Site icon Vistara News

Shiva Rajkumar; ಶಿವಣ್ಣನ `ಭೈರತಿ ರಣಗಲ್’ ಶೂಟಿಂಗ್‌ ಇಂದಿನಿಂದಲೇ ಶುರು!

Shiva Rajkumar

ಬೆಂಗಳೂರು: ‘ಮಫ್ತಿ’ ಸಿನಿಮಾದಲ್ಲಿ ಭೈರತಿ ರಣಗಲ್ ಆಗಿ ಸಾಕಷ್ಟು ಗಮನ ಸೆಳೆದಿದ್ದರು ಶಿವಣ್ಣ (Shiva Rajkumar). ಶಿವಣ್ಣ ಅವರ ಹೋಂ ಬ್ಯಾನರ್​ನಲ್ಲಿ ಚಿತ್ರ ಮೂಡಿ ಬರುತ್ತಿದೆ. ‘ಗೀತಾ ಪಿಕ್ಚರ್ಸ್​’ನಲ್ಲಿ ಮೂಡಿ ಬರುತ್ತಿರುವ ಎರಡನೇ ಸಿನಿಮಾ ಇದಾಗಿದೆ. ʻಮಫ್ತಿ’ ಸಿನಿಮಾ ತೆರೆಗೆ ಬಂದಿದ್ದು 2017ರಲ್ಲಿ. ಅಲ್ಲಿಂದ ಇಲ್ಲಿಯವರೆಗೆ ನರ್ತನ್ ಅವರು ಯಾವುದೇ ಸಿನಿಮಾ ಘೋಷಣೆ ಆಗಿಲ್ಲರಲಿಲ್ಲ. ಇಂದಿನಿಂದಲೇ (ಜು.2)ಭೈರತಿ ರಣಗಲ್ ಶೂಟಿಂಗ್ ಶುರು ಆಗಿದೆ. ಕೆಲ ತಿಂಗಳ ಹಿಂದೆ ಈ ಚಿತ್ರಕ್ಕೆ ಮುಹೂರ್ತ ನೆರವೇರಿತ್ತು.

2017ರಲ್ಲಿ ‘ಮಫ್ತಿ’ ಸಿನಿಮಾ ರಿಲೀಸ್ ಆಯಿತು. ಶ್ರೀಮುರಳಿ ಹಾಗೂ ಶಿವಣ್ಣ ಕಾಂಬಿನೇಷನ್ ಕೆಲಸ ಮಾಡಿತು. ಈ ಚಿತ್ರದ ಮೊದಲಾರ್ಧದಲ್ಲಿ ಶ್ರೀಮುರಳಿ ಹೈಲೈಟ್ ಆದರೆ, ಎರಡನೇ ಭಾಗದಲ್ಲಿ ಶಿವರಾಜ್​ಕುಮಾರ್ ಪಾತ್ರ ಗಮನ ಸೆಳೆದಿತ್ತು. ‘ಭೈರತಿ ರಣಗಲ್’ ಸಿನಿಮಾ ‘ಮಫ್ತಿ’ ಪ್ರೀಕ್ವೆಲ್ ಆಗಿ ಮೂಡಿ ಬರಲಿದೆ. ಭೈರತಿ ರಣಗಲ್ ಹೇಗಿದ್ದ? ಆತನ ಹಿನ್ನೆಲೆ ಏನು ಎಂಬುದು ಈ ಸಿನಿಮಾದಲ್ಲಿ ತಿಳಿಯಲಿದೆ.

ಇದನ್ನೂ ಓದಿ: Shiva Rajkumar: ನಯಾ ಲುಕ್‌ಗಳಲ್ಲಿ ಮಿಂಚಿದ ಶಿವಣ್ಣ; ಯಾವ ಸಿನಿಮಾವಿದು?

ಈಗಾಗಲೇ ಶಿವಣ್ಣ ಜೈಲರ್‌ ಸಿನಿಮಾ ಮೂಲಕ ಕಾಲಿವುಡ್‌ಗೆ ಎಂಟ್ರಿ ಕೊಟ್ಟಿದ್ದಾರೆ. ನೆಲ್ಸನ್ ದಿಲೀಪ್‌ಕುಮಾರ್ ಬರೆದು ನಿರ್ದೇಶಿಸಿದ ‘ಜೈಲರ್’ ಸಿನಿಮಾ ಇದೇ ಆಗಸ್ಟ್ 10ರಂದು ಬಿಡುಗಡೆಯಾಗಲಿದೆ. ತಮನ್ನಾ ಭಾಟಿಯಾ ಪ್ರಮುಖ ಪಾತ್ರದಲ್ಲಿದ್ದಾರೆ. ಜಾಕಿ ಶ್ರಾಫ್, ರಮ್ಯಾ ಕೃಷ್ಣನ್, ಯೋಗಿ ಬಾಬು, ವಸಂತ ರವಿ ಮತ್ತು ವಿನಾಯಕನ್ ಕೂಡ ‘ಜೈಲರ್‌’ ಸಿನಿಮಾದಲ್ಲಿ ಕಾಣಿಸಿಕೊಂಡಿದ್ದಾರೆ. ಜೈಲರ್ ಚಿತ್ರದಲ್ಲಿ ಜಾಫರ್ ಸಾದಿಕ್ ಪ್ರಮುಖ ಪಾತ್ರ ನಿರ್ವಹಿಸಿದ್ದಾರೆ.

Exit mobile version