Site icon Vistara News

Shilpa Shetty | ಶೂಟಿಂಗ್‌ ವೇಳೆ ಕಾಲು ಮುರಿದುಕೊಂಡ ಶಿಲ್ಪಾ ಶೆಟ್ಟಿ

Shilpa Shetty

ಬೆಂಗಳೂರು: ನಟಿ ಶಿಲ್ಪಾ ಶೆಟ್ಟಿ (Shilpa Shetty) ತಮ್ಮ ಕೆಲಸಗಳಲ್ಲಿ ಬ್ಯುಸಿಯಾಗಿದ್ದಾರೆ. ಸಿನಿಮಾ ಶೂಟಿಂಗ್‌ನಲ್ಲಿಯೂ ತೊಡಗಿಸಿಕೊಂಡಿದ್ದಾರೆ. ಇದೀಗ ಶೂಟಿಂಗ್‌ ವೇಳೆ ಅವರ ಕಾಲಿಗೆ ಪೆಟ್ಟಾಗಿದೆ. ಇದರ ಪೋಟೋವನ್ನು ತಮ್ಮ ಸೋಷಿಯಲ್‌ ಮೀಡಿಯಾದಲ್ಲಿ ಅವರು ಹಂಚಿಕೊಂಡಿದ್ದಾರೆ.

ಇತ್ತೀಚೆಗೆ ನಿರ್ದೇಶಕ ರೋಹಿತ್ ನಿರ್ದೇಶನದ ʻಇಂಡಿಯನ್‌ ಪೊಲೀಸ್‌ ಫೋರ್ಸ್‌ʼ ವೆಬ್‌ ಸೀರೀಸ್‌ನಲ್ಲಿ ಶಿಲ್ಪಾ ಶೆಟ್ಟಿ ನಟಿಸುತ್ತಿದ್ದಾರೆ. ವೆಬ್ ಸೀರೀಸ್‌ನ ಫೈಟ್ ಸೀಕ್ವೆನ್ಸ್‌ನ ವೀಡಿಯೊವನ್ನು ಅವರು ಪೋಸ್ಟ್ ಮಾಡಿದ್ದಾರೆ. ಅಮೇಜಾನ್‌ ಪ್ರೈಮ್‌ನಲ್ಲಿ ಈ ವೆಬ್‌ ಸೀರಿಸ್‌ ಪ್ರಸಾರಗೊಳ್ಳಲಿದೆ. ಈ ಸರಣಿಯ ಶೂಟಿಂಗ್‌ ವೇಳೆ ಶಿಲ್ಪಾ ಶೆಟ್ಟಿ ಕಾಲಿಗೆ ಪೆಟ್ಟಾಗಿದೆ.

ಇದನ್ನೂ ಓದಿ | 47ನೇ Birth day ಖುಷಿಗೆ Vanity Van ಖರೀದಿಸಿದ ಶಿಲ್ಪಾ ಶೆಟ್ಟಿ, ಏನೇನಿದೆ ಒಳಗೆ?

ʻನಿರ್ದೇಶಕರು ಕ್ಯಾಮೆರಾ, ಆಕ್ಷನ್‌ ಎಂದರು. ನನ್ನ ಕಾಲು ಮುರಿಯಿತು. ಆರು ವಾರ ವಿಶ್ರಾಂತಿ ಪಡೆಯುತ್ತಿದ್ದೇನೆ. ನಂತರ ಶೂಟಿಂಗ್‌ಗೆ ಮರಳುತ್ತೇನೆʼ ಎಂದು ಬರೆದುಕೊಂಡಿದ್ದಾರೆ ಶಿಲ್ಪಾ .ಅಭಿಮಾನಿಗಳು ಕೂಡ ಶಿಲ್ಪಾ ಶೆಟ್ಟಿಗೆ ‘ಶೀಘ್ರ ಗುಣಮುಖರಾಗಲಿ’ ಎಂದು ಕಮೆಂಟ್‌ ಮೂಲಕ ಹಾರೈಸಿದ್ದಾರೆ.

ಇದನ್ನೂ ಓದಿ|Happy birthday ಶಿಲ್ಪಾ ಶೆಟ್ಟಿ

Exit mobile version