ಬೆಂಗಳೂರು; ಹ್ಯಾಟ್ರಿಕ್ ಹೀರೊ ಶಿವ ರಾಜ್‌ಕುಮಾರ್ (Shiva Rajkumar) ಅಭಿನಯದ `ಘೋಸ್ಟ್’ ಸಿನಿಮಾ ನಾಳೆ ಅದ್ಧೂರಿಯಾಗಿ ತೆರೆ ಕಾಣುತ್ತಿದೆ. ಅ. 19ರಂದು ಪ್ಯಾನ್ ಇಂಡಿಯಾ ಮಟ್ಟದಲ್ಲಿ ರಿಲೀಸ್ ಆಗುತ್ತಿದೆ. ಈಗಾಗಲೇ ಮುಂಬೈನಲ್ಲಿ ಪ್ರಚಾರ ಮಾಡಿದ್ದಾಗಿದೆ. ಇದರ ಬೆನ್ನಲ್ಲೇ ನಿಶಾನ್ ರೈ ಸಾಹಿತ್ಯ ಬರೆದು, ಹಾಡಿರುವ ಈ ಓಜಿಎಂ ಬಿಡುಗಡೆಯಾಗಿದ್ದು, ಜನರಲ್ಲಿ ಮತ್ತಷ್ಟು ಕುತೂಹಲ ಹುಟ್ಟು ಹಾಕಿದೆ. ಘೋಸ್ಟ್ ಜತೆಗೆ ದಳಪತಿ ವಿಜಯ್ ಅವರ ಲಿಯೋ ಕೂಡ ಬಿಡುಗಡೆಯಾಗುತ್ತಿದೆ.
ಶಿವರಾಜ್ ಕುಮಾರ್ ಅಭಿನಯದ ಘೋಷ್ಟ್ ಮಧ್ಯರಾತ್ರಿ 12.15ರಿಂದಲೇ ಶೋ ಪ್ರಾರಂಭಗೊಳ್ಳಲಿದೆ. ದಸರಾ ರಜೆಯ ಕಾರಣಗಳಿಂದ, ತಮಿಳಿನ ಲಿಯೋ, ಕನ್ನಡದ ಘೋಷ್ಟ್, ತೆಲುಗಿನಲ್ಲಿ ಬಾಲಯ್ಯ ಮತ್ತು ರವಿತೇಜಾ ಸಿನಿಮಾಗಳು ಇದೇ ವಾರ ರಿಲೀಸ್ ಆಗಲಿದೆ. ಕರ್ನಾಟಕ ಮತ್ತು ಆಂಧ್ರ, ತೆಲಂಗಾಣದಲ್ಲಿ ಅಲ್ಲಿನ ಸಿನಿಮಾಗಿಂತ ಹೆಚ್ಚಿನ ಸ್ಕ್ರೀನ್‌ಗಳು ಲಿಯೋ ಸಿನಿಮಾಗೆ ಸಿಗುತ್ತಿದೆ. ಈ ಸಿನಿಮಾದ ಕನ್ನಡ ಡಬ್ಬಿಂಗ್ ಕೂಡಾ ರಿಲೀಸ್ ಆಗುತ್ತಿರುವುದರಿಂದ ಕನ್ನಡ ಸ್ಕ್ರೀನಿಂಗ್‌ಗೆ ಹನ್ನೆರಡು ಥಿಯೇಟರ್‌ಗಳು ಸಿಕ್ಕರೆ, ತಮಿಳು ವರ್ಸನ್‌ಗೆ 105ಕ್ಕೂ ಹೆಚ್ಚು ಸ್ಕ್ರೀನ್‌ಗಳು ಸಿಕ್ಕಿವೆ.
ಘೋಸ್ಟ್ ಸಿನಿಮಾದಲ್ಲಿ ಶಿವಣ್ಣ ಯಂಗ್ ಲುಕ್‌ನಲ್ಲಿ ಕಂಡಿದ್ದಾರೆ. ಎರಡು ಶೇಡ್‌ಗಳಲ್ಲಿ ಶಿವಣ್ಣ ಕಾಣಿಸಿಕೊಂಡಿದ್ದು, ಫ್ಯಾನ್ಸ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಶಿವಣ್ಣ ರೆಟ್ರೋ ಲುಕ್ ಕಂಡರೆ ಅವರ ಕೆಲವು ಹಳೆಯ ಸಿನಿಮಾಗಳು ನೆನಪಿಸುವಂತಿದೆ. ಶಿವಣ್ಣ ಅವರನ್ನು ಮತ್ತೊಮ್ಮೆ ದೊಡ್ಡ ಪರದೆ ಮೇಲೆ ನೋಡಲು ಫ್ಯಾನ್ಸ್ ಕಾದಿದ್ದಾರೆ. ಈಗಾಗಲೇ ಸಿನಿಮಾದ ಥಿಯೇಟ್ರಿಕಲ್, ಸ್ಯಾಟಲೈಟ್ ಹಾಗೂ ಡಿಜಿಟಲ್ ಹಕ್ಕು ಭಾರಿ ಮೊತ್ತಕ್ಕೆ ಮಾರಾಟವಾಗಿದೆ. ಕನ್ನಡದ ಖ್ಯಾತ ನಿರ್ಮಾಣ ಸಂಸ್ಥೆ ಸಂದೇಶ್ ಪ್ರೊಡಕ್ಷನ್ಸ್ ಲಾಂಛನದಲ್ಲಿ ಸಂದೇಶ್ ಎನ್ ನಿರ್ಮಿಸಿರುವ, ಶ್ರೀನಿ ನಿರ್ದೇಶನದ ಈ ಸಿನಿಮಾ ಮತ್ತೆ ಸುದ್ದಿಯಲ್ಲಿದೆ .”ಆರ್ ಆರ್ ಆರ್”, “ಜವಾನ್” ಸೇರಿದಂತೆ ಅನೇಕ ಸೂಪರ್ ಹಿಟ್ ಚಿತ್ರಗಳನ್ನು ವಿತರಣೆ ಮಾಡಿರುವ ಪೆನ್ ಸ್ಟುಡಿಯೊ ಸಂಸ್ಥೆ ಈಗ “ಘೋಸ್ಟ್” ಚಿತ್ರದ ವಿತರಣಾ ಹಕ್ಕನ್ನು ಪಡೆದುಕೊಂಡಿದೆ.
ಇದನ್ನೂ ಓದಿ: Shiva Rajkumar: ʻಟೈಗರ್ʼ ಸಲ್ಮಾನ್ ಖಾನ್‌ರನ್ನು ಭೇಟಿ ಮಾಡಿದ ʻಘೋಸ್ಟ್ʼ ಶಿವಣ್ಣ!
‘ಘೋಸ್ಟ್’ ಚಿತ್ರದ ತೆಲುಗು ಹಾಗೂ ಹಿಂದಿಯ ವಿತರಣಾ ಹಕ್ಕನ್ನು ಪಡೆದುಕೊಂಡಿದೆ ಎಂದು ಸಂದೇಶ್ ತಿಳಿಸಿದ್ದಾರೆ. ಅಂದಹಾಗೆ, ಎಷ್ಟು ಕೋಟಿ ಬ್ಯುಸಿನೆಸ್ ಆಗಿದೆ ಎನ್ನುವ ಲೆಕ್ಕಾಚಾರವನ್ನು ತಂಡದವರು ನೀಡಿಲ್ಲ. ಇತ್ತೀಚೆಗೆ ಪೆನ್ ಸ್ಟುಡಿಯೊ ಸಂಸ್ಥೆ ಮುಖ್ಯಸ್ಥರಾದ ಜಯಂತಿ ಲಾಲ್ ಗಡ ಹಾಗೂ ನಿರ್ಮಾಪಕ ಸಂದೇಶ್ ಈ ಕುರಿತು ಮಾತನಾಡಿದ್ದರು.
ಬಾಲಿವುಡ್ ನಟ ಅನುಪಮ್ ಖೇರ್, ಜಯರಾಂ, ಸತ್ಯಪ್ರಕಾಶ್, ಪ್ರಶಾಂತ್ ನಾರಾಯಣನ್, ದತ್ತಣ್ಣ, ಅಭಿಜಿತ್ ಮುಂತಾದವರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ.ಕೆಜಿಎಫ್ ಖ್ಯಾತಿಯ ನಟಿ ಅರ್ಚನಾ ಜೋಯಿಸ್ ಕಾಣಿಸಿಕೊಳ್ಳಲಿದ್ದಾರೆ. ಟೋಪಿವಾಲ, ಶ್ರೀನಿವಾಸ ಕಲ್ಯಾಣ, ಓಲ್ಡ್ ಮಾಂಕ್ ಸಿನಿಮಾ ಖ್ಯಾತಿಯ ಎಂ.ಜಿ.ಶ್ರೀನಿವಾಸ್ ಅವರು ಘೋಸ್ಟ್ ಸಿನಿಮಾನವನ್ನು ನಿರ್ದೇಶಿಸುತ್ತಿದ್ದಾರೆ. ಸಿನಿಮಾಗೆ ಅರ್ಜುನ್ ಜನ್ಯಾ ಸಂಗೀತ ಇದ್ದರೆ, ಸಂದೇಶ್ ನಾಗರಾಜ್ ನಿರ್ಮಾಪಕರಾಗಿದ್ದಾರೆ. ಅಕ್ಟೋಬರ್ 19ರಂದು ಸಿನಿಮಾ ರಿಲೀಸ್ ಆಗಲಿದೆ.