Site icon Vistara News

Shilpa Shetty: ಬೆಂಗಳೂರಿಗೆ ಬಂದ ಶಿಲ್ಪಾ ಶೆಟ್ಟಿ; ಸೆಲ್ಫಿ ಹಂಚಿಕೊಂಡ ಬಾಲಿವುಡ್ ಬೆಡಗಿ

Shilpa Shetty Posted Pic From Her Bangalore Diaries

ಬೆಂಗಳೂರು: ಆ್ಯಕ್ಷನ್‌ ಪ್ರಿನ್ಸ್‌ ಧ್ರುವ ಸರ್ಜಾ (Dhruva Sarja) ಹಾಗೂ ನಿರ್ದೇಶಕ ಪ್ರೇಮ್‌ ಕಾಂಬಿನೇಶನ್‌ ಇರುವ ʻಕೆಡಿ’ ಸಿನಿಮಾದಲ್ಲಿ ಬಾಲಿವುಡ್‌ ನಟಿ ಶಿಲ್ಪಾ ಶೆಟ್ಟಿ ಸತ್ಯವತಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಇದೀಗ ಈ ಸಿನಿಮಾ ಶೂಟಿಂಗ್‌ನಲ್ಲಿ ಭಾಗವಹಿಸಲು ಶಿಲ್ಪಾ ಶೆಟ್ಟಿ (Shilpa Shetty) ಬೆಂಗಳೂರಿಗೆ ಬಂದಿಳಿದಿದ್ದಾರೆ. ಏಪ್ರಿಲ್‌ 4ರಂದು ತಮ್ಮ ಬೆಂಗಳೂರು ಡೈರೀಸ್‌ನಿಂದ ಒಂದು ನೋಟ ಎಂದು ಇನ್‌ಸ್ಟಾದಲ್ಲಿ ಸೆಲ್ಫಿ ಹಂಚಿಕೊಂಡಿದ್ದಾರೆ. ಇದೀಗ ನಟಿ ತಮ್ಮ ಗೂಫಿ ಎಕ್‌ಪ್ರೆಷನ್‌ ನೀಡಿದ್ದು, ಅವರ ಅಭಿಮಾನಿಗಳು ಸಂತಸ ವ್ಯಕ್ತಪಡಿಸಿದ್ದಾರೆ.

ಪ್ಯಾನ್-ಇಂಡಿಯಾ ಸಿನಿಮಾವಾದ ಕೆಡಿ ಸಿನಿಮಾದಲ್ಲಿ ಸತ್ಯವತಿ ಪಾತ್ರದಲ್ಲಿ ಮಿಂಚುತ್ತಿದ್ದಾರೆ ನಟಿ ಶಿಲ್ಪಾ.
ಚಿತ್ರವನ್ನು ನಟಿ ಹಂಚಿಕೊಂಡು ಬೆಂಗಳೂರು ಡೈರೀಸ್‌ʼʼಎಂದು ಇನ್‌ಸ್ಟಾ ಸ್ಟೋರಿಯಲ್ಲಿ ಬರೆದುಕೊಂಡಿದ್ದಾರೆ. ʻʻನಟಿ ಕಪ್ಪು ಟಿ-ಶರ್ಟ್ ಅನ್ನು ಧರಿಸಿದ್ದು, ಅದರ ಮೇಲೆ, “ಮೈ ಏರ್ಪೋರ್ಟ್ ಲುಕ್” ಎಂದು ಬರೆದಿದೆ. ಏಪ್ರಿಲ್‌ 4ರಂದು ಮುಂಜಾನೆ, ಶಿಲ್ಪಾ ಬೆಂಗಳೂರಿನಲ್ಲಿ ತನ್ನ ಮುಂಬರುವ ಚಲನಚಿತ್ರದ ಚಿತ್ರೀಕರಣಕ್ಕಾಗಿ ಬಂದಿದ್ದಾರೆ ಎಂದು ವರದಿಯಾಗಿದೆ.

ಯುಗಾದಿ ಹಬ್ಬದಂದು ಚಿತ್ರತಂಡ, ಶಿಲ್ಪಾ ಶೆಟ್ಟಿ ಫಸ್ಟ್‌ ಲುಕ್‌ ಪೋಸ್ಟರ್‌ ಹಂಚಿಕೊಂಡಿತ್ತು. ಶಿಲ್ಪಾ ಶೆಟ್ಟಿ ಕೂಡಾ ತಮ್ಮ ಪೋಸ್ಟರನ್ನು ಸೋಷಿಯಲ್‌ ಮೀಡಿಯಾದಲ್ಲಿ ಹಂಚಿಕೊಂಡು ಬಹಳ ಎಕ್ಸೈಟ್‌ ಆಗಿದ್ದರು. ರೆಟ್ರೋ ಲುಕ್‌ನಲ್ಲಿ ಕಾರೊಂದರ ಮುಂದೆ ಬ್ಯಾಗ್‌ ಹಿಡಿದು ನಿಂತಿರುವ ಶಿಲ್ಪಾ ಶೆಟ್ಟಿ ಲುಕ್‌ಗೆ ಸಿನಿಪ್ರಿಯರು ಮೆಚ್ಚುಗೆ ವ್ಯಕ್ತಪಡಿಸಿದ್ದರು.

ʻʻಕೆಡಿಯ ಯುದ್ಧಭೂಮಿಯಲ್ಲಿ ಸತ್ಯಾವತಿಯಾಗಿ, ಯುದ್ಧಕ್ಕೆ ಪ್ರವೇಶಿಸುವ ಹೊಸ ಪಾತ್ರವನ್ನು ನಿಮ್ಮೊಂದಿಗೆ ಹಂಚಿಕೊಳ್ಳಲು ನಾನು ರೋಮಾಂಚನಗೊಂಡಿದ್ದೇನೆ!” ಎಂದು ಬರೆದುಕೊಂಡಿದ್ದರು. ಶಿಲ್ಪಾ ಶೆಟ್ಟಿ 17 ವರ್ಷಗಳ ನಂತರ ಇದೀಗ ಕೆಡಿ’ ಸಿನಿಮಾದ ಮೂಲಕ ಕನ್ನಡ ಸಿನಿಮಾರಂಗಕ್ಕೆ ಎಂಟ್ರಿ ಕೊಟ್ಟಿದ್ದಾರೆ. ಪ್ರೀತ್ಸೋದ್ ತಪ್ಪಾ? ಆಟೋ ಶಂಕರ್, ಒಂದಾಗೋಣ ಬಾ ಸಿನಿಮಾಗಳಲ್ಲಿ ಶಿಲ್ಪಾ ಅಭಿನಯಿಸಿದ್ದಾರೆ.

ಇದನ್ನೂ ಓದಿ; Dhruva Sarja: ʻಕೆಡಿʼ ಚಿತ್ರಕ್ಕೆ ಶಿಲ್ಪಾ ಶೆಟ್ಟಿ ಸತ್ಯವತಿಯಾಗಿ ಎಂಟ್ರಿ ಕೊಡಲಿದ್ದಾರಾ?

ಶಿಲ್ಪಾ ಶೆಟ್ಟಿ ಇನ್‌ಸ್ಟಾ ಪೋಸ್ಟ್‌

Shilpa Shetty

ಈ ಚಿತ್ರದಲ್ಲಿ ರವಿಚಂದ್ರನ್ ಮತ್ತು ಸಂಜಯ್ ದತ್ ಸಹ ನಟಿಸಿದ್ದಾರೆ. ಈ ಚಿತ್ರದ ಕಥೆ 1970ರ ದಶಕದಲ್ಲಿ ಸಾಗಲಿದೆ ಎಂದು ಹೇಳಲಾಗುತ್ತಿದೆ. ಟೈಟಲ್‌ ಟೀಸರ್‌ನಲ್ಲಿ ಧ್ರುವ ಸರ್ಜಾ ಮಾಸ್‌ ಆಗಿ ಕಾಣಿಸಿಕೊಂಡಿದ್ದಾರೆ. ‘ಕೆವಿಎನ್​ ಪ್ರೊಡಕ್ಷನ್ಸ್’ ಸಿನಿಮಾವನ್ನು ನಿರ್ಮಾಣ ಮಾಡುತ್ತಿದೆ. ಈ ಚಿತ್ರ ಕನ್ನಡ ಮಾತ್ರವಲ್ಲದೆ ಹಿಂದಿ, ತಮಿಳು, ತೆಲುಗು ಹಾಗೂ ಮಲಯಾಳಂನಲ್ಲಿ ಮೂಡಿ ಬರುತ್ತಿದೆ.

Exit mobile version