Site icon Vistara News

Shiva Rajkumar Birthday: ಶಿವಣ್ಣನ ಜನುಮದಿನಕ್ಕೆ ಸಾಲು ಸಾಲು ಸಿನಿಮಾ ಪೋಸ್ಟರ್‌!

Shiva Rajkumar cinema Posters

ಬೆಂಗಳೂರು: ಹ್ಯಾಟ್ರಿಕ್‌ ಹೀರೊ ಶಿವರಾಜ್‌ಕುಮಾರ್‌ 61ನೇ ವಸಂತಕ್ಕೆ (Shiva Rajkumar Birthday) ಕಾಲಿಟ್ಟಿದ್ದಾರೆ. ಅಭಿಮಾನಿಗಳು ಮೆಚ್ಚಿನ ನಾಯಕನಿಗೆ ವಿಶ್‌ ಮಾಡುತ್ತಿದ್ದಾರೆ. ಶಿವಣ್ಣ ಕೂಡ ಫ್ಯಾನ್ಸ್‌ಗೆ ಪೋಸ್ಟರ್‌ ಮೂಲಕ ಸಖತ್‌ ಸರ್‌ಪ್ರೈಸ್‌ ನೀಡುತ್ತಿದ್ದಾರೆ. ಸದ್ಯ ಅವರ ಕೈಯಲ್ಲಿ 10 ಸಿನಿಮಾಗಳಿವೆ. ಇದರ ಜತೆಗೆ ಒಂದಷ್ಟು ಹೊಸ ಸಿನಿಮಾ ಘೋಷಣೆ ಆಗಿದೆ.

ಅದರಲ್ಲಿಯೂ ಇಷ್ಟು ದಿನಗಳವರೆಗೆ ಸುದೀಪ್ ಹಾಗೂ ಉಪೇಂದ್ರ ರೀತಿಯ ಸ್ಟಾರ್ ನಟರ ಜತೆ ಮಲ್ಟಿಸ್ಟಾರರ್ ಚಿತ್ರಗಳಲ್ಲಿ ನಟಿಸುತ್ತಿದ್ದ ಶಿವರಾಜ್‌ಕುಮಾರ್ ಈಗ ಗೋಲ್ಡನ್ ಸ್ಟಾರ್ ಗಣೇಶ್, ಅಜೇಯ್ ಕೃಷ್ಣ ಹಾಗೂ ಪ್ರಭುದೇವ ಜತೆ ತೆರೆ ಹಂಚಿಕೊಳ್ಳುತ್ತಿದ್ದಾರೆ. ಶಿವರಾಜ್‌ಕುಮಾರ್ ಹಾಗೂ ಅಜೇಯ್ ರಾವ್ ಸಹ ಒಂದು ಮಲ್ಟಿಸ್ಟಾರರ್ ಚಿತ್ರಕ್ಕಾಗಿ ಒಂದಾಗುತ್ತಿದ್ದು, ಈ ಚಿತ್ರಕ್ಕೆ ಕಿರಣ್ ಎಂಬುವವರು ಬಂಡವಾಳ ಹೂಡಲು ಮುಂದಾಗಿದ್ದು, ಬಾಹುಬಲಿ ಎಸ್ ಕೆ ಆ್ಯಕ್ಷನ್ ಕಟ್ ಹೇಳಲಿದ್ದಾರೆ.

ಶಿವಣ್ಣ, ಗೋಲ್ಡನ್‌ ಸ್ಟಾರ್‌ ಗಣೇಶ್‌

ಶಿವರಾಜ್‌ಕುಮಾರ್ ಹಾಗೂ ಗೋಲ್ಡನ್ ಸ್ಟಾರ್ ಗಣೇಶ್ ಇದೇ ಮೊದಲ ಬಾರಿಗೆ ಚಿತ್ರವೊಂದಕ್ಕಾಗಿ ಒಂದಾಗುತ್ತಿದ್ದು, ಈ ಚಿತ್ರಕ್ಕೆ ಇನ್ನೂ ಸಹ ಶೀರ್ಷಿಕೆಯನ್ನು ಇಟ್ಟಿಲ್ಲ. ಚಿತ್ರಕ್ಕೆ ಕೆ ಎಸ್ ರವಿಕುಮಾರ್ ಆ್ಯಕ್ಷನ್ ಕಟ್ ಹೇಳಲಿದ್ದು, ಎಂ ಬಿ ಬಾಬು ಬಂಡವಾಳ ಹೂಡಲಿದ್ದಾರೆ. ಇದೀಗ ಚಿತ್ರತಂಡ ಶಿವರಾಜ್‌ಕುಮಾರ್ ಹುಟ್ಟುಹಬ್ಬಕ್ಕೆ ವಿಶೇಷ ಪೋಸ್ಟರ್ ಬಿಡುಗಡೆ ಮಾಡಿದೆ. ‘ಪ್ರೊಡಕ್ಷನ್ ನಂಬರ್ 6’ ಎಂದು ತಾತ್ಕಾಲಿಕವಾಗಿ ಶೀರ್ಷಿಕೆ ಇಡಲಾಗಿದೆ. ಇದೀಗ ರಿಲೀಸ್ ಆದ ಹೊಸ ಪೋಸ್ಟರ್ ಎಲ್ಲರ ಗಮನ ಸೆಳೆದಿದೆ.

ಇದನ್ನೂ ಓದಿ: Shiva Rajkumar birthday: ಮೂರು ವರ್ಷದ ಬಳಿಕ ಶಿವ ರಾಜ್‌ಕುಮಾರ್ ಭರ್ಜರಿ ಜನ್ಮದಿನ ಸಂಭ್ರಮ

ಶಿವ ರಾಜ್‌ಕುಮಾರ್- ಅಜೇಯ್ ರಾವ್

ಶಿವರಾಜ್‌ಕುಮಾರ್ ಹಾಗೂ ಅಜೇಯ್ ರಾವ್ ಸಹ ಒಂದು ಮಲ್ಟಿಸ್ಟಾರರ್ ಚಿತ್ರಕ್ಕಾಗಿ ಒಂದಾಗುತ್ತಿದ್ದು, ಈ ಚಿತ್ರಕ್ಕೆ ಕಿರಣ್ ಎಂಬುವವರು ಬಂಡವಾಳ ಹೂಡಲು ಮುಂದಾಗಿದ್ದು, ಬಾಹುಬಲಿ ಎಸ್ ಕೆ ಆ್ಯಕ್ಷನ್ ಕಟ್ ಹೇಳಲಿದ್ದಾರೆ. ಈ ಪೋಸ್ಟರ್‌ ಕೂಡ ಔಟ್‌ ಆಗಿದೆ.

ಲಕ್ಕಿ ಗೋಪಾಲ್ ಸಿನಿಮಾಗೆ ಟೈಟಲ್

ಲಕ್ಕಿ ಗೋಪಾಲ್ ಅವರು ಶಿವ ರಾಜ್​ಕುಮಾರ್ ಅವರ ಜತೆ ಸಿನಿಮಾ ಮಾಡುತ್ತಿದ್ದಾರೆ. ಮೈಲಾರಿ ಅವರು ಈ ಚಿತ್ರವನ್ನು ನಿರ್ಮಾಣ ಮಾಡುತ್ತಿದ್ದಾರೆ. ಈ ಚಿತ್ರಕ್ಕೆ ‘IV Returns’ ಎಂದು ಟೈಟಲ್ ಇಡಲಾಗಿದೆ.

ರಾಮ್ ಧೂಲಿಪುಡಿ ನಿರ್ದೇಶನದ ಚಿತ್ರದಲ್ಲಿ ಶಿವಣ್ಣ ಅವರು ಸೈನಿಕನ ಅವತಾರದಲ್ಲಿ ಕಾಣಿಸಿಕೊಂಡಿದ್ದಾರೆ. ಈ ಪೋಸ್ಟರ್ ಗಮನ ಸೆಳೆಯುತ್ತಿದೆ. ಈ ಚಿತ್ರಕ್ಕೆ ಇನ್ನೂ ಟೈಟಲ್ ಫಿಕ್ಸ್ ಆಗಿಲ್ಲ. ತಮಿಳು ನಿರ್ದೇಶಕ ಕಾರ್ತಿಕ್ ಅದ್ವೈತ್ ಅವರು ಶಿವಣ್ಣನ ಚಿತ್ರಕ್ಕೆ ನಿರ್ದೇಶನ ಮಾಡಲಿದ್ದಾರೆ. ಇನ್ನೂ ಅನೇಕ ಚಿತ್ರಗಳು ಘೋಷಣೆ ಆಗಿವೆ.

ಶಿವ ರಾಜ್‌ಕುಮಾರ್ – ಪ್ರಭುದೇವ

ಶಿವ ರಾಜ್‌ಕುಮಾರ್ ಹಾಗೂ ಪ್ರಭುದೇವ ಒಂದೇ ಚಿತ್ರದಲ್ಲಿ ನಟಿಸುತ್ತಿರುವ ವಿಷಯ ಹಳೆಯದೇ. ಆದರೆ ಈ ಚಿತ್ರಕ್ಕೆ ಕರಟಕ ದಮನಕ ಎಂದು ಹೆಸರಿಡಲಾಗಿದ್ದು, ಇಲ್ಲಿಯವರೆಗೂ ಒಮ್ಮೆಯೂ ಸಹ ಚಿತ್ರತಂಡ ಶೀರ್ಷಿಕೆಯನ್ನು ಯಾವ ಪೋಸ್ಟರ್‌ನಲ್ಲಿಯೂ ಬಳಸಿರಲಿಲ್ಲ.

Exit mobile version