Site icon Vistara News

ಟ್ರೈನ್‌ ಜರ್ನಿ ಮೂಲಕ ಸಖತ್‌ ಪ್ರಮೋಷನ್‌ ಮಾಡುತ್ತಿರುವ ಶೀತಲ್‌ ಶೆಟ್ಟಿ ಟೀಂ

ವಿಂಡೋ ಸೀಟ್‌

ಬೆಂಗಳೂರು : ವಿಂಡೋ ಸೀಟ್‌ (Window Seat) ತಂಡ ಸ್ವಲ್ಪ ವಾರದ ಹಿಂದೆ ಟ್ರೈಲರ್‌ ಬಿಡುಗಡೆ ಮಾಡಿ ಸಾಕಷ್ಟು ಸುದ್ದಿಯಾಗಿತ್ತು. ಇದೀಗ ಚಿತ್ರತಂಡದ ಪ್ರಮೋಷನ್‌ ಶುರುವಾಗಿದೆ. ಹೌದು ಬಸವ ಎಕ್ಸ್‌ಪ್ರೆಸ್‌ ಹತ್ತಿ ಮೈಸೂರಿಗೆ ವಿಂಡೋ ಸೀಟ್‌ ಚಿತ್ರತಂಡ ಹೊರಟಿದೆ.

ಈಗಾಗಲೇ ಚಿತ್ರ ರೈಲಿನ ಕುರಿತಾದ ಪೋಸ್ಟನ್ನು ಹಂಚಿಕೊಂಡಿತ್ತು. ರೈಲಿನ ವಿಂಡೋ ಸೀಟ್‌ ಪಕ್ಕ ಕುಳಿತ ನಾಯಕನ ಪೋಸ್ಟ್‌ ಅದಾಗಿತ್ತು. ಇದೀಗ ರಿಲೀಸ್‌ ಡೇಟ್‌ ಹತ್ತಿರ ಬರುತ್ತಿದ್ದಂತೆ ರೈಲಿನಿಂದಲೇ ಪ್ರಮೋಷನ್‌ ಶುರು ಮಾಡಿಕೊಂಡಿದೆ ವಿಂಡೋ ಸೀಟ್‌ ತಂಡ. ಶೀತಲ್ ಶೆಟ್ಟಿ ನಿರ್ದೇಶನದ ಸಿನಿಮಾದಲ್ಲಿ ನಿರೂಪ್ ಭಂಡಾರಿ, ಅಮೃತ ಮುಖ್ಯಭೂಮಿಕೆಯಲ್ಲಿ ನಟಿಸುತ್ತಿದ್ದಾರೆ. ಟ್ರೈನ್‌ನಲ್ಲಿ ಟೈಮ್‌ ಪಾಸ್‌ ಮಾಡುತ್ತ ಮೈಸೂರಿಗೆ ಟೀಮ್‌ ಹೊರಟಿದೆ.

ಇದನ್ನೂ ಓದಿ | Window Seat Trailer: ಭೂಮಿನೂ ರೌಂಡು, ಕಾಲಾನೂ ರೌಂಡು, ಎಲ್ಲೇ ಸುತ್ತಿದ್ರೂ ಇನ್ನೆಲ್ಲಿಗೆ ಬರ್ಬೇಕು?!

ಚಿತ್ರೀಕರಣ ವೇಳೆ ಮಾಡಿದ ತಮಾಷೆ, ತುಂಟಾಟಗಳನ್ನು ನೆನೆಯುತ್ತ ಜರ್ನಿಯಲ್ಲಿ ನಿರತವಾಗಿದೆ ತಂಡ. ಟ್ರೈಲರ್‌ ಲಾಂಚ್‌ ನಂತರ ಚಿತ್ರದ ಪ್ರಮೋಷನಲ್‌ ಕಾರ್ಯದಲ್ಲಿ ಚಿತ್ರತಂಡ ಬ್ಯುಸಿಯಾಗಿದ್ದು, ನೀವು ಕೂಡ ಟ್ರೈನ್‌ನಲ್ಲಿ ಟ್ರಾವೆಲ್ ಮಾಡುತ್ತಿದ್ದರೆ ಸೆಲ್ಫಿ ತಗೆದು ನಮ್ಮನ್ನು ಟ್ಯಾಗ್ ಮಾಡಿ ಶೇರ್ ಮಾಡಿ ಎಂದು ಚಿತ್ರತಂಡ ಪೋಸ್ಟ್‌ ಶೇರ್‌ ಮಾಡಿ ಬರೆದುಕೊಂಡಿದೆ.

ಮೈಸೂರಿನ ದೇವಿ ಚಾಮುಂಡೇಶ್ವರಿ ಆಶೀರ್ವಾದ ಪಡೆಯಲು ಚಿತ್ರತಂಡ ಹೊರಟಿದ್ದು, ಶುಕ್ರವಾರ ಬೆಳಗ್ಗೆ 6:00 ಗಂಟೆಗೆ ಚಾಮುಂಡಿ ಬೆಟ್ಟ ಹತ್ತಲು ಪ್ಲಾನ್ ಮಾಡಿಕೊಂಡಿದೆ. ಜುಲೈ 1ಕ್ಕೆ ರಾಜ್ಯಾದ್ಯಂತ ವಿಂಡೋ ಸೀಟ್ ಸಿನಿಮಾ ತೆರೆಗೆ ಅಪ್ಪಳಿಸಲಿದೆ. ಅದೇ ದಿನದಂದು ಶಿವಣ್ಣ ನಟನೆಯ ಬೈರಾಗಿ ಕೂಡ ರಿಲೀಸ್ ಆಗಲಿದೆ.

ಇದನ್ನೂ ಓದಿ | Vikrant Rona | ನಿರ್ಮಾಪಕ ಜಾಕ್ ಮಂಜುಗೆ ಅನಾರೋಗ್ಯ: ಟ್ವೀಟ್‌ನಲ್ಲಿ ಸುದೀಪ್‌ ಹೇಳಿದ್ದೇನು?

Exit mobile version