Site icon Vistara News

Shiva Rajkumar: ಶಿವರಾಜ್‌ಕುಮಾರ್‌ ಸಿನಿಮಾಗೆ ದಿನಕರ್​ ತೂಗುದೀಪ ಆ್ಯಕ್ಷನ್​ ಕಟ್!

Shiva Rajkumar film direction by Dinakar Thoogudeepa

ಬೆಂಗಳೂರು: ಹ್ಯಾಟ್ರಿಕ್‌ ಹೀರೊ ಶಿವರಾಜ್‌ಕುಮಾರ್‌ (Shiva Rajkumar) ಅವರು ಈ ವರ್ಷ ʻಜೈಲರ್‌ʼ, ‘ಘೋಸ್ಟ್​’ ಸಿನಿಮಾಗಳ ಮೂಲಕ ರಂಜಿಸಿದ್ದರು. ಇದೀಗ ಮುಂದಿನ ವರ್ಷಕ್ಕೆ ಕಾಲಿಡುತ್ತಿರುವ ಸಂದರ್ಭದಲ್ಲಿ ಹೊಸ ಸಿನಿಮಾ ಅನೌನ್ಸ್‌ ಮಾಡಿದ್ದಾರೆ ಶಿವಣ್ಣ. ದಿನಕರ್​ ತೂಗುದೀಪ (Dinakar Thoogudeepa) ಅವರು ಆ್ಯಕ್ಷನ್​ ಕಟ್​ ಹೇಳಲಿದ್ದಾರೆ. ಇದೇ ಮೊದಲ ಬಾರಿಗೆ ದಿನಕರ್‌ ತೂಗುದೀಪ್‌ ಅವರು ಶಿವಣ್ಣ ಜತೆ ಕೈ ಜೋಡಿಸಿದ್ದಾರೆ.

‘ಜೊತೆ ಜೊತೆಯಲಿ’, ‘ನವಗ್ರಹ’, ‘ಸಾರಥಿ’ ರೀತಿಯ ಸಿನಿಮಾಗಳನ್ನು ನಿರ್ದೇಶಿಸಿ ಗಮನ ಸೆಳೆದಿದ್ದರು. ಈ ಸಿನಿಮಾದ ಶೀರ್ಷಿಕೆ ಏನು ಎಂಬುದು ಇನ್ನೂ ಬಹಿರಂಗ ಆಗಿಲ್ಲ. ಚಿತ್ರದ ಬಗ್ಗೆ ಹೆಚ್ಚಿನ ಮಾಹಿತಿ ತಿಳಿಯಲು ಫ್ಯಾನ್ಸ್​ ಕಾದಿದ್ದಾರೆ.ಈ ಸಿನಿಮಾಗೆ ‘ಬಿಂದ್ಯಾ ಮೂವೀಸ್’ ಸಂಸ್ಥೆಯ ಮೂಲಕ ಆರ್. ಕೇಶವ್ ಮತ್ತು ಬಿ.ಎಸ್. ಸುಧೀಂದ್ರ ಅವರು ಬಂಡವಾಳ ಹೂಡಲಿದ್ದಾರೆ. ಈ ಸಿನಿಮಾಗೆ ಪ್ರಿಯದರ್ಶಿನಿ ರಾಮರೆಡ್ಡಿ ಅವರು ಕಥೆ ಬರೆದಿದ್ದಾರೆ. ಸದ್ಯಕ್ಕೆ ಪ್ರೀ ಪ್ರೊಡಕ್ಷನ್ ಕೆಲಸಗಳು ಬಿರುಸಿನಿಂದ ಸಾಗುತ್ತಿವೆ ಎಂದು ಚಿತ್ರತಂಡ ತಿಳಿಸಿದೆ.ಶಿವರಾಜ್​ಕುಮಾರ್​ ಜೊತೆ ಬೇರೆ ಯಾವೆಲ್ಲ ಕಲಾವಿದರು ನಟಿಸಲಿದ್ದಾರೆ ಎಂಬುದು ಇನ್ನಷ್ಟೇ ಗೊತ್ತಾಗಬೇಕಿದೆ.

ಇದನ್ನೂ ಓದಿ: Shiva Rajkumar: ನಂದಿನಿ ಹೊಸ ಉತ್ಪನ್ನ ಲೋಕಾರ್ಪಣೆ; ಜಾಹೀರಾತು ಬಿಡುಗಡೆ ಮಾಡಿದ ಶಿವಣ್ಣ

ಧನುಷ್- ಶಿವರಾಜ್‌ಕುಮಾರ್‌ ನಟನೆಯ ತಮಿಳು ಸಿನಿಮಾ ರಿಲೀಸ್‌ ಡೇಟ್‌ ಅನೌನ್ಸ್‌!

‘ಕ್ಯಾಪ್ಟನ್ ಮಿಲ್ಲರ್’ ಸಿನಿಮಾವನ್ನು 2024ರ ಸಂಕ್ರಾಂತಿಗೆ ಬಿಡುಗಡೆ ಮಾಡಲಾಗುತ್ತಿದೆ. ಅಂದರೆ ಜನವರಿ 15ಕ್ಕೆ ಅಥವಾ 14 ಕ್ಕೆ ಸಿನಿಮಾ ಬಿಡುಗಡೆ ಆಗಲಿದೆ. ಸಿನಿಮಾದ ಬಿಡುಗಡೆ ದಿನಾಂಕವನ್ನು ನಿರ್ಮಾಣ ಸಂಸ್ಥೆಯಾದ ಸತ್ಯಜ್ಯೋತಿ ಫಿಲಮ್ಸ್‌​ ಘೋಷಣೆ ಮಾಡಿದೆ. ಬ್ರಿಟಿಷರ ವಿರುದ್ಧ ಹೋರಾಡುವ ಕ್ಯಾಪ್ಟನ್ ಆಗಿ ಧನುಷ್ ಮಿಂಚಿದ್ದಾರೆ. ಎಂದೂ ನಟಿಸಿರದ ಪಾತ್ರದಲ್ಲಿ ನಟ ಕಾಣಿಸಿಕೊಂಡಿದ್ದಾರೆ. ಕ್ಯಾಪ್ಟನ್ ಮಿಲ್ಲರ್ ಅರುಣ್ ಮಾಥೇಶ್ವರನ್ ನಿರ್ದೇಶಿಸಿದ್ದು, ಜಿವಿ ಪ್ರಕಾಶ್ ಸಂಗೀತ ಸಂಯೋಜಿಸಿದ್ದಾರೆ. ಚಿತ್ರದಲ್ಲಿ ಧನುಷ್ ದ್ವಿಪಾತ್ರದಲ್ಲಿ ನಟಿಸುತ್ತಿದ್ದಾರೆ ಎಂಬ ಮಾತು ಕೇಳಿಬರುತ್ತಿದೆ. ಅವರು ತಂದೆ ಮತ್ತು ಮಗನಾಗಿ ಕಾಣಿಸಿಕೊಳ್ಳಲಿದ್ದಾರೆ ಎಂದು ವರದಿಯಾಗಿದೆ. ಇದರಲ್ಲಿ ಶಿವರಾಜ್‌ ಕುಮಾರ್, ಪ್ರಿಯಾಂಕಾ ಮೋಹನ್, ನಿವೇದಿತಾ ಸತೀಶ್, ಜಾನ್ ಕೊಕ್ಕೆನ್ ಮತ್ತು ಮೂರ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.

Exit mobile version