ಬೆಂಗಳೂರು: ಜನಪ್ರಿಯ ‘ಕಾಫಿ ವಿತ್ ಕರಣ್’ (Koffee With Karan) ಶೋನಲ್ಲಿ ಸೈಫ್ ಅಲಿ ಖಾನ್ (Saif Ali Khan) ಮತ್ತು ಅವರ ತಾಯಿ ಶರ್ಮಿಳಾ ಟ್ಯಾಗೋರ್ ಅವರು ಬಂದಿದ್ದರು. ಶರ್ಮಿಳಾ ಟ್ಯಾಗೋರ್ ಅವರು ಕರಣ್ ಜೋಹರ್ ಜತೆ ಮಾತು ಕತೆ ನಡೆಸಿದರು. ಹೀಗೆ ಮಾತನಾಡುವಾಗ ಶರ್ಮಿಳಾ ಟ್ಯಾಗೋರ್ ಅವರು ತಾನು ಕ್ಯಾನ್ಸರ್ ಪೇಷಂಟ್ ಆಗಿದ್ದೆ ಎಂದು ಹೇಳಿದ್ದಾರೆ.
ಆಲಿಯಾ ಹಾಗೂ ರಣವೀರ್ ಸಿಂಗ್ ನಟನೆಯ ರಾಕಿ ಔರ್ ರಾಣಿ ಕಿ ಪ್ರೇಮ್ ಕಹಾನಿಯಲ್ಲಿ ಶಬಾನಾ ಅವರು ಅಜ್ಜಿಯ ಪಾತ್ರ ನಿರ್ವಹಿಸಿದ್ದರು. ಮೊದಲ ಕರಣ್ ಅವರು ಶರ್ಮಿಳಾ ಅವರನ್ನು ಈ ಪಾತ್ರಕ್ಕೆ ಕರೆತರಬೇಕೆಂದು ನಿರ್ಧಾರ ಮಾಡಿದ್ದರಂತೆ. ಶರ್ಮಿಳಾ ಅವರು ಕರಣ್ ಅವರ ಮೊದಲ ಆಯ್ಕೆಯಾಗಿದ್ದರಂತೆ. ಆದರೆ ಅದೇ ಸಮಯದಲ್ಲಿ ಶರ್ಮಿಳಾ ಟ್ಯಾಗೋರ್ ಅವರು ಆರೋಗ್ಯ ಸಮಸ್ಯೆಗಳಿಂದ ಕಾರಣ ಸಿನಿಮಾಗೆ ಒಪ್ಪಿಗೆ ಸೂಚಿಸಿರಲಿಲ್ಲ. ಈ ಬಗ್ಗೆ ನನಗೆ ಬೇಸರವಿದೆ ಎಂದು ಕರಣ್ ಸಂಚಿಕೆಯಲ್ಲಿ ಮಾತನಾಡಿದರು.
ಆಗ ಶರ್ಮಿಳಾ ಟ್ಯಾಗೋರ್ ಮಾತನಾಡಿ ʻʻಕೋವಿಡ್ ಸಮಯದಲ್ಲಿ ನಾನು ಇಂಜೆಕ್ಷನ್ ತೆಗೆದುಕೊಂಡಿರಲಿಲ್ಲ. ನಿಮಿಗೆ ಗೊತ್ತಿದೆ ಅದು ಏಕೆ ಎಂದು. ನನಗೆ ಕ್ಯಾನ್ಸರ್ ಬಂದ ಬಳಿಕ ರಿಸ್ಕ್ ಬೇಡ ಎಂದು ತೆಗೆದುಕೊಂಡಿರಲಿಲ್ಲ. ಹೀಗೆ ಆರೋಗ್ಯ ಸಮಸ್ಯೆಗಳು ಬಂದಿದ್ದವುʼʼಎಂದು ಮಾತನಾಡಿದ್ದಾರೆ. ಈ ಮೂಲಕ ಸೈಫ್ ಅಲಿ ಖಾನ್ ಅವರ ತಾಯಿ ಕ್ಯಾನ್ಸರ್ ವಿರುದ್ಧ ಹೋರಾಡಿರುವುದು ಬಹರಂಗಗೊಂಡಿದೆ. ಈ ಮುಂಚೆ ಎಲ್ಲಿಯೂ ಸೈಫ್ ಆಗಲಿ ಶರ್ಮಿಳಾ ಟ್ಯಾಗೋರ್ ಅವರಾಗಲಿ ಈ ಬಗ್ಗೆ ಮಾಹಿತಿ ಹಂಚಿಕೊಂಡಿರಲಿಲ್ಲ. ಇಷ್ಟೆಲ್ಲ ಮಾತಾದ ಬಳಿಕ ಮುಂದಿನ ದಿನಗಳಲ್ಲಿ ಕರಣ್ ಜತೆ ಸಿನಿಮಾ ಮಾಡುವುದಾಗಿ ಹೇಳಿಕೊಂಡರು.
ಇದನ್ನೂ ಓದಿ: Basmati Rice: ದೇಶಿ ಮಾರುಕಟ್ಟೆಯಲ್ಲಿ ಬಾಸ್ಮತಿ ಅಕ್ಕಿ ದರದಲ್ಲಿ ಶೇ.10ರಷ್ಟು ಕುಸಿತ
ಸತ್ಯಜಿತ್ ರೇ ಅವರ “ದಿ ವರ್ಲ್ಡ್ ಆಫ್ ಅಪು”, ದೇವಿ, “ಕಾಶ್ಮೀರ್ ಕಿ ಕಲಿ”, “ಆರಾಧನಾ”, “ಅಮರ್ ಪ್ರೇಮ್” ಮತ್ತು “ಚುಪ್ಕೆ ಚುಪ್ಕೆ” ಯಲ್ಲಿಯ ಸಿನಿಮಾ ಪಾತ್ರಗಳಿಗೆ ಹೆಸರುವಾಸಿಯಾಗಿದ್ದರು ಶರ್ಮಿಳಾ ಟ್ಯಾಗೋರ್. ಈ ವರ್ಷದ ಆರಂಭದಲ್ಲಿ, ಮನೋಜ್ ಬಾಜ್‌ಪೇಯಿ ಜತೆ “ಗುಲ್‌ಮೊಹರ್”ಸಿನಿಮಾದಲ್ಲಿ ಕಾಣಿಸಿಕೊಂಡಿದ್ದರು.
ಬಾಲಿವುಡ್ ನಟ ಸೈಫ್ ಅಲಿ ಖಾನ್ ಅವರ ತಾಯಿ ಶರ್ಮಿಳಾ ಠಾಗೋರ್ (Sharmila Tagore) ಮತ್ತು ತಂದೆ ಮನ್ಸೂರ್ ಅಲಿ ಖಾನ್ ಪತೌಡಿ ಪ್ರೀತಿಸಿ ಮದುವೆಯಾದವರು. ಬೇರೆ ಬೇರೆ ಧರ್ಮದವರಾಗಿ ವೈವಾಹಿಕ ಜೀವನಕ್ಕೆ ಕಾಲಿಟ್ಟ ಅವರಿಗೆ ಮದುವೆ ಸಮಯದಲ್ಲಿ ಸಾಕಷ್ಟು ಬೆದರಿಕೆಗಳೂ ಬಂದಿತ್ತು ಎಂದು ಹಿಂದೆ ಹೇಳಿಕೊಂಡಿದ್ದರು. ಶರ್ಮಿಳಾ ಮತ್ತು ಮನ್ಸೂರ್ ಅವರಿಗೆ ಮೂರು ಮಕ್ಕಳಿದ್ದಾರೆ. ಸೈಫ್ ಅಲಿ ಖಾನ್ ಮತ್ತು ಅವರ ಇಬ್ಬರು ಸಹೋದರಿಯರು ಮುಂಬೈನಲ್ಲೇ ವಾಸವಿದ್ದಾರೆ. 2011ರಲ್ಲಿ ಮನ್ಸೂರ್ ನಿಧನರಾಗಿದ್ದಾರೆ. ಶರ್ಮಿಳಾ ಅವರು ದೆಹಲಿಯ ಹೊರವಲಯದಲ್ಲಿರುವ ಮನ್ಸೂರ್ ಅವರ ಪೂರ್ವಿಕರ ಮನೆ ʼಪಟೌಡಿ ಹೌಸ್ʼನಲ್ಲಿ ವಾಸವಿದ್ದಾರೆ.