ಮುಂಬೈ: ನಟಿ ಶೆರ್ಲಿನ್ ಚೋಪ್ರಾ (Sherlyn Chopra) ಇತ್ತೀಚೆಗೆ ಹೆಚ್ಚೇ ಸುದ್ದಿಯಲ್ಲಿರುವ ನಟಿ. ಬೋಲ್ಡ್ ಡ್ರೆಸ್ಸಿಂಗ್ ಮತ್ತು ಅಷ್ಟೇ ಬೋಲ್ಡ್ ಆದ ನಟನೆಯ ಮೂಲಕ ನಟಿ ತಮ್ಮದೇ ಆದ ಅಭಿಮಾನಿ ಬಳಗವನ್ನು ಹೊಂದಿದ್ದಾರೆ. ಶೆರ್ಲಿನ್ ಅವರು ನಟಿಸಿರುವ ಪೌರಷ್ಪುರ ವೆಬ್ ಸೀರೀಸ್ ಸದ್ಯದಲ್ಲೇ ಬಿಡುಗಡೆಗೊಳ್ಳಲಿದ್ದು, ನಟಿ ಸದ್ಯ ಅದರ ಪ್ರೊಮೋಷನ್ ಕೆಲಸದಲ್ಲಿ ಬಿಜಿ ಇದ್ದಾರೆ. ಅದರ ಭಾಗವಾಗಿಯೇ ನಟಿ ಇತ್ತೀಚೆಗೆ ಸಂದರ್ಶನವೊಂದರಲ್ಲಿ ಭಾಗವಹಿಸಿದ್ದು, ನಿರ್ದೇಶಕರು ತಮ್ಮೊಂದಿಗೆ ಅಸಭ್ಯವಾಗಿ ನಡೆದುಕೊಂಡಿದ್ದರ ಬಗ್ಗೆ ಮಾತನಾಡಿದ್ದಾರೆ.
“ಯಾವಾಗಲೂ ಪತ್ರಕರ್ತರು ನನಗೆ ಪ್ರಶ್ನೆ ಮಾಡುತ್ತಿರುತ್ತಾರೆ. ನೀವೇನಾದರೂ ಬ್ರೆಸ್ಟ್ ಸರ್ಜರಿ ಮಾಡಿಸಿಕೊಂಡಿದ್ದೀರಾ ಎಂದು ಕೇಳುತ್ತಿರುತ್ತಾರೆ. ಹಾಗೆಯೇ ನಿರ್ದೇಶಕರೂ ನನಗೆ ಪ್ರಶ್ನಿಸುತ್ತಾರೆ. ಆದರೆ ಇದರಲ್ಲಿ ಮುಚ್ಚಿಡುವಂತದ್ದು ಏನೂ ಇಲ್ಲ. ನಾನು ಬ್ರೆಸ್ಟ್ ಸರ್ಜರಿ ಮಾಡಿಸಿಕೊಂಡಿದ್ದೇನೆ. ನನಗೆ ನನ್ನ ಫ್ಲಾಟ್ ಚೆಸ್ಟ್‌ನ ಬಗ್ಗೆ ಬೇಜಾರು ಇತ್ತಾದ್ದರಿಂದ ನಾನು ಸರ್ಜರಿ ಮಾಡಿಸಿಕೊಂಡಿದ್ದೇನೆ” ಎಂದು ಶೆರ್ಲಿನ್ ತಿಳಿಸಿದ್ದಾರೆ.
ಇದನ್ನೂ ಓದಿ: Viral News : ರಿಯಾಲಿಟಿ ಶೋನಲ್ಲಿ ಮಗುವಿಗೆ ಅಪ್ಪ ಅಮ್ಮನ ಖಾಸಗಿ ವಿಚಾರದ ಪ್ರಶ್ನೆ! ಸೋನಿ ಪಿಕ್ಚರ್ಸ್‌ಗೆ ನೋಟಿಸ್
ಹಾಗೆಯೇ ಮಾತು ಮುಂದುವರಿಸಿದ ಅವರು, “ಕೆಲವು ನಿರ್ದೇಶಕರು ನನ್ನ ಬ್ರೆಸ್ಟ್‌ನ ಕಪ್ ಸೈಜ್ ಕೇಳುತ್ತಾರೆ. ಜನರೇನು ನಟಿಯ ಕಪ್ ಸೈಜ್ ತಿಳಿದುಕೊಂಡೇ ಸಿನಿಮಾ ನೋಡುವುದಕ್ಕೆ ಬರುತ್ತಾರೆಯೇ? ಆದರೆ ನಿರ್ದೇಶಕರು ಕಪ್ ಸೈಜ್ ಕೇಳಿ ಸುಮ್ಮನಾಗುವುದಿಲ್ಲ. ನಾವು ಅದನ್ನು ಮುಟ್ಟಬಹುದೇ ಎಂದೂ ಕೇಳುತ್ತಾರೆ. ʼನಿಮಗೆ ಮದುವೆ ಆಗಿದೆ, ಹೆಂಡತಿ ಇದ್ದಾಳೆ ಎನ್ನುವುದು ನೆನಪಿರಲಿʼ ಎಂದು ಹೇಳಿದರೆ, ʼಇದ್ದರೇನಂತೆ?ʼ ಎಂದು ನಮಗೇ ಹೇಳುತ್ತಾರೆ” ಎಂದೂ ನಟಿ ಹೇಳಿದ್ದಾರೆ.
ಇತ್ತೀಚೆಗೆ ನಟಿ ತಾನು ಹಣಕ್ಕಾಗಿ ಹಲವು ಬಾರಿ ಹಾಸಿಗೆ ಹಂಚಿಕೊಂಡಿದ್ದೆ ಎನ್ನುವ ಹೇಳಿಕೆ ಕೊಟ್ಟಿದ್ದರು. ಅದರ ಬಗ್ಗೆ ಸ್ಪಷ್ಟನೆ ನೀಡಿದ ಶೆರ್ಲಿನ್, “ನನ್ನ ಹೇಳಿಕೆಯನ್ನು ತಪ್ಪಾಗಿ ಗ್ರಹಿಸಲಾಗಿದೆ. ನಾನು ಒಬ್ಬ ರಾಜಕಾರಣಿಯ ಮಗನ ಜತೆ ಪ್ರೀತಿಯಲ್ಲಿದ್ದೆ. ಆತ ನನಗೆ ದುಬಾರಿ ಉಡುಗೊರೆಗಳನ್ನು ಕೊಡುತ್ತಿದ್ದ. ಬಹಳಷ್ಟು ಸಮಯ ಆತನ ಜತೆ ಹಾಸಿಗೆ ಹಂಚಿಕೊಂಡ ನಂತರ ಅವನು ಕೇವಲ ದೈಹಿಕ ಸುಖಕ್ಕಾಗಿ ನನ್ನೊಂದಿಗೆ ಸಂಬಂಧದಲ್ಲಿದ್ದಾನೆ ಎನ್ನುವುದು ತಿಳಿದುಬಂದಿತು. ನಾನು ಆ ವಿಚಾರ ಹೇಳಿದ್ದನ್ನು ತಪ್ಪಾಗಿ ಗ್ರಹಿಸಲಾಗಿದೆ” ಎಂದು ಹೇಳಿದ್ದಾರೆ.