Site icon Vistara News

Shiva Rajkumar: ʻಘೋಸ್ಟ್ʼ ಸಿನಿಮಾ ಹಾಡಿಗೆ ಶಿವಣ್ಣನ ಫ್ಯಾನ್ಸ್‌ ಫಿದಾ!

Shiva Rajkumar

ಬೆಂಗಳೂರು: ಕರುನಾಡ ಚಕ್ರವರ್ತಿ ಶಿವ ರಾಜ್‌ಕುಮಾರ್ (Shiva Rajkumar) ನಾಯಕರಾಗಿ ನಟಿಸಿರುವ, ಬಹು ನಿರೀಕ್ಷಿತ “ಘೋಸ್ಟ್” ಚಿತ್ರದ ಸಾಂಗ್ ರಿಲೀಸ್ ಆಗಿದ್ದು, ಎಲ್ಲರ ಗಮನ ಸೆಳೆಯುತ್ತಿದೆ. ಈ ಹಾಡನ್ನು ಅರ್ಜುನ್‌ ಜನ್ಯಾ ಕಂಪೋಸ್‌ ಮಾಡಿದ್ದು, ಹಾಡು ಸಖತ್‌ ಆಗಿದೆ ಎಂದು ಶಿವಣ್ಣನ ಫ್ಯಾನ್ಸ್‌ (GHOST OGM) ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. ಚಿತ್ರತಂಡ ‘ಒಎಂಜಿ ಮ್ಯೂಸಿಕ್’ ರಿಲೀಸ್ ಮಾಡಿದೆ. ಒಂದೇ ವಿಡಿಯೊದಲ್ಲಿ ಕನ್ನಡ, ಮಲಯಾಳಂ, ತಮಿಳಿನ ಲಿರಿಕ್ಸ್ ಇದೆ.

ಈಗಾಗಲೇ ಸಿನಿಮಾದ ಥಿಯೇಟ್ರಿಕಲ್, ಸ್ಯಾಟಲೈಟ್ ಹಾಗೂ ಡಿಜಿಟಲ್ ಹಕ್ಕು ಭಾರಿ ಮೊತ್ತಕ್ಕೆ ಮಾರಾಟವಾಗಿದೆ. ಕನ್ನಡದ ಖ್ಯಾತ ನಿರ್ಮಾಣ ಸಂಸ್ಥೆ ಸಂದೇಶ್ ಪ್ರೊಡಕ್ಷನ್ಸ್ ಲಾಂಛನದಲ್ಲಿ ಸಂದೇಶ್ ಎನ್ ನಿರ್ಮಿಸಿರುವ, ಶ್ರೀನಿ ನಿರ್ದೇಶನದ ಈ ಸಿನಿಮಾ ಮತ್ತೆ ಸುದ್ದಿಯಲ್ಲಿದೆ .”ಆರ್ ಆರ್ ಆರ್”, “ಜವಾನ್” ಸೇರಿದಂತೆ ಅನೇಕ ಸೂಪರ್ ಹಿಟ್ ಚಿತ್ರಗಳನ್ನು ವಿತರಣೆ ಮಾಡಿರುವ ಪೆನ್ ಸ್ಟುಡಿಯೊ ಸಂಸ್ಥೆ ಈಗ “ಘೋಸ್ಟ್” ಚಿತ್ರದ ವಿತರಣಾ ಹಕ್ಕನ್ನು ಪಡೆದುಕೊಂಡಿದೆ.

ಈಗ ‘ಘೋಸ್ಟ್’ ಚಿತ್ರದ ತೆಲುಗು ಹಾಗೂ ಹಿಂದಿಯ ವಿತರಣಾ ಹಕ್ಕನ್ನು ಪಡೆದುಕೊಂಡಿದೆ ಎಂದು ಸಂದೇಶ್ ತಿಳಿಸಿದ್ದಾರೆ. ಅಂದಹಾಗೆ, ಎಷ್ಟು ಕೋಟಿ ಬಿಸ್ನೆಸ್ ಆಗಿದೆ ಎನ್ನುವ ಲೆಕ್ಕಾಚಾರವನ್ನು ತಂಡದವರು ನೀಡಿಲ್ಲ. ಇತ್ತೀಚೆಗೆ ಪೆನ್ ಸ್ಟುಡಿಯೊ ಸಂಸ್ಥೆ ಮುಖ್ಯಸ್ಥರಾದ ಜಯಂತಿ ಲಾಲ್ ಗಡ ಹಾಗೂ ನಿರ್ಮಾಪಕ ಸಂದೇಶ್ ಈ ಕುರಿತು ಮಾತನಾಡಿದ್ದರು. ಅಕ್ಟೋಬರ್ ಮೊದಲವಾರ “ಘೋಸ್ಟ್” ಚಿತ್ರದ ಪ್ರಚಾರಕ್ಕಾಗಿ ಶಿವ ರಾಜ್‌ಕುಮಾರ್ ಮುಂಬೈ, ದೆಹಲಿ ಮುಂತಾದ ಕಡೆ ತೆರಳುತ್ತಿದ್ದಾರೆ ಎಂದು ನಿರ್ಮಾಪಕರು ಮಾಹಿತಿ ನೀಡಿದ್ದಾರೆ‌.

ಇದನ್ನೂ Shiva Rajkumar: ನಿಖಿಲ್‌ ಸಿನಿಮಾ ಸೆಟ್‌ಗೆ ಸಡನ್‌ ಭೇಟಿ ಕೊಟ್ಟ ಹ್ಯಾಟ್ರಿಕ್‌ ಹೀರೊ ಶಿವರಾಜ್‌ಕುಮಾರ್‌!ಓದಿ:

ಬಾಲಿವುಡ್‌ ನಟ ಅನುಪಮ್‌ ಖೇರ್‌, ಜಯರಾಂ, ಸತ್ಯಪ್ರಕಾಶ್, ಪ್ರಶಾಂತ್ ನಾರಾಯಣನ್, ದತ್ತಣ್ಣ, ಅಭಿಜಿತ್ ಮುಂತಾದವರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ.ಕೆಜಿಎಫ್‌ ಖ್ಯಾತಿಯ ನಟಿ ಅರ್ಚನಾ ಜೋಯಿಸ್ ಕಾಣಿಸಿಕೊಳ್ಳಲಿದ್ದಾರೆ. ಟೋಪಿವಾಲ, ಶ್ರೀನಿವಾಸ ಕಲ್ಯಾಣ, ಓಲ್ಡ್‌ ಮಾಂಕ್‌ ಸಿನಿಮಾ ಖ್ಯಾತಿಯ ಎಂ.ಜಿ.ಶ್ರೀನಿವಾಸ್‌ ಅವರು ಘೋಸ್ಟ್‌ ಸಿನಿಮಾನವನ್ನು ನಿರ್ದೇಶಿಸುತ್ತಿದ್ದಾರೆ. ಸಿನಿಮಾಗೆ ಅರ್ಜುನ್‌ ಜನ್ಯಾ ಸಂಗೀತ ಇದ್ದರೆ, ಸಂದೇಶ್‌ ನಾಗರಾಜ್‌ ನಿರ್ಮಾಪಕರಾಗಿದ್ದಾರೆ.ಅಕ್ಟೋಬರ್ 19ರಂದು ಸಿನಿಮಾ ರಿಲೀಸ್ ಆಗಲಿದೆ.

Exit mobile version