ಬೆಂಗಳೂರು: ಸೂಪರ್ ಸ್ಟಾರ್ ರಜನಿಕಾಂತ್ ಅಭಿನಯದ ʻಜೈಲರ್ʼ ಚಿತ್ರ ಅ.2ರಂದು ಬಿಡುಗಡೆಯಾಗಿತ್ತು. ನೆಲ್ಸನ್ ದಿಲೀಪ್ಕುಮಾರ್ ನಿರ್ದೇಶನದ ಈ ಸಿನಿಮಾ ವಿಶ್ವಾದ್ಯಂತ 650 ಕೋಟಿ ರೂಪಾಯಿಗೂ ಹೆಚ್ಚು ಗಳಿಕೆ ಕಂಡಿದೆ. 2018ರಲ್ಲಿ ಬಿಡುಗಡೆಯಾದ ರಜನಿಕಾಂತ್ ಮತ್ತು ಅಕ್ಷಯ್ ಕುಮಾರ್ ಅಭಿನಯದ 2.0 ನಂತರ 600 ಕೋಟಿ ರೂ. ಕ್ಲಬ್ಗೆ ಪ್ರವೇಶಿಸಿದ ಎರಡನೇ ತಮಿಳು ಚಲನಚಿತ್ರವಾಗಿತ್ತು. ಸ್ಯಾಂಡಲ್ವುಡ್ ಹ್ಯಾಟ್ರಿಕ್ ಹೀರೊ ಶಿವರಾಜ್ಕುಮಾರ್ (Shiva Rajkumar) ಕೂಡ ಪ್ರಮುಖ ಪಾತ್ರವನ್ನು ನಿವರ್ಹಿಸಿದ್ದರು. ಇದೀಗ ಸಂದರ್ಶನವೊಂದರಲ್ಲಿ ಶಿವಣ್ಣ ನರಸಿಂಹ ಪಾತ್ರದ ಬಗ್ಗೆ ತಮ್ಮ ಮನದಾಳದ ಮಾತುಗಳನ್ನು ಹಂಚಿಕೊಂಡಿದ್ದಾರೆ.
ಈ ಚಿತ್ರದಲ್ಲಿ ಮೋಹನ್ಲಾಲ್, ಶಿವ ರಾಜ್ಕುಮಾರ್, ತಮನ್ನಾ ಭಾಟಿಯಾ, ಸುನಿಲ್, ಜಾಕಿ ಶ್ರಾಫ್, ಮಕರಂದ್ ದೇಶಪಾಂಡೆ, ಸೇರಿದಂತೆ ಅನೇಕ ತಾರೆಯರು ಕಾಣಿಸಿಕೊಂಡಿದ್ದಾರೆ. ಪ್ರತಿಯೊಂದು ಪಾತ್ರವೂ ಚಿತ್ರದಲ್ಲಿ ತಮ್ಮದೇ ಆದ ಛಾಪನ್ನು ಮೂಡಿಸಿದೆ. ನಟ ಶಿವ ರಾಜ್ಕುಮಾರ್ ಅವರು ಚಿತ್ರದಲ್ಲಿ ನರಸಿಂಹ ಪಾತ್ರದಲ್ಲಿ ತಮ್ಮ 8 ನಿಮಿಷಗಳ ಅತಿಥಿ ಪಾತ್ರವನ್ನು ಹೊಂದಿದ್ದರು. ಈ ಬಗ್ಗೆ ಶಿವಣ್ಣ ಮಾತನಾಡಿ ʻಜೈಲರ್ ಸಿನಿಮಾ ನನ್ನ ಬದುಕನ್ನೇ ಬದಲಿಸಿದೆ. ಕೇವಲ 8 ನಿಮಿಷಗಳ ಪಾತ್ರ, ಕೇವಲ ಭಾರತದಲ್ಲಿ ಮಾತ್ರವಲ್ಲದೆ ಅಮೆರಿಕ ಮತ್ತು ದುಬೈನಂತಹ ವಿದೇಶಗಳಲ್ಲಿಯೂ ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ಪಡೆಯುತ್ತಿರುವುದು ಆಶ್ಚರ್ಯ ತಂದಿದೆʼʼ ಎಂದು ಹೇಳಿಕೊಂಡಿದ್ದಾರೆ.
ಅಷ್ಟೇ ಅಲ್ಲದೇ ʻʻಜೈಲರ್ ನನ್ನ ಜೀವನವನ್ನು ಹೇಗೆ ಬದಲಿಸಿದೆ ಎಂದರೆ, ವಿಕ್ರಮ್ ಸಿನಿಮಾದಲ್ಲಿ ಸೂರ್ಯ ಅವರ ರೊಲೆಕ್ಸ್ ಪಾತ್ರದಂತೆ, ಜೈಲರ್ನಲ್ಲಿ ನರಸಿಂಹ ಪಾತ್ರ ಪ್ರೇಕ್ಷಕರ ಮನದಲ್ಲಿ ಉಳಿಯುವಂತೆ ಮಾಡಿದೆʼʼಎಂದರು. ಮಲಯಾಳಂನ ಹಿರಿಯ ನಟ ಮೋಹನ್ ಲಾಲ್ ಮತ್ತು ಜಾಕಿ ಶ್ರಾಫ್ ಕೂಡ ಈ ಸಿನಿಮಾದಲ್ಲಿ ಇದ್ದಾರೆ. ಸನ್ ಪಿಕ್ಚರ್ಸ್ ನಿರ್ಮಾಣ ಮಾಡಿದೆ.
ಇದನ್ನೂ ಓದಿ; Shiva Rajkumar: ಶಿವಣ್ಣ ಡೈಲಾಗ್ಗೆ ನಾನು ನಂದಿನಿ ಖ್ಯಾತಿಯ ʻವಿಕ್ಕಿʼ ಫುಲ್ ಶೇಕ್! ರೀಲ್ಸ್ ವೈರಲ್!
#Jailer is a life changing movie for me. Audience response for Narasimha character is similar to that of #Rolex @Suriya_offl sir from #Vikram – @NimmaShivanna
— Suresh balaji (@surbalutwt) October 11, 2023
Fans across world celebrate me where ever I go #SuperstarRajinikanth | @rajinikanth
pic.twitter.com/j82PZbGJzo
ಶಿವಣ್ಣನ ಕೈಯಲ್ಲಿವೆ ಹಲವು ಸಿನಿಮಾಗಳು
ನಿರ್ದೇಶಕ ಶ್ರೀನಿ ಅವರ ಘೋಸ್ಟ್ ಸಿನಿಮಾದಲ್ಲಿ ಶಿವಣ್ಣ ಅಬ್ಬರಿಸಲಿದ್ದಾರೆ. ಇದೇ ಅಕ್ಟೋಬರ್ 19 ರಂದು ಬಿಡುಗಡೆಯಾಗಲಿದೆ.ಜಯರಾಮ್, ಅನುಪಮ್ ಖೇರ್, ಪ್ರಶಾಂತ್ ನಾರಾಯಣನ್ ಸೇರಿದಂತೆ ಅನೇಕ ಪ್ರಮುಖ ಕಲಾವಿದರು ಇದ್ದಾರೆ. ಶಿವಣ್ಣ ಅವರು ಧನುಷ್ ಅವರ ಮುಂಬರುವ ಚಿತ್ರ ಕ್ಯಾಪ್ಟನ್ ಮಿಲ್ಲರ್ ಸಿನಿಮಾ ಭಾಗವಾಗಿದ್ದಾರೆ. ಅರುಣ್ ಮಾಥೇಶ್ವರನ್ ನಿರ್ದೇಶನದ ಈ ಸಿನಿಮಾ ಡಿಸೆಂಬರ್ 15ರಂದು ರಿಲೀಸ್ ಆಗಲಿದೆ.