Site icon Vistara News

Shiva Rajkumar: ಬಿಗ್‌ ಡ್ಯಾಡಿ ಶಿವಣ್ಣ ಅದ್ಭುತ; ಮಿಸ್‌ ಮಾಡ್ದೆ ಸಿನಿಮಾ ನೋಡಿ ಅಂದ್ರು ಫ್ಯಾನ್ಸ್‌!

Shiva Rajkumar Ghost Twitter Review

ಬೆಂಗಳೂರು: ಹ್ಯಾಟ್ರಿಕ್‌ ಹೀರೊ ಶಿವ ರಾಜ್‌ಕುಮಾರ್‌ (Shiva Rajkumar) ಅಭಿನಯದ `ಘೋಸ್ಟ್‌’ ಸಿನಿಮಾ ಇಂದು ಅ.19ರಂದು ಅದ್ಧೂರಿಯಾಗಿ ತೆರೆ ಕಂಡಿದೆ. ಅ. 19ರಂದು ಪ್ಯಾನ್‌ ಇಂಡಿಯಾ ಮಟ್ಟದಲ್ಲಿ ರಿಲೀಸ್‌ ಆಗಿದೆ. ಮಧ್ಯರಾತ್ರಿ ಸಂತೋಷ್ ಥಿಯೇಟರ್‌ನಲ್ಲಿ ಫ್ಯಾನ್ಸ್‌ ಶೋ ಪ್ರದರ್ಶನ ಕಂಡಿತ್ತು. ಘೋಸ್ಟ್ ಚಿತ್ರ ದಿನಕ್ಕೆ 4 ಶೋ ಪ್ರದರ್ಶನ ಕಾಣಲಿವೆ. ಇದೀಗ ಟ್ವಿಟರ್‌ನಲ್ಲಿ ಘೋಸ್ಟ್‌ ಸಖತ್‌ ಟ್ರೆಂಡ್‌ ಆಗಿದೆ. ಶಿವಣ್ಣ ಈ ವಯಸ್ಸಲ್ಲಿ ಅವರ ನಟನೆ, ಗ್ಯಾಂಗ್‌ಸ್ಟರ್‌ ಪಾತ್ರಗಳಿಗೆ ಹೇಳಿಮಾಡಿಸಿದ ಹಾಗಿದೆ. ವಿರಾಮದ ಮುನ್ನ ಬರುವ ಸಾಹಸ ಸನ್ನಿವೇಶಗಳು ಬೊಂಬಾಟಾಗಿವೆʼʼಎಂದು ಫ್ಯಾನ್ಸ್‌ ಟ್ವೀಟ್‌ ಮೂಲಕ ಹಾಡಿ ಹೊಗಳುತ್ತಿದ್ದಾರೆ.

ʻʻತಾಂತ್ರಿಕ ವಿಚಾರಗಳಿಗೆ ಬಂದರೆ, ನಿರ್ದೇಶನ ಶ್ರೀನಿ ಅವರಿಂದ ಚಿತ್ರಕತೆ ಹೇಳುವ ರೀತಿ ವೇಗವಾಗಿದೆ. ವಿಭಿನ್ನವಾಗಿದೆ. ಘೋಸ್ಟ್ ಖಂಡಿತ ಥಿಯೇಟರ್ ಅಲ್ಲಿ ನೋಡಬೇಕಾದ ಸಿನಿಮಾʼʼಎಂದು ಅಭಿಮಾನಿಯೊಬ್ಬರು ಟ್ವೀಟ್‌ ಮಾಡಿದ್ದಾರೆ.

“ಈಗಷ್ಟೇ ಫ್ಯಾನ್ಸ್ ಶೋ ನೋಡಿಕೊಂಡು ಬಂದೆ. ಅರ್ಜುನ್ ಜನ್ಯ ವೃತ್ತಿ ಜೀವನದಲ್ಲೇ ಬೆಸ್ಟ್ ಸಿನಿಮಾ. ಶಿವಣ್ಣ ಮ್ಯಾನರಿಸಂ, ವಾಯ್ಸ್ ಎಲ್ಲವೂ ಅದ್ಭುತವಾಗಿದೆ.” ಎಂದು ನೆಟ್ಟಿಗರೊಬ್ಬರು ಹೇಳಿದ್ದಾರೆ.

ಇದನ್ನೂ ಓದಿ: Shiva Rajkumar: ನಾಳೆ ಶಿವಣ್ಣ ʻಘೋಸ್ಟ್‌ʼ ಅದ್ಧೂರಿ ತೆರೆಗೆ; ಲಿಯೋ ಸಿನಿಮಾಗೆ ಹೆಚ್ಚು ಸ್ಕ್ರೀನ್‌!

ಅರ್ಜುನ್ ಜನ್ಯ ಹಿನ್ನೆಲೆ ಸಂಗೀತ ಅದ್ಭುತವಾಗಿದೆ. ನಾನ್ ಲೀನಿಯರ್ ಸ್ಕ್ರೀನ್ ಪ್ಲೇ ಎಂಗೇಜಿಂಗ್ ಆಗಿದೆ. ಹಿಂದೆಂದೂ ಇಂತಹ ಎಲೆವೇಷನ್ ಸೀನ್‌ಗಳಲ್ಲಿ ಶಿವಣ್ಣನನ್ನು ತೋರಿಸಿರಲಿಲ್ಲ. ಶಿವಣ್ಣ ಆಕ್ಷನ್ ಸೀನ್ ಅದ್ಭುತವಾಗಿದೆ ಎಂದು ಮತ್ತೊಬ್ಬರು ಬರೆದುಕೊಂಡಿದ್ದಾರೆ.

ಘೋಸ್ಟ್‌ ಸಿನಿಮಾದಲ್ಲಿ ಶಿವಣ್ಣ ಯಂಗ್‌ ಲುಕ್‌ನಲ್ಲಿ ಕಂಡಿದ್ದಾರೆ. ಎರಡು ಶೇಡ್‌ಗಳಲ್ಲಿ ಶಿವಣ್ಣ ಕಾಣಿಸಿಕೊಂಡಿದ್ದು, ಫ್ಯಾನ್ಸ್‌ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಶಿವಣ್ಣ ರೆಟ್ರೋ ಲುಕ್‌ ಕಂಡರೆ ಅವರ ಕೆಲವು ಹಳೆಯ ಸಿನಿಮಾಗಳು ನೆನಪಿಸುವಂತಿದೆ. ಈಗಾಗಲೇ ಸಿನಿಮಾದ ಥಿಯೇಟ್ರಿಕಲ್, ಸ್ಯಾಟಲೈಟ್ ಹಾಗೂ ಡಿಜಿಟಲ್ ಹಕ್ಕು ಭಾರಿ ಮೊತ್ತಕ್ಕೆ ಮಾರಾಟವಾಗಿದೆ. ಕನ್ನಡದ ಖ್ಯಾತ ನಿರ್ಮಾಣ ಸಂಸ್ಥೆ ಸಂದೇಶ್ ಪ್ರೊಡಕ್ಷನ್ಸ್ ಲಾಂಛನದಲ್ಲಿ ಸಂದೇಶ್ ಎನ್ ನಿರ್ಮಿಸಿರುವ, ಶ್ರೀನಿ ನಿರ್ದೇಶನದ ಈ ಸಿನಿಮಾ ಮತ್ತೆ ಸುದ್ದಿಯಲ್ಲಿದೆ .”ಆರ್ ಆರ್ ಆರ್”, “ಜವಾನ್” ಸೇರಿದಂತೆ ಅನೇಕ ಸೂಪರ್ ಹಿಟ್ ಚಿತ್ರಗಳನ್ನು ವಿತರಣೆ ಮಾಡಿರುವ ಪೆನ್ ಸ್ಟುಡಿಯೊ ಸಂಸ್ಥೆ ಈಗ “ಘೋಸ್ಟ್” ಚಿತ್ರದ ವಿತರಣಾ ಹಕ್ಕನ್ನು ಪಡೆದುಕೊಂಡಿದೆ.

ಬಾಲಿವುಡ್‌ ನಟ ಅನುಪಮ್‌ ಖೇರ್‌, ಜಯರಾಂ, ಸತ್ಯಪ್ರಕಾಶ್, ಪ್ರಶಾಂತ್ ನಾರಾಯಣನ್, ದತ್ತಣ್ಣ, ಅಭಿಜಿತ್ ಮುಂತಾದವರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ.ಕೆಜಿಎಫ್‌ ಖ್ಯಾತಿಯ ನಟಿ ಅರ್ಚನಾ ಜೋಯಿಸ್ ಕಾಣಿಸಿಕೊಂಡಿದ್ದಾರೆ. ಟೋಪಿವಾಲ, ಶ್ರೀನಿವಾಸ ಕಲ್ಯಾಣ, ಓಲ್ಡ್‌ ಮಾಂಕ್‌ ಸಿನಿಮಾ ಖ್ಯಾತಿಯ ಎಂ.ಜಿ.ಶ್ರೀನಿವಾಸ್‌ ಅವರು ಘೋಸ್ಟ್‌ ಸಿನಿಮಾನವನ್ನು ನಿರ್ದೇಶಿಸಿದ್ದಾರೆ. ಸಿನಿಮಾಗೆ ಅರ್ಜುನ್‌ ಜನ್ಯಾ ಸಂಗೀತ ಇದ್ದರೆ, ಸಂದೇಶ್‌ ನಾಗರಾಜ್‌ ನಿರ್ಮಾಪಕರಾಗಿದ್ದಾರೆ.

Exit mobile version