Site icon Vistara News

ಗರ್ಭಿಣಿಯಾಗಿದ್ದರಾ ನಟಿ ತುನಿಶಾ ಶರ್ಮಾ?-ಆತ್ಮಹತ್ಯೆ ಕೇಸ್​​ನಲ್ಲಿ ಸಹನಟ ಶಿಜಾನ್​ ಖಾನ್​ ಅರೆಸ್ಟ್​

Sheezan Khan Arrested In Tunisha Sharma Death Case

ಮುಂಬಯಿ: ಕಿರುತೆರೆ ನಟಿ ತುನಿಶಾ ಶರ್ಮಾ ಆತ್ಮಹತ್ಯೆ ಕೇಸ್​​ಗೆ ಸಂಬಂಧಪಟ್ಟಂತೆ ಅವರ ಸಹನಟ ಶಿಜಾನ್ ಮೊಹಮ್ಮದ್ ಖಾನ್ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ. ‘ಅಲಿ ಬಾಬಾ ದಾಸ್ತಾನ್ ಇ ಕಾಬೂಲ್’ ಟಿವಿ ಸೀರಿಸ್​​​ನಲ್ಲಿ ನಟಿಸುತ್ತಿದ್ದ 20 ವರ್ಷದ ತುನಿಶಾ ಶರ್ಮಾ ಡಿಸೆಂಬರ್​ 20ರಂದು ಮಹಾರಾಷ್ಟ್ರದ ಪಾಲ್ಘರ್ ಜಿಲ್ಲೆಯ ವಸಾಯಿಯಲ್ಲಿ, ಟಿವಿ ಸೀರಿಯಲ್​ ಸೆಟ್​​ನಲ್ಲಿಯೇ ಡಿಸೆಂಬರ್​ 24ರಂದು ಆತ್ಮಹತ್ಯೆ ಮಾಡಿಕೊಂಡಿದ್ದರು. ಧಾರಾವಾಹಿ ಶೂಟಿಂಗ್​​ನ ಬ್ರೇಕ್​​ನಲ್ಲಿ ಮೇಕಪ್​​ ರೂಮ್​​ನಲ್ಲಿ ನೇಣುಬಿಗಿದುಕೊಂಡಿದ್ದರು.

ತುನಿಶಾ ಶರ್ಮಾ ಸಾವಿನ ಬೆನ್ನಲ್ಲೇ ಅವರ ತಾಯಿ ಶಿಜಾನ್ ಮೊಹಮ್ಮದ್ ಖಾನ್ ವಿರುದ್ಧ ಗಂಭೀರ ಆರೋಪ ಮಾಡಿದ್ದರು. ಮಗಳ ಸಾವಿಗೆ ಆತನೇ ಕಾರಣ ಎಂದು ಪೊಲೀಸರಿಗೆ ದೂರು ನೀಡಿದ್ದರು. ತುನಿಶಾ ಮತ್ತು ಶೀಜಾನ್​ ತುಂಬ ಆಪ್ತರಾಗಿದ್ದರು, ಅವರ ಮಧ್ಯೆ ಸಂಬಂಧವಿತ್ತು ಎಂಬ ಮಾತುಗಳೂ ಕೇಳಿಬರುತ್ತಿದ್ದು, ಪೊಲೀಸರು ತನಿಖೆ ಪ್ರಾರಂಭಿಸಿದ್ದಾರೆ. ಶೀಘ್ರದಲ್ಲೇ ಆತನನ್ನು ಕೋರ್ಟ್​ಗೆ ಹಾಜರು ಪಡಿಸಲಿದ್ದಾರೆ.

ತುನಿಶಾ ಗರ್ಭಿಣಿಯಾಗಿದ್ದಳಾ?
ಈ ಮಧ್ಯೆ ತುನಿಶಾ ಗರ್ಭಿಣಿಯಾಗಿದ್ದಾಳಾ ಎಂಬ ಬಗ್ಗೆಯೂ ಚರ್ಚೆಯಾಗುತ್ತಿದೆ. ಹೀಗೊಂದು ಸುದ್ದಿ ಹರಡುತ್ತಿದೆ. ಶೀಜಾನ್ ಮೊಹಮ್ಮದ್​​ನೊಂದಿಗೆ ಆಕೆಗೆ ಸಂಬಂಧವಿತ್ತು. ಅವಳು ಗರ್ಭಿಣಿಯೂ ಆಗಿದ್ದಳು. ಆದರೆ ಶೀಜಾನ್​ ಮದುವೆಗೆ ಒಪ್ಪಿರಲಿಲ್ಲ ಎಂಬ ವಿಷಯಗಳು ಸೋಷಿಯಲ್ ಮೀಡಿಯಾದಲ್ಲಿ ಕೂಡ ಚರ್ಚೆಯಾಗುತ್ತಿವೆ. ಈ ಆಯಾಮದಲ್ಲೂ ಪೊಲೀಸರು ತನಿಖೆ ಶುರು ಮಾಡಿದ್ದಾರೆ. ಈ ಬಗ್ಗೆ ಪೊಲೀಸ್ ಅಧಿಕಾರಿ ಬಳಿ ಪ್ರಶ್ನೆ ಮಾಡಿದಾಗ ‘ತುನಿಶಾ ಪೋಸ್ಟ್​ಮಾರ್ಟಮ್​​ ವರದಿ ಬಂದಾಗಲೇ ಸ್ಪಷ್ಟವಾಗುತ್ತದೆ’ ಎಂದಿದ್ದಾರೆ.

ಇದನ್ನೂ ಒದಿ: Tunisha Sharma | ಸೆಟ್‌ನಲ್ಲಿಯೇ ಆತ್ಮಹತ್ಯೆ ಮಾಡಿಕೊಂಡ ನಟಿ ತುನಿಶಾ ಶರ್ಮಾ

Exit mobile version