ಬೆಂಗಳೂರು: ಅಶ್ಲೀಲ ವಿಡಿಯೊ ಪ್ರಕರಣಕ್ಕೆ ಸಂಬಂಧಿಸಿದಂತೆ ಜೈಲಿನಲ್ಲಿ ಎರಡು ತಿಂಗಳು ಕಳೆದಿದ್ದ ರಾಜ್ ಕುಂದ್ರಾ (Raj kundra) ಈಗ ಜೈಲಿನಲ್ಲಿದ್ದ ಸಮಯವನ್ನು ಆಧರಿಸಿದ ವಿಡಂಬನಾತ್ಮಕ ಚಿತ್ರದ ಮೂಲಕ (Shilpa Shetty) ನಟನೆಗೆ ಪದಾರ್ಪಣೆ ಮಾಡುತ್ತಿದ್ದಾರೆ. ಸಂದರ್ಶನದಲ್ಲಿ, ರಾಜ್ ಅವರು ಹಲವು ವಿಚಾರಗಳನ್ನು ಹಂಚಿಕೊಂಡಿದ್ದಾರೆ. ಜೈಲಿಗೆ ಸೇರಿದ ಸಂದರ್ಭದಲ್ಲಿ ತಾನು ತುಂಬಾ ನಿರಾಸೆಗೊಂಡಿದ್ದೆ ಎಂದು ಬಹಿರಂಗಪಡಿಸಿದ್ದಾರೆ. ಅಷ್ಟೇ ಅಲ್ಲದೇ ಪತ್ನಿ ಶಿಲ್ಪಾ ಶೆಟ್ಟಿ ಅವರು ಭಾರತವನ್ನು ತೊರೆದು ವಿದೇಶದಲ್ಲಿ ನೆಲೆಸಬೇಕು ಎಂಬ ಸಲಹೆಯನ್ನೂ ರಾಜ್ ಅವರಿಗೆ ನೀಡಿದ್ದರಂತೆ.
ಅಶ್ಲೀಲ ವಿಡಿಯೊ ನಿರ್ಮಾಣ ಪ್ರಕರಣದಲ್ಲಿ ಜೈಲು ಸೇರಿದ್ದ ರಾಜ್ ಕುಂದ್ರಾ, ಜೈಲಿನಲ್ಲಿ ತಾವು ಎದುರಿಸಿದ ಸಮಸ್ಯೆಗಳನ್ನೇ ಆಧರಿಸಿ ‘ಯುಟಿ 69’ ಹೆಸರಿನ ಸಿನಿಮಾ ನಿರ್ಮಾಣ ಮಾಡಿದ್ದಾರೆ. ಸಿನಿಮಾದ ಟ್ರೈಲರ್ ಅ. 18ರಂದು ಬಿಡುಗಡೆ ಆಗಿದ್ದು, ಟ್ರೈಲರ್ ಬಿಡುಗಡೆ ಕಾರ್ಯಕ್ರಮದಲ್ಲಿ ಮುಖವಾಡ ತೆರೆದು ಮಾಧ್ಯಮಗಳಿಗೆ ಮುಖ ತೋರಿಸಿದ್ದಾರೆ ರಾಜ್ ಕುಂದ್ರಾ. ರಾಜ್ ಕುಂದ್ರಾ ತಮ್ಮದೇ ಜೀವನದಲ್ಲಿ ನಡೆದ ಘಟನೆಯನ್ನೇ ಆಧರಿಸಿದ ಸಿನಿಮಾ ಇದು. ಇದೀಗ ಮಾಧ್ಯವವೊಂದರ ಸಂದರ್ಶನದಲ್ಲಿ ಈ ಬಗ್ಗೆ ರಾಜ್ ಹೇಳಿಕೊಂಡಿದ್ದಾರೆ.
ಸಲಹೆ ನೀಡಿದ್ದ ಶಿಲ್ಪಾ
ರಾಜ್ ಕುಂದ್ರಾ ಮಾತನಾಡಿ ʻʻಇಷ್ಟೆಲ್ಲ ಆದ ಬಳಿಕ ನನ್ನ ಪಕ್ಕ ನಿಂತಿದ್ದು ನನ್ನ ಪತ್ನಿ. ನೀವು ವಿದೇಶದಲ್ಲಿ ಇರಲು ಬಯಸುತ್ತೀರಾ ರಾಜ್? ಲಂಡನ್‌ನಲ್ಲಿಯೇ ನೀವು ಹುಟ್ಟಿ ಬೆಳೆದಿದ್ದೀರಿ, ನಾನು ಇಲ್ಲಿರಲು ಬಯಸಿದ್ದರಿಂದ ನೀವು ಇಲ್ಲಿಗೆ ಬಂದಿರಿ. ಆದರೆ ನೀವು ಬಯಸಿದರೆ, ನಾನು ಕೆಲಸ ಮಾಡಬಲ್ಲೆ ಮತ್ತು ನಾವು ಇಲ್ಲಿ ಬಿಟ್ಟು, ವಿದೇಶಕ್ಕೆ ಹೋಗೋಣʼʼಎಂದು ಸಲಹೆ ನೀಡಿದ್ದಳು. ಆಗ ನಾನು ಅಂದೆ ಅವಳಿಗೆ ʻʻನಾನು ಭಾರತವನ್ನು ಪ್ರೀತಿಸುತ್ತೇನೆ ಮತ್ತು ಇಲ್ಲಿಂದ ಹೋಗುವುದಿಲ್ಲ ಎಂದು. ಜನರು ದೊಡ್ಡ ಅಪರಾಧಗಳನ್ನು ಮಾಡುತ್ತಾರೆ, ಸಾವಿರಾರು ಕೋಟಿಗಳನ್ನು ತೆಗೆದುಕೊಂಡು ದೇಶವನ್ನು ತೊರೆಯುತ್ತಾರೆ, ಆದರೆ ನಾನು ಏನನ್ನೂ ಮಾಡಿಲ್ಲ. ಹಾಗಾಗಿ ನಾನು ದೇಶವನ್ನು ತೊರೆಯುವುದಿಲ್ಲ ಎಂದೆʼʼ ಎಂದು ಹೇಳಿದರು.
ಇದನ್ನೂ ಓದಿ: Raj Kundra: ಡಿವೋರ್ಸ್ ಅಲ್ಲ; ಆದರೂ ಬೇಸರದಲ್ಲಿಯೇ ಬೀಳ್ಕೊಟ್ಟ ರಾಜ್ ಕುಂದ್ರಾ!
ಕಂಬಿಗಳ ಹಿಂದಿದೆ ನೋವು
ರಾಜ್ ಅವರು ಜೈಲು ಕಂಬಿಗಳ ಹಿಂದೆ ಇದ್ದ ಸಮಯದಲ್ಲಿ ಎಷ್ಟು ನೋವನ್ನು ಅನುಭವಿಸಿದರು ಎಂಬುದನ್ನೂ ತೆರೆದಿಟ್ಟರು. “ನಾನು ಸೋತುಹೋಗಿದ್ದೆ. ನನ್ನ ವ್ಯಕ್ತಿತ್ವಕ್ಕೆ ತುಂಬಾ ಅವಮಾನವಾಗಿತ್ತು. ನನ್ನಿಂದಾಗಿ ಮಾಧ್ಯಮಗಳು ನನ್ನ ಹೆಂಡತಿ, ಮಕ್ಕಳು ಮತ್ತು ತಂದೆ-ತಾಯಿಯ ಹಿಂದೆ ಹೋಗಿದ್ದವು. ಅದು ನೋವಿನಿಂದ ಕೂಡಿತ್ತು. ಹೊರಗೆ ಏನು ನಡೆಯುತ್ತಿದೆ ಎಂದು ನನಗೆ ತಿಳಿದಿತ್ತುʼʼಎಂದರು.
ನವೆಂಬರ್ 3ಕ್ಕೆ UT69 ತೆರೆಗೆ
ನವೆಂಬರ್ 3ರಂದು ಬಿಡುಗಡೆಯಾಗಲಿರುವ ರಾಜ್ ಕುಂದ್ರಾ ಅವರ ಮುಂಬರುವ ಚಿತ್ರ UT69ನಲ್ಲಿ ರಾಜ್ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ.
ಸಮಾರಂಭದಲ್ಲಿ ಮಾತನಾಡಿದ ರಾಜ್, “ಚಿತ್ರ ನನ್ನ 63 ದಿನಗಳ ಜೈಲಿನಲ್ಲಿರುವ ಜರ್ನಿಯಾಗಿದೆ. ನಾನು ಯಾವುದೇ ತಪ್ಪು ಮಾಡಿಲ್ಲ ಎಂದು ನನಗೆ ತಿಳಿದಿದ್ದರಿಂದ ನಾನು ಸಿಂಹದಂತೆ ಹೊರಬಂದೆ. ಯುಟಿ-69 ತನ್ನ ಜೀವನದಲ್ಲಿ ನಡೆದ ನೈಜ ಘಟನೆಗಳನ್ನು ಆಧರಿಸಿದ ವಿಡಂಬನಾತ್ಮಕ ಹಾಸ್ಯವಾಗಿದೆʼʼ ಎಂದು ರಾಜ್ ಪ್ರಸ್ತಾಪಿಸಿದ್ದರು.
ರಾಜ್ ಅವರು ಜೈಲಿನಲ್ಲಿದ್ದಾಗ ಕೆಲವ ಕೈದಿಗಳೊಂದಿಗೆ ಸ್ನೇಹ ಬೆಳೆಸಿದ್ದರು ಎಂಬುದನ್ನು ಸಹ ಉಲ್ಲೇಖಿಸಿದ್ದರು. “ನನ್ನ ಬಲಕ್ಕೆ ಮಲಗಿದ್ದ ವ್ಯಕ್ತಿ 88 ಕೊಲೆಗಳ ಆರೋಪ ಹೊತ್ತಿದ್ದ, ಮತ್ತು ನನ್ನ ಎಡಕ್ಕೆ ಮಲಗಿದ್ದವನು ಮಕ್ಕಳ ಅತ್ಯಾಚಾರದ ಆರೋಪಿಯಾಗಿದ್ದ. ಜೈಲು ಅಧಿಕಾರಿಗಳು ಅಲ್ಲಿ ಕಣ್ಣಿಡುತ್ತಾರೆ, ಅಲ್ಲಿ ಯಾರೊಂದಿಗೂ ಮಾತನಾಡಬೇಡಿ ಎಂತಲೂ ಹೇಳುತ್ತಾರೆ. ನಾನು 63 ದಿನಗಳವರೆಗೆ ಅಲ್ಲಿಯೇ ಇರುತ್ತೇನೆ ಎಂದು ನಾನು ಊಹಿಸಿರಲಿಲ್ಲ” ಎಂದಿದ್ದರು.
ಇದನ್ನೂ ಓದಿ: Raj Kundra: ಶೀಘ್ರದಲ್ಲೇ ಶಿಲ್ಪಾ ಶೆಟ್ಟಿ ಪತಿ ತೆರೆಗೆ; ಬಯೋಪಿಕ್‌ನಲ್ಲಿ ರಾಜ್ ಕುಂದ್ರಾ?
“ನಾನು ಸಭ್ಯರೆಂದು ಭಾವಿಸಿದ ಒಂದೆರಡು ಜನರೊಂದಿಗೆ ನಾನು ಅಲ್ಲಿ ಸ್ನೇಹ ಬೆಳೆಸಿದ್ದೇನೆ. ನೀವು ಯಾರೊಂದಿಗಾದರೂ 60 ದಿನಗಳವರೆಗೆ ಇದ್ದಾಗ, ನೀವು ಸಂಪರ್ಕ ಹೊಂದುತ್ತೀರಿ. ನೀವು ಸಿನಿಮಾ ನೋಡಿದಾಗ , ಆ ಸಂಬಂಧಗಳು ನಿಮಗೆ ಅರ್ಥವಾಗುತ್ತವೆ. ಒಳಗೆ ಕೆಲವು ಸ್ನೇಹಿತರು, ಅವರು ವಿವಿಧ ಪ್ರಕರಣಗಳಲ್ಲಿ ಸಿಲುಕಿಕೊಂಡಿದ್ದಾರೆʼʼಎಂದಿದ್ದರು.