ಬೆಂಗಳೂರು: ಮುಂಬೈನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಸೋನಂ ಕಪೂರ್ (Sonam Kapoor), ಶಿಲ್ಪಾ ಶೆಟ್ಟಿ (Shilpa Shetty), ಕರಣ್ ಜೋಹರ್, ಟೈಗರ್ ಶ್ರಾಫ್ ಮತ್ತು ಇತರರು ಕಾಣಿಸಿಕೊಂಡರು. ಸೆಲೆಬ್ರಿಟಿಗಳು ಬಿಳಿ ಬಣ್ಣದ ಉಡುಪಿನಲ್ಲಿ ಹೆಚ್ಚಾಗಿ ಕಾಣಿಸಿಕೊಂಡಿದ್ದಾರೆ. ಅದರಲ್ಲಿಯೂ ಶಿಲ್ಪಾ ಶೆಟ್ಟಿ ಸೀರೆ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ನೆಟ್ಟಿಗರು ಕಮೆಂಟ್ ಮೂಲಕ ಹೊಗಳಿದ್ದಾರೆ.
ಕಂದು-ಬೂದು ಬ್ಲೌಸ್ ಮ್ಯಾಚ್ ಆಗುವಂತೆ ಬಿಳಿ ಸೀರೆ ಧರಿಸಿದ್ದರು. ಅಭಿಮಾನಿಯೊಬ್ಬರು ಶಿಲ್ಪಾ ಶೆಟ್ಟಿ ಬಗ್ಗೆ “ನನ್ನ 20 ವರ್ಷದಲ್ಲಿ ಶಿಲ್ಪಾ ಶೆಟ್ಟಿ ಅವರನ್ನು ನಾನು ಈ ರೀತಿ ಕಾಣಲು ಸಾಧ್ಯವಿಲ್ಲ, ಅಪ್ಸರೆಯಂತೆ ಕಾಣುತ್ತಿದ್ದಾರೆ” ಎಂದು ಅಭಿಮಾನಿಯೊಬ್ಬರು ಬರೆದಿದ್ದಾರೆ. ಇನ್ನೊಬ್ಬರು ʻʻಶಿಲ್ಪಾ ಶೆಟ್ಟಿ ಮಾತ್ರ ಈ ರೀತಿಯ ಸಾದಾ ಬಿಳಿ ಸೀರೆಯಲ್ಲಿ ಗ್ಲ್ಯಾಮರಸ್ ಆಗಿ ಕಾಣಲು ಸಾಧ್ಯ”ಎಂದಿದ್ದಾರೆ.
ಮತ್ತೊಂದೆಡೆ, ಸೋನಂ ಬಿಳಿ ಗೌನ್ ಧರಿಸಿ ಕಸೂತಿ ಮಾಡಿದ ಕಪ್ಪು ಮತ್ತು ಬಿಳಿ ಜಾಕೆಟ್ ಅನ್ನು ಕೇಪ್‌ನಂತೆ ಧರಿಸಿದ್ದರು. ಶಿಲ್ಪಾ ಅವರಂತೆಯೇ ಬಳೆಗಳನ್ನು ಧರಿಸಿದ್ದರು. ಅನೇಕರು ಸೋನಂ ಬಿಳಿ ಗೌನ್ ಗೌನ್ ಕುರಿತು ಶೋಲೆಯ ಠಾಕೂರ್‌ಗೆ ಹೋಲಿಸಿದ್ದಾರೆ. ಡ್ರೆಸ್ ಬಗ್ಗೆ ನಟಿ ಟ್ರೋಲ್ ಕೂಡ ಆಗಿದ್ದಾರೆ. ಇನ್ನೂ ಕೆಲವು ಅಭಿಮಾನಿಗಳು ಅವರನ್ನು ಸಮರ್ಥಿಸಿಕೊಂಡರು. ” ಸೋನಂ ಫ್ಯಾಷನ್ ಯಾವಾಗಲೂ ಅಂತಾರಾಷ್ಟ್ರೀಯ ಮಟ್ಟದಲ್ಲಿದೆ” ಎಂದು ಬರೆದಿದ್ದಾರೆ.
ಇದನ್ನೂ ಓದಿ: Shilpa Shetty | ಶೂಟಿಂಗ್ ವೇಳೆ ಕಾಲು ಮುರಿದುಕೊಂಡ ಶಿಲ್ಪಾ ಶೆಟ್ಟಿ
ಟೈಗರ್ ಶ್ರಾಫ್ ಮತ್ತು ಕರಣ್ ಜೋಹರ್ ಕಪ್ಪು ಸೂಟ್‌ಳಲ್ಲಿ ಕಾಣಿಸಿಕೊಂಡರೆ, ಸೋಫಿ ಚೌದ್ರಿ ಕೂಡ ಬಿಳಿ ಉಡುಪಿನಲ್ಲಿ ಕಾಣಿಸಿಕೊಂಡರು. ಕಾರ್ಯಕ್ರಮದಲ್ಲಿ ಏಕ್ತಾ ಕಪೂರ್ ಮತ್ತು ಅನಿತಾ ಹಸಾನಂದನಿ ಸೇರಿದಂತೆ ಇತರರು ಇದ್ದರು.
ಇದನ್ನೂ ಓದಿ: Bollywood Actress: ಶಿಮ್ಮರ್ ಸೀರೆಗಳಲ್ಲಿ ಮಿಂಚಿದ ಬಾಲಿವುಡ್ ನಟಿಯರು
ಶಿಲ್ಪಾ ಶೆಟ್ಟಿ ಕೊನೆಯದಾಗಿ ನಿಕಮ್ಮ ಚಿತ್ರದಲ್ಲಿ ಅಭಿಮನ್ಯು ದಸ್ಸಾನಿ ಜತೆ ಕಾಣಿಸಿಕೊಂಡಿದ್ದರು. ಅವರ ಮುಂಬರುವ ಪ್ರಾಜೆಕ್ಟ್‌ಗಳಲ್ಲಿ ರೋಹಿತ್ ಶೆಟ್ಟಿ ಜತೆಗಿನ ಇಂಡಿಯನ್ ಪೋಲೀಸ್ ಫೋರ್ಸ್ ವೆಬ್ ಸಿರೀಸ್‌ನಲ್ಲಿ ಪೋಲೀಸ್ ಪಾತ್ರದಲ್ಲಿ ನಟಿಸಲಿದ್ದಾರೆ.