Site icon Vistara News

Shilpa Shetty: ಪೂಜಾ ಕಾರ್ಯಕ್ಕೆ ಕುಟುಂಬ ಸಮೇತರಾಗಿ ಮಂಗಳೂರಿಗೆ ಬಂದ ಶಿಲ್ಪಾ ಶೆಟ್ಟಿ

shilpa shetty visits shibaruru sri kodamanittaya

ಬೆಂಗಳೂರು: ಬಾಲಿವುಡ್‌ ನಟಿ ಶಿಲ್ಪಾ ಶೆಟ್ಟಿ (Shilpa Shetty) ಅವರು ಮಂಗಳೂರಿಗೆ ಆಗಮಿಸಿ ಸುರತ್ಕಲ್‌ ತಾಲೂಕಿನ ದೇಲಂತಬೆಟ್ಟು ಶಿಬರೂರು (Delantha Bettu) ಕೊಡಮಣಿತ್ತಾಯ ಕ್ಷೇತ್ರದಲ್ಲಿ ನಡೆಯುತ್ತಿರುವ ಬ್ರಹ್ಮಕುಂಭಾಭಿಷೇಕ, ಅಷ್ಠಪವಿತ್ರ ನಾಗಮಂಡಲ ಸೇವೆ, ಜಾತ್ರಾ ಮಹೋತ್ಸವದಲ್ಲಿ ಪಾಲ್ಗೊಂಡರು. ಆಗಾಗ ನಟಿ ಕಟೀಲು ದುರ್ಗಾ ಪರಮೇಶ್ವರಿ ದೇಔಸ್ಥಾನಕ್ಕೆ ಭೇಟಿ ಕೊಡುವುದು ಗೊತ್ತೇ ಇದೆ.

ನಟಿ ಶಿಲ್ಪಾ ಶೆಟ್ಟಿ, ಅವರ ಮಕ್ಕಳಾದ ವಿಯಾನ್ ಕುಂದ್ರಾ ಮತ್ತು ಸಮಿಷಾ ಕುಂದ್ರಾ ಮತ್ತು ತಾಯಿ ಸುನಂದಾ ಶೆಟ್ಟಿ ಮತ್ತು ಕುಟುಂಬದವರು ಜತೆಯಲ್ಲಿದ್ದರು. ಮೂಲತಃ ಮಂಗಳೂರಿನವರಾಗಿರುವುದರಿಂದ ನಟಿ ಶಿಲ್ಪಾ ಕುಟುಂಬದ ಕಾರ್ಯಕ್ರಮಗಳು, ಭೂತಾರಾದನೆ, ದೈವ ದೇವರ ಆರಾಧನೆಗೆ, ಆಗಾಗ ಬರುತ್ತಿರುತ್ತಾರೆ.

ಕಳೆದ 2023ರ ಏಪ್ರಿಲ್‌ನಲ್ಲಿ ಪತಿ ರಾಜ್‌ ಕುಂದ್ರ, ಮಕ್ಕಳಾ ವಿಯಾನ್ ಮತ್ತು ಸಮಿಷಾ, ಸಹೋದರಿ ನಟಿ ಶಮಿತಾ ಶೆಟ್ಟಿ, ತಾಯಿ ಸುನಂದಾ ಶೆಟ್ಟಿ ಹಾಗೂ ಕುಟುಂಬದ ಸದಸ್ಯರ ಜೊತೆಗೆ ದೇವರ ದರ್ಶನ ಪಡೆದಿದ್ದರು. ತಮಗೆ ಹೆಣ್ಣು ಮಗು ಬೇಕು. ಹೆಣ್ಣು ಮಗು ಜನಿಸಿದರೆ ಕಟೀಲು ದುರ್ಗಾ ಪರಮೇಶ್ವರಿಗೆ ಸೀರೆಯನ್ನು ಕಾಣಿಕೆ ರೂಪದಲ್ಲಿ ನೀಡುವುದಾಗಿ ಶಿಲ್ಪಾ ಶೆಟ್ಟಿ ಹರಕೆ ಹೊತ್ತಿದ್ದರಂತೆ. ಅದೇ ರೀತಿ ಅಂದು ದೇವಸ್ಥಾನಕ್ಕೆ ಕುಟುಂಬ ಸಮೇತ ಭೇಟಿ ನೀಡಿ, ತಮ್ಮ ಹರಕೆಯನ್ನು ತೀರಿಸಿದ್ದರು.

ಇದನ್ನೂ ಓದಿ: Shilpa Shetty: ರಾಜ್ ಕುಂದ್ರಾ ಜೈಲು ಪಾಲಾದಾಗ ದೇಶ ತೊರೆಯಬೇಕು ಎಂದು ಸಲಹೆ ನೀಡಿದ್ರಂತೆ ಶಿಲ್ಪಾ ಶೆಟ್ಟಿ!

ಶಿಲ್ಪಾ ಶೆಟ್ಟಿ ಭೂತಾರಾದನೆಯಲ್ಲಿ ಪಾಲ್ಗೊಂಡು ಕಾರಣಿಕ ದೈವದ ಆಶೀರ್ವಾದ ಪಡೆದಿದ್ದಾರೆ. ಈ ಬಾರಿ ಪತಿ ರಾಜ್ ಕುಂದ್ರಾ ಬಂದಿರಲಿಲ್ಲ. ಸುರತ್ಕಲ್ ಸಮೀಪದ ಅತ್ಯಂತ ಪ್ರಸಿದ್ಧ ಶಿಬರೂರು ಕೊಡಮಣಿತ್ತಾಯ ದೈವಸ್ಥಾನ ಅತ್ಯಂತ ಕಾರಣಿಕ ಕ್ಷೇತ್ರ.

ಶ್ರೀಕ್ಷೇತ್ರ ಕಟೀಲಿಗೂ ಶಿಬರೂರು ಶ್ರೀ ಕೊಡಮಣಿತ್ತಾಯ ಕ್ಷೇತ್ರಕ್ಕೂ ಸಂಬಂಧವಿದೆ. ಕಟೀಲು ದುರ್ಗಾಪರಮೇಶ್ವರೀ ದೇವಸ್ಥಾನದ ವಾರ್ಷಿಕ ಜಾತ್ರೆಯ ಸಂದರ್ಭ ಶ್ರೀ ಕೊಡಮಣಿತ್ತಾಯ ದೈವವು ಶ್ರೀ ಕಟೀಲಿಗೆ ಭೇಟಿ ನೀಡುವ ಕ್ರಮ ಈಗಲೂ ಮುಂದುವರಿದಿದೆ.

ಶಿಲ್ಪಾ ಶೆಟ್ಟಿ ಮತ್ತು ರಾಜ್‌ ಕುಂದ್ರಾ ದಂಪತಿ ತಮ್ಮ ಮಕ್ಕಳನ್ನು ಅತ್ಯಂತ ಪ್ರೀತಿಯಿಂದ ನೊಡಿಕೊಳ್ಳುತ್ತಿದ್ದಾರೆ. ಅವರ ಬೇಕು ಬೇಡಗಳನ್ನು ತೀರಿಸುವುದು ಮಾತ್ರವಲ್ಲ ವಿಭಿನ್ನ ಕಲ್ಪನೆಗಳೊಂದಿಗೆ ಬೆಳೆಸುತ್ತಿದ್ದಾರೆ. ಈ ಮಕ್ಕಳು ಮಲಗುವ ಕೋಣೆಗಳನ್ನು ಅವರಿಗೆ ಇಷ್ಟವಾದ ಬಣ್ಣಗಳಿಂದ ಅಲಂಕರಿಸಲಾಗಿದೆ. ಗೋಡೆಗಳ ಒಂದು ಬದಿಯಲ್ಲಿ ಆನೆ ಮತ್ತು ಜಿರಾಫೆ ಮತ್ತು ಚಿಟ್ಟೆಗಳು ಸೇರಿದಂತೆ ಹಲವಾರು ಪ್ರಾಣಿಗಳನ್ನು ಚಿತ್ರಿಸಲಾಗಿದೆ.

Exit mobile version