ಬೆಂಗಳೂರು: ದೇಶದ ಸ್ವಾತಂತ್ರ್ಯ ಹೋರಾಟಕ್ಕೆ ನಿರ್ಣಾಯಕ ಕೊಡುಗೆ ನೀಡಿದ, ಅಹಿಂಸಾ ತತ್ವದಿಂದಲೇ ಜಗತ್ತಿಗೆ ಸ್ಫೂರ್ತಿಯಾದ ಮಹಾತ್ಮ ಗಾಂಧೀಜಿಯವರ 154ನೇ ಜಯಂತಿ (Gandhi Jayanti 2023)ಅ.2ರಂದು ಆಚರಿಸಲಾಗುತ್ತಿದೆ. ಈ ದಿನ ಶಕ್ತಿಧಾಮ ಮಕ್ಕಳ ಜತೆ ಗಾಂಧಿ ಜಯಂತಿ ಹಾಗೂ ಲಾಲ್ ಬಹದ್ದೂರ್ ಶಾಸ್ತ್ರಿಯವರ ಜನ್ಮದಿನದ ಸಂಭ್ರಮವನ್ನು ಹ್ಯಾಟ್ರಿಕ್ ಹೀರೋ ಶಿವರಾಜ್‌ಕುಮಾರ್ ಆಚರಿಸಿದರು.
ಮಕ್ಕಳ ಜತೆ ಶಿವಣ್ಣ ನಿಂತು ʻʻಇಂದು ನಮ್ಮ ಶಕ್ತಿಧಾಮ ಮಕ್ಕಳ ಜತೆ ಗಾಂಧಿ ಜಯಂತಿ ಹಾಗೂ ಲಾಲ್ ಬಹದ್ದೂರ್ ಶಾಸ್ತ್ರಿಯವರ ಜನ್ಮದಿನದ ಸಂಭ್ರಮ ಆಚರಿದ್ದು ಸಂತೋಷವಾಯ್ತು! ಮಕ್ಕಳು ಈ ಧೀಮಂತ ನಾಯಕರ ಚಿಂತನೆ ತಮ್ಮ ಜೀವನದಲ್ಲೂ ಅಳವಡಿಸಿಕೊಳ್ಳಲಿʼʼಎಂದು ಬರೆದುಕೊಂಡಿದ್ದಾರೆ. ಹಲವು ವಿಶೇಷ ದಿನಗಳಲ್ಲಿ ಶಿವರಾಜ್‌ಕುಮಾರ್ ಅವರು ಅಲ್ಲಿಗೆ ಭೇಟಿ ನೀಡುತ್ತಾರೆ.
ಸಿನಿಮಾ ವಿಚಾರಕ್ಕೆ ಬಂದರೆ ಕರುನಾಡ ಚಕ್ರವರ್ತಿ ಶಿವ ರಾಜ್‌ಕುಮಾರ್ (Shiva Rajkumar) ನಾಯಕರಾಗಿ ನಟಿಸಿರುವ, ಬಹು ನಿರೀಕ್ಷಿತ “ಘೋಸ್ಟ್” ಚಿತ್ರದ ಟ್ರೈಲರ್ (Ghost Trailer) ಬಿಡುಗಡೆಗೊಂಡಿದೆ. ʻʻಸಾಮಾನ್ಯವಾಗಿ ನಾನ್ ಯಾರ್ ತಂಟೆಗೂ ಹೋಗಲ್ಲ. ಸೋಲ್ತಿನಿ ಅನ್ನೊ ಭಯಕ್ಕಲ್ಲ, ನಾನ್ ಹೋದ್ರೆ ಯುದ್ಧಭೂಮಿ ರುದ್ರಭೂಮಿ ಆಗುತ್ತೆʼʼಎನ್ನು ಖಡಕ್ ಡೈಲಾಗ್ ಮೂಲಕ ರಗಡ್ ಆಗಿ ಕಂಡಿದ್ದಾರೆ ಶಿವಣ್ಣ. ಈ ಹಿಂದೆ “ಘೋಸ್ಟ್” ಚಿತ್ರದ ಸಾಂಗ್ ರಿಲೀಸ್ ಆಗಿತ್ತು. ಅರ್ಜುನ್ ಜನ್ಯಾ ಕಂಪೋಸ್ ಮಾಡಿದ್ದು, ಹಾಡು ಸಖತ್ ಆಗಿದೆ ಎಂದು ಶಿವಣ್ಣನ ಫ್ಯಾನ್ಸ್ (GHOST OGM) ಮೆಚ್ಚುಗೆ ವ್ಯಕ್ತಪಡಿಸಿದ್ದರು.
ಇದನ್ನೂ ಓದಿ: Shiva Rajkumar: ʻಘೋಸ್ಟ್ʼ ಸಿನಿಮಾ ಹಾಡಿಗೆ ಶಿವಣ್ಣನ ಫ್ಯಾನ್ಸ್ ಫಿದಾ!
ಈಗಾಗಲೇ ಸಿನಿಮಾದ ಥಿಯೇಟ್ರಿಕಲ್, ಸ್ಯಾಟಲೈಟ್ ಹಾಗೂ ಡಿಜಿಟಲ್ ಹಕ್ಕು ಭಾರಿ ಮೊತ್ತಕ್ಕೆ ಮಾರಾಟವಾಗಿದೆ. ಕನ್ನಡದ ಖ್ಯಾತ ನಿರ್ಮಾಣ ಸಂಸ್ಥೆ ಸಂದೇಶ್ ಪ್ರೊಡಕ್ಷನ್ಸ್ ಲಾಂಛನದಲ್ಲಿ ಸಂದೇಶ್ ಎನ್ ನಿರ್ಮಿಸಿರುವ, ಶ್ರೀನಿ ನಿರ್ದೇಶನದ ಈ ಸಿನಿಮಾ ಮತ್ತೆ ಸುದ್ದಿಯಲ್ಲಿದೆ .”ಆರ್ ಆರ್ ಆರ್”, “ಜವಾನ್” ಸೇರಿದಂತೆ ಅನೇಕ ಸೂಪರ್ ಹಿಟ್ ಚಿತ್ರಗಳನ್ನು ವಿತರಣೆ ಮಾಡಿರುವ ಪೆನ್ ಸ್ಟುಡಿಯೊ ಸಂಸ್ಥೆ ಈಗ “ಘೋಸ್ಟ್” ಚಿತ್ರದ ವಿತರಣಾ ಹಕ್ಕನ್ನು ಪಡೆದುಕೊಂಡಿದೆ.
ಬಾಲಿವುಡ್ ನಟ ಅನುಪಮ್ ಖೇರ್, ಜಯರಾಂ, ಸತ್ಯಪ್ರಕಾಶ್, ಪ್ರಶಾಂತ್ ನಾರಾಯಣನ್, ದತ್ತಣ್ಣ, ಅಭಿಜಿತ್ ಮುಂತಾದವರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ.ಕೆಜಿಎಫ್ ಖ್ಯಾತಿಯ ನಟಿ ಅರ್ಚನಾ ಜೋಯಿಸ್ ಕಾಣಿಸಿಕೊಳ್ಳಲಿದ್ದಾರೆ. ಟೋಪಿವಾಲ, ಶ್ರೀನಿವಾಸ ಕಲ್ಯಾಣ, ಓಲ್ಡ್ ಮಾಂಕ್ ಸಿನಿಮಾ ಖ್ಯಾತಿಯ ಎಂ.ಜಿ.ಶ್ರೀನಿವಾಸ್ ಅವರು ಘೋಸ್ಟ್ ಸಿನಿಮಾನವನ್ನು ನಿರ್ದೇಶಿಸುತ್ತಿದ್ದಾರೆ. ಸಿನಿಮಾಗೆ ಅರ್ಜುನ್ ಜನ್ಯಾ ಸಂಗೀತ ಇದ್ದರೆ, ಸಂದೇಶ್ ನಾಗರಾಜ್ ನಿರ್ಮಾಪಕರಾಗಿದ್ದಾರೆ. ಅಕ್ಟೋಬರ್ 19ರಂದು ಸಿನಿಮಾ ರಿಲೀಸ್ ಆಗಲಿದೆ.