿಗಾಗಿ ಡಬ್ಬಿಂಗ್ ಮಾಡುತ್ತಿದ್ದೀರಿ ಎಂದು ಅವರು ಹೇಳಿದಾಗ ನಂಬಲು ಅಸಾಧ್ಯವಾಯಿತು ಎಂದಿದ್ದಾರೆ ಕೇಳ್ಕರ್.

ಈ ಪಾತ್ರವು ಕೇಳ್ಕರ್ ಅವರ ವೃತ್ತಿಜೀವನವನ್ನು ಗಮನಾರ್ಹವಾಗಿ ಹೆಚ್ಚಿಸಿತು. ಮಾತ್ರವಲ್ಲದೆ ಅವರನ್ನು ಅಪಾರ ಅಭಿಮಾನಿಗಳ ಗುಂಪಿಗೆ ಪ್ರೀತಿಸುವಂತೆ ಮಾಡಿತು, ಅವರಿಗೆ “ಬಾಹುಬಲಿಯ ಧ್ವನಿ” ಮತ್ತು ಪ್ರೀತಿಯಿಂದ “ಭಾರತದ ಧ್ವನಿ” ಎಂಬ ಬಿರುದು ಸಿಗುವಂತಾಯಿತು. ಮೊದಲು ನಾನೊಬ್ಬ ನಟ. ಉತ್ತಮವಾಗಿ ಅಭಿನಯಿಸಬಲ್ಲೆ. ವಿವಿಧ ಬಗೆಯ ಪಾತ್ರಗಳನ್ನು ಮಾಡುತ್ತಾ ಬಂದಿದ್ದೇನೆ. ಆದರೂ ಒಳ್ಳೆಯ ಕಾಲಕ್ಕೆ ಕಾಯುತ್ತಿದ್ದೇನೆ. ಅತ್ಯುತ್ತಮವಾದದ್ದು ಇನ್ನು ಬರಬಹುದು ಎಂಬ ನಿರೀಕ್ಷೆಯಲ್ಲಿದ್ದೇನೆ ಎನ್ನುತ್ತಾರೆ ಶರದ್.

ಇದನ್ನೂ ಓದಿ: Kalki 2898 AD: ʼಕಲ್ಕಿʼ ಚಿತ್ರದ ನಾಯಕ ಭೈರವನ ಆಪ್ತ ಗೆಳೆಯ ಬುಜ್ಜಿ ಯಾರು? ಈ ವಿಡಿಯೊ ನೋಡಿ

ಎ ಗ್ರಾಫಿಕ್ ಇಂಡಿಯಾ ಮತ್ತು ಆರ್ಕ ಮೀಡಿಯಾ ವರ್ಕ್ಸ್ ಪ್ರೊಡಕ್ಷನ್ ಅಡಿಯಲ್ಲಿ ಎಸ್.ಎಸ್. ರಾಜಮೌಳಿ- ಶರದ್‌ದೇವರಾಜನ್ ಕ್ರಿಯೆಟೀವ್ ಮುಖ್ಯಸ್ಥರಾಗಿದ್ದು, ಜೀವನ್ ಜೆ. ಕಾಂಗ್, ನವೀನ್ ಜಾನ್ ಜಂಟಿಯಾಗಿ ನಿರ್ದೇಶನ ಮಾಡಿದ್ದಾರೆ. ಇವರೆಲ್ಲರೂ ನಿರ್ಮಾಣದಲ್ಲಿ ಪಾಲುದಾರರಾಗಿದ್ದಾರೆ ಎಂದು ಶರದ್ ಹೇಳಿದ್ದಾರೆ.


ಅನಿಮೇಟೆಡ್ ಸರಣಿ ‘ಬಾಹುಬಲಿ: ಕ್ರೌನ್ ಆಫ್ ಬ್ಲಡ್’ ಹಿಂದಿ ಭಾಷೆಗೆ ಭಾಷಾಂತರವಾಗಿದ್ದು, ಕೇಲ್ಕರ್ ಧ್ವನಿ ನೀಡಿದ್ದಾರೆ. ಈ ಸರಣಿಯು ಮೇ 17ರಿಂದ ಡಿಸ್ನಿ ಪ್ಲಸ್‌ನಲ್ಲಿ ಪ್ರದರ್ಶನ ಕಾಣುತ್ತಿದೆ.

Exit mobile version